twitter
    For Quick Alerts
    ALLOW NOTIFICATIONS  
    For Daily Alerts

    ಕೆಜಿಎಫ್ 2 ಕಲೆಕ್ಷನ್‌ನಲ್ಲಿ 400 ಕೋಟಿ ಏರಿಕೆ; 200 ಕೋಟಿ ಕ್ಲಬ್ ಸೇರಿದ ಜೇಮ್ಸ್, ವಿಕ್ರಾಂತ್ ರೋಣ! ಹೇಗೆ ಸಾಧ್ಯ?

    By ಫಿಲ್ಮಿಬೀಟ್ ಡೆಸ್ಕ್
    |
    KGF 2, James and Vikrant Rona final collection including Digital and Satellite rights

    ಈ ಹಿಂದೆ ಚಿತ್ರಗಳು ನೂರು ದಿನಗಳ ಪ್ರದರ್ಶನವನ್ನು ಕಂಡರೆ ಆ ಚಿತ್ರಗಳನ್ನು ಪರಿಪೂರ್ಣವಾಗಿ ಗೆದ್ದು ಬ್ಲಾಕ್‌ಬಸ್ಟರ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗೇನಿದ್ದರೂ ಚಿತ್ರ ಎಷ್ಟು ಗಳಿಸಿತು, ನೂರು ಕೋಟಿ ಕ್ಲಬ್ ಸೇರಿತಾ, ಇನ್ನೂರು ಕೋಟಿ ಗಳಿಸಿತಾ, ಬ್ರೇಕ್ ಈವೆನ್ ಆಯ್ತಾ ಎಂಬುದಷ್ಟೇ ಲೆಕ್ಕಾಚಾರ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುವ ಚಿತ್ರ ಈ ಅಂಶಗಳನ್ನು ಪೂರೈಸಿದರೆ ಆ ಚಿತ್ರ ಸೂಪರ್ ಬ್ಲಾಕ್‌ಬಸ್ಟರ್ ಎನಿಸಿಕೊಳ್ಳಲಿದೆ.

    ಇನ್ನು ಇವುಗಳ ಜತೆಗೆ ಚಿತ್ರಗಳ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು ಎಷ್ಟು ಕೋಟಿಗೆ ಮಾರಾಟವಾಯಿತು ಎಂಬುದೂ ಸಹ ಮುಖ್ಯ. ಪ್ರಸ್ತುತ ಓಟಿಟಿ ಕ್ರೇಜ್ ದೊಡ್ಡ ಮಟ್ಟದಲ್ಲಿರುವ ಕಾರಣ ಸ್ಟಾರ್ ನಟರ ಚಿತ್ರಗಳಿಗೆ ದುಬಾರಿ ಬೆಲೆಯ ಆಫರ್‌ಗಳು ಹುಡುಕಿಕೊಂಡು ಬಂದ ಸಾಕಷ್ಟು ಉದಾಹರಣೆಗಳಿವೆ. ಹೀಗೆ ಚಿತ್ರವೊಂದು ಎಷ್ಟು ದುಡ್ಡನ್ನು ನಿರ್ಮಾಪಕರ ಕೈ ಸೇರಿಸಿತು ಎಂಬುದೇ ಚಿತ್ರದ ಫಲಿತಾಂಶವನ್ನು ನಿರ್ಧರಿಸಲಿದೆ.

    ಹೀಗಾಗಿ ನಿರ್ಮಾಪಕರೂ ಸಹ ತಮ್ಮ ಚಿತ್ರ ಎಷ್ಟು ಮೊತ್ತಕ್ಕೆ ಓಟಿಟಿಗೆ ಮಾರಾಟವಾಯಿತು, ಚಿತ್ರದ ಸ್ಯಾಟಲೈಟ್ ಹಕ್ಕು ಎಷ್ಟು ಮೊತ್ತಕ್ಕೆ ಸೇಲ್ ಆಯ್ತು ಎಂಬ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ತಾರೆ. ಅದರ ಜತೆಗೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಗಳಿಸಿತು ಎಂಬುದನ್ನೂ ಸಹ ಕೆಲ ಚಿತ್ರತಂಡಗಳು ಬಹಿರಂಗವಾಗಿ ತಿಳಿಸಿದರೆ, ಇನ್ನೂ ಕೆಲ ಚಿತ್ರ ತಂಡಗಳು ಬಾಕ್ಸ್ ಆಫೀಸ್ ನಂಬರ್ ಹೇಳುವುದಿಲ್ಲ. ಆದರೆ ಅಂತರ್ಜಾಲದ ಯುಗದಲ್ಲಿ ಚಿತ್ರ ಇಷ್ಟೇ ಗಳಿಸಿದೆ ಎಂಬ ಲೆಕ್ಕಾಚಾರವನ್ನು ನಿಖರವಾಗಿ ತಿಳಿಸುವ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಇದ್ದು, ಮಾಹಿತಿ ಸಿನಿ ರಸಿಕರಿಗೆ ಸುಲಭವಾಗಿ ಲಭಿಸಲಿದೆ. ಸದ್ಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಕ್ರಾಂತಿ ಚಿತ್ರ ಎಷ್ಟು ಗಳಿಸಿತು ಎಂಬ ವಿಚಾರವಾಗಿ ಇದೇ ರೀತಿಯ ಗೊಂದಲಗಳು ಉಂಟಾದವು. ಚಿತ್ರ ನೂರು ಕೋಟಿ ಕ್ಲಬ್ ಸೇರಿತು ಎಂದು ಸುದ್ದಿಯಾದಾಗ ಹೇಗೆ ಸಾಧ್ಯ ಎಂದು ಹಲವರು ಪ್ರಶ್ನೆ ಹಾಕಿದ್ರು.

    ಡಿಜಿಟಲ್, ಸ್ಯಾಟಲೈಟ್ ಹಕ್ಕು ಸೇರಿ ನೂರು ಕೋಟಿ!

    ಡಿಜಿಟಲ್, ಸ್ಯಾಟಲೈಟ್ ಹಕ್ಕು ಸೇರಿ ನೂರು ಕೋಟಿ!

    ಈ ರೀತಿಯ ಪ್ರಶ್ನೆಗಳು ಹುಟ್ಟಿಕೊಂಡ ಬೆನ್ನಲ್ಲೇ ಚಿತ್ರದ ಓಟಿಟಿ, ಟಿವಿ ಪ್ರಸಾರದ ಹಕ್ಕುಗಳು ಮತ್ತು ಚಿತ್ರ ಚಿತ್ರಮಂದಿರಗಳಲ್ಲಿ ಮಾಡಿದ ಕಲೆಕ್ಷನ್ ಸೇರಿ ಒಟ್ಟು ನೂರು ಕೋಟಿ ಗಳಿಸಿದೆ, ಹೀಗೆ ನೂರು ಕೋಟಿ ಕ್ಲಬ್ ಅನ್ನು ಕ್ರಾಂತಿ ಚಿತ್ರ ಸೇರಿದೆ ಎಂಬ ಸ್ಪಷ್ಟನೆ ಹೊರಬಿತ್ತು. ಕ್ರಾಂತಿ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಇದರಲ್ಲಿ ನೂರು ಕೋಟಿ ಕ್ಲಬ್ ಸೇರಿದ ಕಾರಣಕ್ಕಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿತು.

    ಕೆಜಿಎಫ್ 2 ಗಳಿಕೆಗೆ 400+ ಕೋಟಿ ಸೇರ್ಪಡೆ

    ಕೆಜಿಎಫ್ 2 ಗಳಿಕೆಗೆ 400+ ಕೋಟಿ ಸೇರ್ಪಡೆ

    ಇನ್ನು ಕ್ರಾಂತಿ ಚಿತ್ರದ ಹಾಗೆ ಈ ಹಿಂದೆ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡಿದ್ದ ಕನ್ನಡ ಚಿತ್ರಗಳಿಗೆ ಅವುಗಳ ಓಟಿಟಿ ಹಾಗೂ ಡಿಜಿಟಲ್ ಹಕ್ಕುಗಳನ್ನು ಸೇರಿಸಿದರೆ ಅವುಗಳ ಮೊತ್ತ ಸಹ ಹೆಚ್ಚಲಿದೆ ಎಂಬ ಚರ್ಚೆ ಇದೀಗ ಆರಂಭವಾಗಿದ್ದು, ಈ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರದ ಗಳಿಕೆಯಲ್ಲಿಯೇ ಬರೋಬ್ಬರಿ 400 ಕೋಟಿ ಏರಿಕೆಯಾಗಲಿದೆ. ಹೌದು, ಬಾಕ್ಸ್ ಆಫೀಸ್‌ನಲ್ಲಿ 1250 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಓಟಿಟಿ ಹಕ್ಕು 320 ಕೋಟಿ ಹಾಗೂ ಎಲ್ಲಾ ಭಾಷೆಯ ಟಿವಿ ಹಕ್ಕು 100 ಕೋಟಿ ಇದ್ದು, ಇವುಗಳನ್ನೆಲ್ಲಾ ಸೇರಿಸಿದರೆ ಚಿತ್ರದ ಒಟ್ಟು ಗಳಿಕೆ 1670 ಕೋಟಿ ರೂಪಾಯಿಗಳಾಗಲಿದೆ.

    ಇನ್ನೂರು ಕೋಟಿ ಕ್ಲಬ್ ಸೇರಿದ ಜೇಮ್ಸ್, ವಿಕ್ರಾಂತ್ ರೋಣ!

    ಇನ್ನೂರು ಕೋಟಿ ಕ್ಲಬ್ ಸೇರಿದ ಜೇಮ್ಸ್, ವಿಕ್ರಾಂತ್ ರೋಣ!

    ಹೀಗೆ ಈ ವಿಧಾನದ ಪ್ರಕಾರ ಕೆಜಿಎಫ್ ಚಾಪ್ಟರ್ 2 ಚಿತ್ರದ ಗಳಿಕೆಯಲ್ಲಿ 400+ ಕೋಟಿ ಏರಿಕೆಯಾದರೆ, ಚಿತ್ರಮಂದಿರದಲ್ಲಿ 180 ಕೋಟಿ ಗಳಿಸಿದ್ದ ವಿಕ್ರಾಂತ್ ರೋಣ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು 24 ಕೋಟಿ ರೂಪಾಯಿಗಳಿದ್ದು, ಈ ಚಿತ್ರದ ಒಟ್ಟು ಗಳಿಕೆ 204 ಕೋಟಿ ರೂಪಾಯಿಗಳಾಗಲಿದೆ ಹಾಗೂ ಬಾಕ್ಸ್ ಆಫೀಸ್‌ನಲ್ಲಿ 159 ಕೋಟಿ ರೂಪಾಯಿ ಗಳಿಸಿದ್ದ ಜೇಮ್ಸ್ ಚಿತ್ರದ ಓಟಿಟಿ ಹಕ್ಕು 40 ಕೋಟಿ ಮತ್ತು ಸ್ಯಾಟಲೈಟ್ ಹಕ್ಕು 15 ಕೋಟಿ ಇದ್ದು, ಇವೆಲ್ಲಾ ಸೇರಿದರೆ ಜೇಮ್ಸ್ ಒಟ್ಟು ಗಳಿಕೆ 214 ಕೋಟಿಯಾಗಲಿದೆ. ಈ ಮೂಲಕ ವಿಕ್ರಾಂತ್ ರೋಣ ಹಾಗೂ ಜೇಮ್ಸ್ ಇನ್ನೂರು ಕೋಟಿ ಕಲೆಕ್ಷನ್ ಮಾಡಿದಂತಾಗಲಿದೆ.

    English summary
    KGF 2, James and Vikrant Rona final collection including Digital and Satellite rights. Take a look
    Friday, February 3, 2023, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X