For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ 'ನಾಗರಹಾವು' ಚಿತ್ರವನ್ನ ಯಾವುದಕ್ಕೆ ಹೋಲಿಸಿದ್ರು.?

  By Bharath Kumar
  |
  Nagarahaavu 2018 : ನಾಗರಹಾವು ಸಿನಿಮಾ ಬಗ್ಗೆ ಕಿಚ್ಚನ ಮಾತು...!! | FIlmibeat Kannada

  ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ ನಾಗರಹಾವು ಹೊಸ ತಂತ್ರಜ್ಞಾನದಲ್ಲಿ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಯಾವ ಸ್ಟಾರ್ ಗಳ ಸಿನಿಮಾಗೂ ಕಮ್ಮಿಯಿಲ್ಲ ಎಂಬ 45 ವರ್ಷದ ಎವರ್ ಗ್ರೀನ್ ಸಿನಿಮಾಗೆ ಮೊದಲ ದಿನ ಭರ್ಜರಿ ಆರಂಭ ಸಿಕ್ಕಿದೆ.

  ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಅಂದಿನ ಕಾಲದಲ್ಲಿ ಬಹುದೊಡ್ಡ ಹಿಟ್ ಹಾಗೂ ಅನೇಕ ಕಲಾವಿದರನ್ನ ಸೂಪರ್ ಸ್ಟಾರ್ ಗಳಾಗಿ ಮಾಡಿದ ಚಿತ್ರವಿದು.

  ಇಂತಹ ಮಹನ್ನೋತ ಚಿತ್ರದ ಬಗ್ಗೆ ಶಿವರಾಜ್ ಕುಮಾರ್, ಉಪೇಂದ್ರ, ಯಶ್, ಮಾತನಾಡಿದ್ದರು. ಈಗ ಕಿಚ್ಚ ಸುದೀಪ್ ಕೂಡ ವಿಷ್ಣುದಾದಾನ ನಾಗರಹಾವು ಬಗ್ಗೆ ತಮ್ಮ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಸುದೀಪ್ ಈ ಸಿನಿಮಾದ ಬಗ್ಗೆ ಏನಂದ್ರು. ಯಾವುದಕ್ಕೆ ಹೋಲಿಸಿದ್ರು ಎಂಬುದು ತಿಳಿಯಲು ಮುಂದೆ ಓದಿ...

  ನಾಗರಹಾವು ಅಂದ್ರೆ ಮಹಾನ್ ವ್ಯಕ್ತಿ

  ನಾಗರಹಾವು ಅಂದ್ರೆ ಮಹಾನ್ ವ್ಯಕ್ತಿ

  ''ನಾಗರಹಾವು ಅಂದಾಕ್ಷಣ ನನಗೆ ಒಬ್ಬ ಮಹಾನ್ ವ್ಯಕ್ತಿ ನೆನಪಾಗ್ತಾರೆ. ಆ ವ್ಯಕ್ತಿಯ ಹೆಸರು ಹೇಳೋದೆ ಬೇಡ. ಆ ಇತಿಹಾಸ ಸೃಷ್ಟಿಯಾದಾಗ ನಾವಿನ್ನು ಹುಟ್ಟಿರಲಿಲ್ಲ.ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನೋಡ್ತಿದ್ರಿ. ಆಗ ತೆರೆ ಮೇಲೆ ವಿಷ್ಣು ಸರ್ ಪರಿಚಯ ಆಯ್ತು. ಆಮೇಲೆ ಅವರ ಬಗ್ಗೆ ಕುತೂಹಲ ಮೂಡಿತು. ನಂತರ ನಾಗರಹಾವು ಸಿನಿಮಾ ನೋಡಿದ್ದು '' - ಸುದೀಪ್

  'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?

  ಈಗ ನೆನಸಿಕೊಂಡ್ರು ಅಚ್ಚರಿಯಾಗುತ್ತೆ

  ಈಗ ನೆನಸಿಕೊಂಡ್ರು ಅಚ್ಚರಿಯಾಗುತ್ತೆ

  ''ಪುಟ್ಟಣ್ಣ ಕಣಗಾಲ್ ಅವರ ಚಿತ್ರಕಥೆಯಲ್ಲಿ ಹುಟ್ಟಿರುವ ಪಾತ್ರವಿದು. ಯಾವ ಧೈರ್ಯದಿಂದ ಅಂದು ಒಬ್ಬ ಹೊಸ ಹುಡುಗನಿಗೆ ಅವಕಾಶ ಕೊಟ್ರು, ಈ ಪಾತ್ರ ನಿಭಾಯಿಸಲು ಆ ಹೊಸ ಹುಡುಗನಿಗೆ ಎಷ್ಟು ತೂಕವಿತ್ತು ಅನ್ನೋದು ಈಗ ನೆನಸಿಕೊಂಡ್ರೆ ಅಚ್ಚರಿಯಾಗುತ್ತೆ'' - ಸುದೀಪ್

  'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್

  ರಾಮಾಯಣ, ಮಹಾಭಾರತದಂತೆ ಶ್ರೇಷ್ಠ

  ರಾಮಾಯಣ, ಮಹಾಭಾರತದಂತೆ ಶ್ರೇಷ್ಠ

  ''ನಮ್ಮ ಚಿತ್ರರಂಗದಲ್ಲೊಂದು ದೊಡ್ಡ ಇತಿಹಾಸ. ಅದನ್ನ ರೀ-ಪ್ಲೇಸ್ ಮಾಡ್ತೀವಿ ಅಂದ್ರೆ ಆಗಲ್ಲ, ಅದನ್ನ ಅಳಿಸ್ತೀವಿ ಅಂದ್ರೆ ಆಗಲ್ಲ. ಅದನ್ನ ಏನೂ ಮಾಡೋಕೆ ಆಗಲ್ಲ. ಸುಮ್ಮನೆ ನೋಡ್ಬೇಕು, ಬಿಡ್ಬೇಕು ಮನೆಗೆ ಹೋಗ್ಬೇಕು. ರಾಮಾಯಣ, ಮಹಾಭಾರತ ಎಷ್ಟು ಶ್ರೇಷ್ಠನೋ ಇವತ್ತಿಗೂ ಆ ಸ್ಕ್ರಿಪ್ಟ್ ಅಷ್ಟು ಶ್ರೇಷ್ಠ ಅನಿಸುತ್ತೆ'' - ಸುದೀಪ್

  'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.?'ನಾಗರಹಾವು' ಚಿತ್ರದಲ್ಲಿ ಉಪ್ಪಿಗೆ ಹೆಚ್ಚು ಕಾಡುವ ದೃಶ್ಯ ಯಾವುದು.?

  ಈ ಚಿತ್ರದಿಂದ ಲೆಜೆಂಡ್ ಹುಟ್ಟಿದ್ರು

  ಈ ಚಿತ್ರದಿಂದ ಲೆಜೆಂಡ್ ಹುಟ್ಟಿದ್ರು

  ''ಒಬ್ಬ ಅಂಬರೀಶ್ ಅವರನ್ನ ಹುಟ್ಟಿಹಾಕ್ತು, ವಿಷ್ಣು ಸರ್ ಅವರನ್ನ ಎಲ್ಲಿಗೋ ಕರೆದುಕೊಂಡು ಹೋಯಿತು. ಪುಟ್ಟಣ್ಣ ಕಣಗಾಲ್ ಅವರ ದಿಲ್ ಧೈರ್ಯ ಏನಂತ ತೋರಿಸಿತು. ಕೆ.ಎಸ್ ಅಶ್ವತ್ಥ್ ಕೊನೆಯಲ್ಲಿ ನೋಡಿದ್ರೆ ಅವರು ಹೀರೋ ಆಗೋದ್ರು'' - ಸುದೀಪ್.

  'ನಾಗರಹಾವು' ಚಿತ್ರದ ಮಾರ್ಗರೇಟ್ ಯಾರು.? ಆಕೆಯ ಬಣ್ಣದ ಬದುಕಿನ ಅಧ್ಯಾಯ ಇಲ್ಲಿದೆ..'ನಾಗರಹಾವು' ಚಿತ್ರದ ಮಾರ್ಗರೇಟ್ ಯಾರು.? ಆಕೆಯ ಬಣ್ಣದ ಬದುಕಿನ ಅಧ್ಯಾಯ ಇಲ್ಲಿದೆ..

  ನನ್ನ ಕುಟುಂದ ಜೊತೆ ನೋಡ್ತೀನಿ

  ನನ್ನ ಕುಟುಂದ ಜೊತೆ ನೋಡ್ತೀನಿ

  ''ಪ್ರತಿಯೊಬ್ಬರ ಜೀವನದಲ್ಲೂ ಆ ತರ ಒಬ್ರು ಮೇಷ್ಟ್ರ ಇದ್ರೆ ಚೆಂದ. ಯಾವ ಸಿನಿಮಾದಲ್ಲೂ ಶಿಷ್ಯ ಮತ್ತು ಮೇಷ್ಟ್ರು ಸಂಬಂಧವನ್ನ ಈ ಮಟ್ಟಕ್ಕೆ ಕೈಹಾಕಿಲಿಲ್ಲ. ನನ್ನ ಕುಟುಂದವರ ಜೊತೆ ಇನ್ನೊಂದು ಈ ಸಿನಿಮಾ ನೋಡೋಕೆ ಖುಷಿಯಾಗ್ತಿದೆ.'' - ಸುದೀಪ್

  English summary
  Kannada actor Kiccha Sudeep spoke about dr vishnuvardhan's first movie 'nagarahavu'. the movie re released today (july 20th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X