»   » 'ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!

'ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!

Posted By:
Subscribe to Filmibeat Kannada

ಕಳೆದ ಶುಕ್ರವಾರ ಬಿಡುಗಡೆ ಆಗಬೇಕಿದ್ದ ಮೂರು ಸಿನಿಮಾಗಳು 'ಸೆನ್ಸಾರ್ ಪ್ರಾಬ್ಲಂ'ನಿಂದಾಗಿ ಪೋಸ್ಟ್ ಪೋನ್ ಆಯ್ತು. ಹೀಗಾಗಿ, ಬರುವ ವಾರಕ್ಕೆ ನಿಗದಿ ಆಗಿರುವ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಬಿಡುಗಡೆ ಆಗುತ್ತೋ, ಇಲ್ವೋ ಎನ್ನುವ ಅನುಮಾನ ಅನೇಕರಿಗೆ ಕಾಡಿದ್ದಂತೂ ಸುಳ್ಳಲ್ಲ. ಹೀಗಾಗಿಯೇ, ಈ ಡೌಟ್ ಗೆ ನಿರ್ದೇಶಕ ಕೃಷ್ಣ ಕ್ಲಾರಿಟಿ ಕೊಟ್ಟಿದ್ದಾರೆ.

'ಹೆಬ್ಬುಲಿ' ಬೇಟೆ 23 ರಿಂದ...

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾ ಫೆಬ್ರವರಿ 23 ರಂದೇ ಬಿಡುಗಡೆ ಆಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ. ['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]


ಸೆನ್ಸಾರ್ ಆಗಿದೆ.!

'ಹೆಬ್ಬುಲಿ' ಚಿತ್ರಕ್ಕೆ 'ಸೆನ್ಸಾರ್ ಪ್ರಾಬ್ಲಂ' ಇಲ್ಲ. ಈಗಾಗಲೇ ಸೆನ್ಸಾರ್ ಅಂಗಳದಿಂದ 'ಹೆಬ್ಬುಲಿ' ಪಾಸ್ ಆಗಿದ್ದು, ಚಿತ್ರಕ್ಕೆ U/A ಸರ್ಟಿಫಿಕೇಟ್ ಸಿಕ್ಕಿದೆ.[ಕನ್ನಡದಲ್ಲಿ ಹಿಂದೆಂದೂ ಕಂಡಿಲ್ಲದ ಬಿಗ್ ಓಪನ್ನಿಂಗ್ ಪಡೆಯಲಿದೆ ಕಿಚ್ಚನ 'ಹೆಬ್ಬುಲಿ'!]


ಕತ್ರಿ ಕೆಲಸ ಇಲ್ಲವೇ ಇಲ್ಲ.!

'ಹೆಬ್ಬುಲಿ' ಚಿತ್ರಕ್ಕೆ ಸೆನ್ಸಾರ್ ಅಂಗಳದಿಂದ 'ಕ್ಲೀನ್ ಚಿಟ್' ಸಿಕ್ಕಿದೆ. ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ನೀಡಿಲ್ಲ ಎಂದು ನಿರ್ದೇಶಕ ಕೃಷ್ಣ ಸ್ಪಷ್ಟ ಪಡಿಸಿದ್ದಾರೆ.['ಸುಂದರಿ' ಹಾಡಿನಲ್ಲಿ ಕಿಚ್ಚನ ಭರತನಾಟ್ಯ ಮನಮೋಹಕ]


'ಆರ್ಮಿ' ಆಫೀಸರ್ ಪಾತ್ರದಲ್ಲಿ ಕಿಚ್ಚ ಸುದೀಪ್

ಮೊಟ್ಟ ಮೊದಲ ಬಾರಿಗೆ ಆರ್ಮಿ ಆಫೀಸರ್ ಗೆಟಪ್ ನಲ್ಲಿ ಸುದೀಪ್ ಕಾಣಿಸಿಕೊಂಡಿರುವ ಸಿನಿಮಾ 'ಹೆಬ್ಬುಲಿ'. ಬಹುಭಾಷಾ ನಟಿ ಅಮಲಾ ಪೌಲ್ ಚೊಚ್ಚಲ ಬಾರಿ ಕನ್ನಡ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿರುವುದು ಕೂಡ ಈ ಚಿತ್ರದಲ್ಲಿಯೇ. ಹಲವು ವಿಶೇಷತೆಗಳಿಂದ ಸದ್ದು-ಸುದ್ದಿ ಮಾಡುತ್ತಿರುವ 'ಹೆಬ್ಬುಲಿ' ಇದೇ ಗುರುವಾರ ನಿಮ್ಮ ಮುಂದೆ ಬರಲಿದೆ.['ಹೆಬ್ಬುಲಿ' ಟೈಟಲ್ ವಿಡಿಯೋ ಸಾಂಗ್ ಗೆ ಇಷ್ಟೊಂದು ಕ್ರೇಜ್?]


English summary
Kiccha Sudeep starrer 'Hebbuli' got U/A certificate from Censor Board and is releasing on February 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada