For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ 'ಟ್ವಿಟ್ಟರ್'ಗೆ ಬರಲು ಆ 'ಒಬ್ಬ' ನಟ ಕಾರಣ?

  By Bharath Kumar
  |

  ಕಿಚ್ಚ ಸುದೀಪ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಿದೆ. ಈ ಮೂಲಕ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡ ನಟ ಸುದೀಪ್ ಎನಿಸಿಕೊಂಡಿದ್ದಾರೆ.

  ಆದ್ರೆ, ಕೆಲ ವರ್ಷಗಳ ಹಿಂದೆ ಸುದೀಪ್ ಗೆ ಟ್ವಿಟ್ಟರ್ ಅಂದ್ರೆ ಏನು ಅಂತಾನೆ ಗೊತ್ತಿರಲಿಲ್ಲ. ಟ್ವಿಟ್ಟರ್ ಬಗ್ಗೆ ಒಂದಿಷ್ಟು ಕೂಡ ಪರಿಚಯವಿರಲಿಲ್ಲ. ಅಂತಹ ಸಂದರ್ಭದಲ್ಲಿ ಕಿಚ್ಚನಿಗೆ ಟ್ವಿಟ್ಟರ್ ಬಗ್ಗೆ ಹೇಳಿ ಕೊಟ್ಟಿದ್ದು ಆ ಒಬ್ಬ ನಟ. ಅಲ್ಲಿಂದ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಸುದೀಪ್, ಇಂದು ಮಿಲಿಯನೇರ್ ಆಗಿದ್ದಾರೆ.

  ಅಷ್ಟಕ್ಕೂ, ಸುದೀಪ್ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದು ಹೇಗೆ? ಕಿಚ್ಚನಿಗೆ ಟ್ವಿಟ್ಟರ್ ಬಗ್ಗೆ ಪಾಠ ಹೇಳಿದ ಆ ನಟ ಯಾರು? ಎಂದು ತಿಳಿದುಕೊಳ್ಳಲು ಮುಂದೆ ಓದಿ.....

  ಅಂದು ಮುಂಬೈನಲ್ಲಿ ಶೂಟಿಂಗ್

  ಅಂದು ಮುಂಬೈನಲ್ಲಿ ಶೂಟಿಂಗ್

  ಒಂದು ಚಿತ್ರದ ಚಿತ್ರೀಕರಣಕ್ಕಾಗಿ ಸುದೀಪ್ ಮುಂಬೈನಲ್ಲಿದ್ದರು. ಆಗ ಸುದೀಪ್ ಜೊತೆ ಅವರ ಗೆಳೆಯರೊಬ್ಬರು ಇದ್ದರು. ಅವರ ಕಾರಿನಲ್ಲೇ ಹೋಟೆಲ್ ಗೆ ಸುದೀಪ್ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಈ ಟ್ವಿಟ್ಟರ್ ಬಗ್ಗೆ ಚರ್ಚೆಯಾಯಿತು.

  ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'

  ನಿನ್ನ ಟ್ವಿಟ್ಟರ್ ಖಾತೆ ಏನು..?

  ನಿನ್ನ ಟ್ವಿಟ್ಟರ್ ಖಾತೆ ಏನು..?

  ಕಾರಿನಲ್ಲಿ ಸುದೀಪ್ ಅವರ ಗೆಳೆಯ ತನ್ನ ಮೊಬೈಲ್ ನಲ್ಲಿ ತುಂಬ ಬಿಜಿಯಾಗಿದ್ದರು. ಏನೋ ಗಂಭೀರವಾದ ವಿಷಯದ ಬಗ್ಗೆ ಹುಡುಕುತ್ತಿರಬಹುದು ಎಂದು ಸುದೀಪ್ ಸುಮ್ಮನಿದ್ದರು. ಆದ್ರೆ, ಕೆಲ ಸಮಯದ ನಂತರ ಆ ಗೆಳೆಯ ಸುದೀಪ್ ಅವರನ್ನ ಕೇಳಿಯೇ ಬಿಟ್ಟರು. ''ನಿನ್ನ ಟ್ವಿಟ್ಟರ್ ಖಾತೆ ಏನು'' ಎಂದು.....

  ಒಂದು ಕ್ಷಣ ಚಿಕಿತರಾದ ಸುದೀಪ್

  ಒಂದು ಕ್ಷಣ ಚಿಕಿತರಾದ ಸುದೀಪ್

  ''ನಿನ್ನ ಟ್ವಿಟ್ಟರ್ ಖಾತೆ ಏನು''....? ಎಂದು ಗೆಳೆಯ ಕೇಳುತ್ತಿದ್ದಂತೆ ಸುದೀಪ್ ಚಿಕಿತರಾದರಂತೆ. ಏನಿದು ಟ್ವಿಟ್ಟರ್ ಎಂದು ಯೋಚಿಸಿತ್ತಾ ಕೂತರಂತೆ. ಕೊನೆಗೂ ''ಟ್ವಿಟ್ಟರ್ ಖಾತೆನಾ...! ಹಾಗಂದರೇನು?'' ಎಂದು ಗೆಳೆಯನನ್ನ ಸುದೀಪ್ ಕೇಳಿ ಬಿಟ್ಟರಂತೆ.

  ಸುದೀಪ್ ಗೆ ಟ್ವಿಟ್ಟರ್ ಬಗ್ಗೆ ತಿಳಿಸಿದ ಗೆಳೆಯ

  ಸುದೀಪ್ ಗೆ ಟ್ವಿಟ್ಟರ್ ಬಗ್ಗೆ ತಿಳಿಸಿದ ಗೆಳೆಯ

  ಸುದೀಪ್ ಅವರಿಗೆ ಟ್ವಿಟ್ಟರ್ ಬಗ್ಗೆ ಗೊತ್ತಿಲ್ಲದ ವಿಚಾರ ತಿಳಿದ ಆ ಗೆಳೆಯ, ಸುದೀಪ್ ಅವರಿಗೆ ಟ್ವಿಟ್ಟರ್ ಬಗ್ಗೆ ಹೇಳಿಕೊಟ್ಟರಂತೆ. ಟ್ವಿಟ್ಟರ್ ನಿಂದ ಹೇಗೆ ಸಂಪರ್ಕದಲ್ಲಿರಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟರಂತೆ. ಇಲ್ಲಿಂದ ಸುದೀಪ್ ಅವರು ಟ್ವಿಟ್ಟರ್ ಲೋಕಕ್ಕೆ ಪರಿಚಯವಾದರು.

  ಸುದೀಪ್ ಗೆ ಟ್ವಿಟ್ಟರ್ ಹೇಳಿಕೊಟ್ಟ ಆ ಗೆಳೆಯ?

  ಸುದೀಪ್ ಗೆ ಟ್ವಿಟ್ಟರ್ ಹೇಳಿಕೊಟ್ಟ ಆ ಗೆಳೆಯ?

  ಅಂದ್ಹಾಗೆ, ಸುದೀಪ್ ಅವರಿಗೆ ಟ್ವಿಟ್ಟರ್ ಬಗ್ಗೆ ತಿಳಿಸಿಕೊಟ್ಟ ಆ ಗೆಳೆಯ ಬಾಲಿವುಡ್ ನ ಸ್ಟಾರ್ ನಟ ರಿತೇಶ್ ದೇಶ್ ಮುಖ್.

  ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಗೆ 8 ಲಕ್ಷ ಫಾಲೋವರ್ಸ್ .!

  ಧನ್ಯವಾದ ಹೇಳಿದ ಸುದೀಪ್

  ಧನ್ಯವಾದ ಹೇಳಿದ ಸುದೀಪ್

  ಸುದೀಪ್ ಅವರ ಫಾಲೋವರ್ಸ್ ಒಂದು ಮಿಲಿಯನ್ ದಾಟುತ್ತಿದ್ದಂತೆ, ತನಗೆ ಟ್ವಿಟ್ಟರ್ ಬಗ್ಗೆ ಪರಿಚಯ ಮಾಡಿಕೊಟ್ಟ ರಿತೇಶ್ ದೇಶ್ ಮುಖ್ ಅವರಿಗೆ ವಿಶೇಷವಾದ ಧನ್ಯವಾದಗಳನ್ನ ತಿಳಿಸಿದ್ದಾರೆ. ಸುದೀಪ್ ಅವರ ಧನ್ಯವಾದಕ್ಕೆ ರಿತೇಶ್ ಕೂಡ ಪ್ರತಿಕ್ರಿಯಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

  ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!

  English summary
  Kannada actor Kiccha Sudeep Crossed 1 million followers in his twitter account. Sudeep shares his 1st tweet experience on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X