ಕಿಚ್ಚ ಸುದೀಪ್ ಅವರಿಂದ ಕೇಸ್ ರೀ ಓಪನ್
ಕಿಚ್ಚ ಸುದೀಪ್ ಆ ಕೇಸ್ ನ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ರು. ಅದು ಈಗ ರೀ ಓಪನ್ ಆಗ್ತಾ ಇದೆ. ಅದೇ ಕೇಸ್ ನಂ18/9. ಅವತ್ತು ರೇಣುಕಾಂಬ ಸ್ಟುಡಿಯೋದಲ್ಲಿ ಕೇಸ್ ನಂ 18/9 ಸಿನಿಮಾ ನೋಡಿದ್ದ ಸುದೀಪ್ ಭಾವುಕರಾಗಿದ್ದರು.
ಸಿನಿಮಾ ಇಷ್ಟು ಚೆನ್ನಾಗಿದೆ. ನಾನಂತೂ ಫ್ಯಾಮಿಲಿ ಸಮೇತ ಸಿನಿಮಾ ನೋಡ್ತೀನಿ ಅಂದಿದ್ರು. ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಸಿಕ್ಕಿ ಈ ಸಿನಿಮಾ ಎಲ್ಲೋ ಕಳೆದುಹೋಯ್ತು ಅನ್ನಿಸುತ್ತೆ ಅನ್ನೋ ಜೊತೆಗೆ ಈ ಒಂದನ್ನು ಮಾತನ್ನೂ ಸೇರಿಸಿದ್ರು. ಅವತ್ತು ಸುದೀಪ್ ಹೇಳಿದ್ದು ಈ ಸಿನಿಮಾ ರೀರಿಲೀಸ್ ಆಗ್ಬೇಕು ಅನ್ನೋದು.
ಈಗ ಆ ಮಾತು ಸತ್ಯ ಆಗ್ತಿದೆ. ಅವತ್ತು ಸಿಂಧು ಲೋಕನಾಥ್, ನಿರಂಜನ್ ಅಭಿನಯದ ಚಿತ್ರಕ್ಕೆ ಹೊಸ ಭರವಸೆ ಬಂದಿತ್ತು. ಈಗ ಚಿತ್ರ ರೀರಿಲೀಸಾಗೋದು ಕನ್ಫರ್ಮ್ ಆಗಿದೆ. ಇಷ್ಟಕ್ಕೂ ಕೇಸ್ ನಂ 18/9 ಚಿತ್ರ ರಿಲೀಸಾದಾಗ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು.
ಪ್ರೇಕ್ಷಕರು, ವಿಮರ್ಶಕರು ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ರು. ಆದ್ರೆ ಗೂಗ್ಲಿ, ವಿಕ್ಟರಿ, ಜಯಮ್ಮನ ಮಗ ಈ ಮೂರು ಚಿತ್ರಗಳ ನಡುವೆ ಸಿಕ್ಕ ಕೇಸ್ ನಂ 18/9 ಕಳೆದುಹೋಗಿತ್ತು. ಈಗ ರೀ-ರಿಲೀಸ್ ಭಾಗ್ಯ ಕಾಣುತ್ತಿದೆ.
ಈಗ ದೊಡ್ಡ ಸಿನಿಮಾಗಳು ರಿಲೀಸಾಗಿವೆ. ಬೃಂದಾವನ ಬಂದಿದ್ದಾಗಿದೆ. ದೊಡ್ಡ ಸ್ಟಾರ್ ಗಳ ಸಿನಿಮಾಗಳು ಸದ್ಯಕ್ಕಿಲ್ಲ. ಹೆಣ್ಣುಮಕ್ಕಳು ನೋಡಲೇಬೇಕಾದ ಚಿತ್ರವಾಗಿರೋ ಕೇಸ್ ನಂ 18/9 ಸದ್ಯದಲ್ಲೇ ಮತ್ತೆ ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ.


Click it and Unblock the Notifications











