»   » ಇನ್ನೂ ಮುಂದೆ ಸುದೀಪ್ ಹುಟ್ಟುಹಬ್ಬ ಆಚರಿಸದಿರಲು ಇದೇ ಕಾರಣ..!

ಇನ್ನೂ ಮುಂದೆ ಸುದೀಪ್ ಹುಟ್ಟುಹಬ್ಬ ಆಚರಿಸದಿರಲು ಇದೇ ಕಾರಣ..!

Posted By:
Subscribe to Filmibeat Kannada

ನಟ ಕಿಚ್ಚ ಸುದೀಪ್ ಇನ್ನು ಮುಂದೆ ತಮ್ಮ ಹುಟ್ಟುಹಬ್ಬವನ್ನು ಆಚರಿಸದೆ ಇರಲು ನಿರ್ಧಾರ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

ಸುದೀಪ್ ಜನ್ಮದಿನದ ನೆಪದಲ್ಲಿ ಹಣ ವಸೂಲಿ: ಅಪ್ಪಿ-ತಪ್ಪಿಯೂ ದುಡ್ಡು ಕೊಡ್ಬೇಡಿ.!

ಸ್ಟಾರ್ ನಟರ ಹುಟ್ಟುಹಬ್ಬ ಅಂದರೆ ಸಖತ್ ಜೋರಾಗಿ ಸೆಲೆಬ್ರೇಷನ್ ಮಾಡಲಾಗುತ್ತದೆ. ಇನ್ನೂ ಪ್ರತಿ ವರ್ಷ ಸುದೀಪ್ ಹುಟ್ಟುಹಬ್ಬ ಬಂತೂಂದ್ರೆ ಅವರ ಅಭಿಮಾನಿಗಳಿಗೆ ಹಬ್ಬದ ದಿನ ಇದ್ದ ಹಾಗೆ. ಆದರೆ ಇನ್ನೂ ಮುಂದೆ ಸುದೀಪ್ ಹುಟ್ಟುಹಬ್ಬದ ದಿನ ಅಭಿಮಾನಿಗಳ ಅದ್ದೂರಿ ಸಂಭ್ರಮಾಚರಣೆಗೆ ಬ್ರೇಕ್ ಬೀಳಲಿದೆ.

ಹುಟ್ಟುಹಬ್ಬ ಆಚರಣೆ ಬೇಡ ಎಂದಿರುವ ಸುದೀಪ್ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ಅದನ್ನ ತಪ್ಪದೇ ಓದಿರಿ...

ಸುದೀಪ್ ಸಂದೇಶ

''ಇಷ್ಟು ವರ್ಷಗಳ ಕಾಲ ನನ್ನ ಹುಟ್ಟುಹಬ್ಬವನ್ನು ನಿಮ್ಮ ಹುಟ್ಟುಹಬ್ಬದ ರೀತಿ ಎಲ್ಲ ಅಭಿಮಾನಿಗಳು ಆಚರಿಸುತ್ತಿದ್ದೀರಿ. ಅದಕ್ಕೆ ನಾನು ಕೃತಜ್ಞನಾಗಿದ್ದೇನೆ. ಎರಡು ದಶಕಕ್ಕೂ ಹೆಚ್ಚಿನ ಕಾಲ ನೀವು ನನ್ನ ಮೇಲೆ ತೋರಿಸಿದ ಪ್ರೀತಿಗೆ ಧನ್ಯವಾದ'' - ಸುದೀಪ್, ನಟ

ನಿಮ್ಮ ಹಣ

''ನೀವು ದುಡಿದ ಹಣವನ್ನು ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುತ್ತಿದ್ದೀರಿ. ಎಷ್ಟೋ ದೂರದಿಂದ ಬಂದು ಕೇಕ್, ಗಿಫ್ಟ್, ಮತ್ತು ನನ್ನ ಮನೆಯನ್ನು ಅಲಂಕಾರ ಮಾಡುವುದಕ್ಕೆ ನಿಮ್ಮ ಹಣವನ್ನು ಖರ್ಚು ಮಾಡುತ್ತಿದ್ದೀರಿ. ಇದನ್ನು ನಾನು ಗಮನಿಸಿದ್ದೇನೆ'' - ಸುದೀಪ್, ನಟ

ಅಗತ್ಯ ಇರುವವರಿಗೆ ನೀಡಿ

''ಹುಟ್ಟುಹಬ್ಬಕ್ಕಾಗಿ ಖರ್ಚು ಮಾಡುವ ಹಣವನ್ನು ಅಗತ್ಯ ಇರುವವರಿಗೆ ನೀಡಿ. ಒಂದು ಹೊತ್ತಿನ ಊಟ ಇಲ್ಲದವರಿಗೆ ಊಟಕ್ಕಾಗಿ ನಿಮ್ಮ ಹಣ ನೀಡಿ. ಯಾಕಂದ್ರೆ, ಹುಟ್ಟುಹಬ್ಬದ ಹಣ ಒಂದು ಮನೆ ಅಥವಾ ಒಬ್ಬರ ಜೀವನವನ್ನು ಕಾಪಾಡಬಹುದು'' - ಸುದೀಪ್, ನಟ

ಹುಟ್ಟುಹಬ್ಬ ಆಚರಿಸುವುದಿಲ್ಲ

''ಈ ರೀತಿ ಮಾಡುವುದೇ ನನಗೆ ನೀವು ನೀಡುವ ಉಡುಗೊರೆ. ಇದು ನಿಜವಾಗಿಯೂ ಹುಟ್ಟುಹಬ್ಬವನ್ನು ಆಚರಣೆ ಮಾಡುವ ರೀತಿ. ನಾನು ಇನ್ನೂ ಮುಂದೆ ಹುಟ್ಟುಹಬ್ಬವನ್ನು ಆಚರಿಸದೆ ಇರಲು ನಿರ್ಧಾರ ಮಾಡಿದ್ದು, ನಿಮಗೂ ನಾನು ಮನವಿ ಮಾಡುತ್ತಿದ್ದೇನೆ'' - ಸುದೀಪ್, ನಟ

ಅಭಿಮಾನಿಗಳ ಸಾಥ್

ಸುದೀಪ್ ಅವರ ಈ ಸಂದೇಶವನ್ನು ನೋಡಿದ ತಕ್ಷಣ ಅನೇಕ ಅಭಿಮಾನಿಗಳು ಅವರ ಮಾತಿನಂತೆ ನಡೆದುಕೊಳ್ಳುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.

English summary
Kiccha Sudeep has decided to Not to Celebrate His Birthday Anymore.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X