ರೈಲ್ವೇ ಸ್ಟೇಷನಲ್ಲಿ ಅತ್ತೆ ಮುಂದೆ ಕಣ್ಣೀರಿಟ್ಟ ಸುದೀಪ್!
ಅಭಿನಯ ಚಕ್ರವರ್ತಿ ಸುದೀಪ್ ಅವರು ಇದೀಗ ಮತ್ತೊಂದು ರೀಮೇಕ್ ಚಿತ್ರದಲ್ಲಿ ಜಿಜಿಯಾಗಿದ್ದಾರೆ. ತೆಲುಗಿನ ಸೂಪರ್ ಡೂಪರ್ ಹಿಟ್ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಕನ್ನಡ ರೀಮೇಕ್ 'ರನ್ನ' ಶೂಟಿಂಗ್ ಭರದಿಂದ ಸಾಗುತ್ತಿದೆ.
ಈ ಚಿತ್ರಕ್ಕೆ ಸಂಬಂಧಿಸಿದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಇತ್ತೀಚೆಗೆ ಚಿತ್ರೀಕರಿಸಿಕೊಳ್ಳಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಅತ್ತೆಯೊಂದಿಗೆ ನಡೆಯುವ ಸನ್ನಿವೇಶವದು. ಚಿತ್ರದ ನಿರ್ಣಾಯಕ ಘಟ್ಟದಲ್ಲಿ ಬರುವ ಸನ್ನಿವೇಶ. ಸೋದರತ್ತೆ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಧುಬಾಲಾ ಅವರ ತೊಡೆಯ ಮೇಲೆ ತಲೆಯಿಟ್ಟು ಕಣ್ಣೀರುಡುವ ದೃಶ್ಯವನ್ನು ಸೆರೆಹಿಡಿಯಲಾಯಿತು. [ಕಿಚ್ಚ ಸುದೀಪ್ 'ರನ್ನ' ಶೀರ್ಷಿಕೆ ಅಂತರಾರ್ಥ ಏನು?]

ರನ್ನ ಚಿತ್ರಕ್ಕೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದು ಹರಿಪ್ರಿಯಾ ಹಾಗೂ ರಚಿತಾ ರಾಮ್ ಇಬ್ಬರು ನಾಯಕಿಯರು. ಈಗಾಗಲೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಸುದೀಪ್ ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದೆ.
"ನಾನೊಂಥರಾ ತ್ರಿಡಿ ಪಿಕ್ಚರ್ ಇದ್ದಾಗೆ. ಹತ್ತಿರದಿಂದ ನೋಡಿದರೂ ದೂರದಿಂದ ನೋಡಿದರೂ ಮಂಜು ಮಂಜಾಗೇ ಕಾಣಿಸ್ತೀನಿ. ತಾಳ್ಮೆ ಎಂಬ ಕನ್ನಡಕ ಹಾಕಿಕೊಂಡು ಕರೆಕ್ಟಗಾಗಿ ನೋಡಿದರೆ ಮಾತ್ರ ಈ ಆರಡಿ ಕಟೌಟ್ ಗೆ ಒಂದು ಕ್ಲಾರಿಟಿ ಸಿಗೋದು" ಎಂಬ ಡೈಲಾಗ್ ಮೋಷನ್ ಪೋಸ್ಟರ್ ನ ಪ್ರಮುಖ ಆಕರ್ಷಣೆಯಾಗಿತ್ತು.


Click it and Unblock the Notifications











