For Quick Alerts
  ALLOW NOTIFICATIONS  
  For Daily Alerts

  'ಆಕ್ಟ್ 1978' ಸಿನಿಮಾ ನೋಡಿದ ಕಿಚ್ಚ ಸುದೀಪ್ ಏನಂದ್ರು?

  |

  ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದ ಆಕ್ಟ್ 1978 ಸಿನಿಮಾ ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಲಾಕ್‌ಡೌನ್ ನಂತರ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ ಇದಾಗಿದೆ.

  ಮಲ್ಟಿಪ್ಲೆಕ್ಟ್ ಮತ್ತು ಸಿಂಗಲ್ ಸ್ಕ್ರೀನ್ ಸೇರಿ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ 'ಆಕ್ಟ್ 1978' ಸಿನಿಮಾ ನವೆಂಬರ್ 20 ರಿಂದ ಪ್ರದರ್ಶನವಾಗಲಿದೆ. ಏಳೆಂಟು ತಿಂಗಳ ಬಳಿಕ ಚಿತ್ರಮಂದಿರಕ್ಕೆ ಬರ್ತಿರುವ ಚಿತ್ರಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಬೆಂಬಲವಾಗಿ ನಿಂತಿದ್ದು, ಕಿಚ್ಚ ಸುದೀಪ್ ರಿಲೀಸ್‌ಗೂ ಮೊದಲೇ ಸಿನಿಮಾ ವೀಕ್ಷಿಸಿದ್ದಾರೆ. ಏನಂದ್ರು? ಮುಂದೆ ಓದಿ....

  'ಆಕ್ಟ್ 1978' ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ'ಆಕ್ಟ್ 1978' ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

  ಅದ್ಭುತ ಪ್ರಯತ್ನ ಎಂದ ಸುದೀಪ್

  ಅದ್ಭುತ ಪ್ರಯತ್ನ ಎಂದ ಸುದೀಪ್

  ನವೆಂಬರ್ 20 ರಂದು ಅಧಿಕೃತವಾಗಿ ಚಿತ್ರಮಂದಿರದಲ್ಲಿ ಆಕ್ಟ್ 1978 ಸಿನಿಮಾ ತೆರೆಕಾಣುತ್ತಿದೆ. ಇದಕ್ಕೂ ಮುಂಚೆಯೇ ಸುದೀಪ್ ಈ ಸಿನಿಮಾ ನೋಡಿದ್ದು ಮೆಚ್ಚಿಕೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಸುದೀಪ್ ''ಚಿತ್ರವನ್ನು ನೋಡಿದೆ,,, ಅದ್ಭುತ ಪ್ರಯತ್ನ ಮತ್ತು ಎಲ್ಲರದ್ದು ಅದ್ಭುತ ನಟನೆ. ಬಿಡುಗಡೆಗೆ ನನ್ನ ಶುಭಾಶಯಗಳು'' ಎಂದಿದ್ದಾರೆ.

  ಮೊದಲ ಚಿತ್ರ ಎನ್ನುವುದೇ ವಿಶೇಷತೆ

  ಮೊದಲ ಚಿತ್ರ ಎನ್ನುವುದೇ ವಿಶೇಷತೆ

  ಲಾಕ್‌ಡೌನ್ ಆದ್ಮೇಲೆ ಚಿತ್ರಮಂದಿರಗಳಿಗೆ ಅವಕಾಶ ಕೊಟ್ಟರೂ ಯಾವ ನಿರ್ಮಾಪಕರು ಸಿನಿಮಾ ರಿಲೀಸ್ ಮಾಡಲು ಮುಂದಾಗಿಲಿಲ್ಲ. ಪ್ರೇಕ್ಷಕರ ಕೊರತೆ ಎದುರಾಗಬಹುದು ಎಂಬ ಆತಂಕದಿಂದ ಸ್ಟಾರ್ ನಟರು ಸಹ ಮುಂದೆ ಬರಲಿಲ್ಲ. ಇದೀಗ, ಆಕ್ಟ್ 1978 ಚಿತ್ರ ಮೊದಲು ರಿಲೀಸ್ ಆಗುತ್ತಿದ್ದು, ಇಡೀ ಸ್ಯಾಂಡಲ್ ವುಡ್ ಬೆಂಬಲವಾಗಿ ನಿಂತಿದೆ.

  ಆಕ್ಟ್ 1978: ಕೇವಲ ಮನರಂಜನೆಯಲ್ಲ, ಕಾನೂನಿನ ತಿಳುವಳಿಕೆಆಕ್ಟ್ 1978: ಕೇವಲ ಮನರಂಜನೆಯಲ್ಲ, ಕಾನೂನಿನ ತಿಳುವಳಿಕೆ

  ಅದ್ಧೂರಿಯಾಗಿ ಸ್ವಾಗತಿಸಿ

  ಅದ್ಧೂರಿಯಾಗಿ ಸ್ವಾಗತಿಸಿ

  ನಿರ್ದೇಶಕ ಪವನ್ ಒಡೆಯರ್ ಸಹ ಆಕ್ಟ್ 1978 ಸಿನಿಮಾದ ಕುರಿತು ಟ್ವೀಟ್ ಮಾಡಿದ್ದು, ''ಚಿತ್ರಮಂದಿರದಲ್ಲಿ ಸಿನಿಮಾವನ್ನು ಸಂಭ್ರಮಿಸೋಣ, ಕೊರೊನಾ ಲಾಕ್‌ಡೌನ್ ನಂತರ ಬರುತ್ತಿರುವ ಮೊದಲ ಚಿತ್ರಕ್ಕೆ ಅದ್ಧೂರಿ ಸ್ವಾಗತ ನೀಡೋಣ'' ಎಂದು ಶುಭಕೋರಿದ್ದಾರೆ.

  Act1978 : ಅಲೆದು ಅಲೆದು ಸಾಕಾಗಿ ಸರ್ಕಾರಿ ಕಛೇರಿಗೆ ಹಾವು ತಂದು ಬಿಟ್ಟಿದ್ರು | Filmibeat Kannada
  ಥ್ರಿಲ್ಲರ್ ಸಿನಿಮಾ

  ಥ್ರಿಲ್ಲರ್ ಸಿನಿಮಾ

  ಹರಿವು, ನಾತಿಚರಾಮಿ ಸಿನಿಮಾಗಳ ಬಳಿಕ ಮಂಸೋರೆ ಮಾಡಿರುವ ಚಿತ್ರ ಇದಾಗಿದ್ದು, ಸಹಜವಾಗಿ ಕುತೂಹಲ ಕೆರಳಿಸಿದೆ. ನಟಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ತಾರಬಳಗದಲ್ಲಿದ್ದಾರೆ. ದೇವರಾಜ್ ಆರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

  English summary
  Kannada actor Kiccha Sudeep watched kannada Movie 'Act 1978' before theatrical release. the movie directed by mansore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X