For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಕೋಟಿಗೊಬ್ಬ-3' ಹೊಸ ಬಿಡುಗಡೆ ದಿನಾಂಕ ಇಲ್ಲಿದೆ

  By ಫಿಲ್ಮಿಬೀಟ್ ಡೆಸ್ಕ್
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ 'ಕೋಟಿಗೊಬ್ಬ-3' ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಏಪ್ರಿಲ್‌ನಲ್ಲಿಯೇ ಸಿನಿಮಾ ತೆರೆಗೆ ಬರಲಿದೆ ಎನ್ನುವ ಸುದ್ದಿ ಇದ್ದು. ಆದರೆ ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಆಗಿದೆ.

  ಇದೀಗ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ಅಪ್ ಡೇಟ್ ಹೊರಬಿದ್ದಿದ್ದು, ಸಿನಿಮಾದ ಹೊಸ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. 'ಕೋಟಿಗೊಬ್ಬ-3' ಚಿತ್ರದ ಹೊಸ ರಿಲೀಸ್ ದಿನಾಂಕ ಈಗ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಶಿವ ಕಾರ್ತಿಕ್ ಚೊಚ್ಚಲ ನಿರ್ದೇಶನದ ಕೋಟಿಗೊಬ್ಬ-3ಗೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಕೋಟಿಗೊಬ್ಬ ಪ್ರಾಂಚೈಸಿಯ 3ನೇ ಸರಣಿ ಇದಾಗಿದ್ದು, ಚಿತ್ರದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಸುದೀಪ್ ಗೆ ಬಿಗ್ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ: 'ಇದಕ್ಕಿಂತ ಗಿಫ್ಟ್ ಇನ್ನೇನಿರಲು ಸಾಧ್ಯ' ಎಂದ ಕಿಚ್ಚಸುದೀಪ್ ಗೆ ಬಿಗ್ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ: 'ಇದಕ್ಕಿಂತ ಗಿಫ್ಟ್ ಇನ್ನೇನಿರಲು ಸಾಧ್ಯ' ಎಂದ ಕಿಚ್ಚ

  ಮೂಲಗಳ ಪ್ರಕಾರ ಸುದೀಪ್ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಸುದೀಪ್ ಹುಟ್ಟುಹಬ್ಬದ ದಿನ ಚಿತ್ರತಂಡ ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸುವ ಪ್ಲಾನ್ ಮಾಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಭರ್ತಿಗೆ ಅವಕಾಶ ಸಿಕ್ಕರೆ ಕೋಟಿಗೊಬ್ಬ-3 ಅಕ್ಟೋಬರ್ 14ಕ್ಕೆ ತೆರೆಗೆ ಬರುವುದು ಬಹುತೇಕ ಖಚಿತ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಈ ನಡುವೆ ಕೊರೊನಾ 3ನೇ ಅಲೆಯ ಆತಂಕ ಕೂಡ ಕಾಡುತ್ತಿದೆ. 3ನೇ ಅಲೆಯಿಂದ ಮತ್ತೆ ಲಾಕ್ ಡೌನ್ ಆದರೆ ಸಿನಿಮಾಗಳ ಬಿಡುಗಡೆ ದಿನಾಂಕಗಳು ಮತ್ತೆ ತಲೆಕೆಳಗಾಗುವ ಸಾಧ್ಯತೆ ಇದೆ. ಇನ್ನು ಕೋಟಿಗೊಬ್ಬ-3 ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಈಗಾಗಲೇ ಬಾರಿ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರದಲ್ಲಿ ಸುದೀಪ್ ಗೆ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ಸುದೀಪ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಅಂದಹಾಗೆ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ. ಸೆಪ್ಟಂಬರ್ 2 ಕಿಚ್ಚ ಸುದೀಪ್ ಹುಟ್ಟಿದ ದಿನ. ಹುಟ್ಟುಹಬ್ಬದ ದಿನ ಕಿಚ್ಚನ ಕಡೆಯಿಂದ ಸಾಕಷ್ಟು ಸರ್ಪ್ರೈಸ್‌ಗಳು ಅಭಿಮಾನಿಗಳಿಗೆ ಸಿಗುವ ನಿರೀಕ್ಷೆ ಇದೆ. ಕೋಟಿಗೊಬ್ಬ-3 ಸಿನಿಮಾದ ಬಿಡುಗಡೆ ದಿನಾಂಕ ಸೇರಿದಂತೆ, ವಿಕ್ರಾಂತ ರೋಣನ ಟೀಸರ್ ಅಥವಾ ಅಪ್ ಡೇಟ್ ಮತ್ತು ಸುದೀಪ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

  ಈಗಾಗಲೇ ಕಿಚ್ಚನ ಸಿಡಿಪಿ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ಸುದೀಪ್ ಹುಟ್ಟುಹಬ್ಬದ ಸಿಡಿಪಿ ಬಿಡುಗಡೆ ಮಾಡಿ ಶುಭಕೋರಿದ್ದಾರೆ. "ನನ್ನ ಆತ್ಮೀಯ ಸ್ನೇಹಿತ ಹಾಗೂ ಲೆಜೆಂಡ್ ನಟ ಕಿಚ್ಚಸುದೀಪ್ ಅವರ ಹುಟ್ಟುಹಬ್ಬದ ಕಾಮನ್ ಡಿಸ್ಪ್ಲೇ ಪಿಕ್ಟರ್. ಸ್ಫೂರ್ತಿದಾಯಕವಾಗಿರಿ" ಎಂದು ಬರೆದುಕೊಂಡು ಫೋಟೋ ರಿವೀಲ್ ಮಾಡಿದರು.

  ಅನಿಲ್ ಕುಂಬ್ಳೆ ಸರ್ಪ್ರೈಸ್ ಗೆ ಕಿಚ್ಚ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಅನಿಲ್ ಕುಂಬ್ಳೆ ಟ್ವೀಟ್ ರಿಟ್ವೀಟ್ ಮಾಡಿ, "ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೇನು ಇರಲು ಸಾಧ್ಯ ಅನಿಲ್ ಕುಂಬ್ಳೆ ಸರ್. ಇದು ನಿಜಕ್ಕೂ ತುಂಬಾ ದೊಡ್ಡ ಸರ್ಪ್ರೈಸ್. ತುಂಬಾ ಧನ್ಯವಾದಗಳು" ಎಂದು ಬರೆದು ಅನಿಲ್ ಕುಂಬ್ಳೆ ಅವರಿಗೆ ಧನ್ಯವಾದ ತಿಳಿದರು.

  English summary
  Actor Kichcha Sudeep Starrer Kotigobba 3 Movie to Release on October 14, 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X