Don't Miss!
- News
74th Republic Day: ದೇಶಾದ್ಯಂತ ಗಣರಾಜ್ಯೋತ್ಸವ, ದೇಶಭಕ್ತಿ ಮೆರೆದ ರಾಜ್ಯಗಳು
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Automobiles
ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..
- Sports
ICC Emerging Women's Cricketer: 2022ರ ಉದಯೋನ್ಮುಖ ಮಹಿಳಾ ಕ್ರಿಕೆಟರ್ ಗೌರವ ಪಡೆದ ರೇಣುಕಾ ಸಿಂಗ್
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಿಕ್ರಾಂತ್ ರೋಣ' ಚಿತ್ರತಂಡದಿಂದ ಬಿಗ್ ಸರ್ಪ್ರೈಸ್: ಅಭಿಮಾನಿಗಳಲ್ಲಿ ಕಾತುರ
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ದರ್ಶನಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅದರಂತೆ ಚಿತ್ರತಂಡ ಕೂಡ ಆಗಾಗ ಸಂಚಲನ ಸೃಷ್ಟಿಸುವ ಸಣ್ಣ ಸಣ್ಣ ತುಣುಕುಗಳನ್ನು ಸಿನಿ ಪ್ರೇಕ್ಷಕರಿಗೆ ನೀಡುತ್ತಲೇ ಇತ್ತು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಜನರಲ್ಲಿ ಕುತೂಹಲ ದುಪ್ಪಟ್ಟಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಪೋಸ್ಟರ್ ಮತ್ತು ಪ್ರೋಮೋಗಳು ಚಿತ್ರ ರಸಿಕರ ಗಮನ ಸೆಳೆದಿದೆ. ಅದ್ಧೂರಿ ಮೇಕಿಂಗ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದ್ದು, ಕಿಚ್ಚ ಸುದೀಪ್ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಜುಲೈ 28 ರಂದು ಸಿನಿಮಾ ಕೂಡ ಭರ್ಜರಿಯಾಗಿ ರಿಲೀಸ್ ಆಗಲಿದೆ. ಆ ದಿನಕ್ಕಾಗಿ ಪ್ರೇಕ್ಷಕರು ಕೂಡ ಕಾಯುತ್ತಿದ್ದಾರೆ. ಆದರೆ, ಅದಕ್ಕೂ ಮುನ್ನ ಸಂಚಲನ ಸೃಷ್ಟಿಸುವ ಸುದ್ದಿಯೊಂದನ್ನು 'ವಿಕ್ರಾಂತ್ ರೋಣ' ತಂಡ ಇಂದು (ಮೇ 16) ನೀಡುತ್ತಿದೆ.
Recommended Video


ಕನ್ನಡ ಸಿನಿಮಾಗಳ ಮೇಲೆ ಹೆಚ್ಚಿದ ಭರವಸೆ
ಇತ್ತೀಚಿಗೆ ಕನ್ನಡ ಸಿನಿಮಾಗಳು ಹೊರ ರಾಜ್ಯ ಹಾಗೂ ಹೊರ ರಾಷ್ಟ್ರಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ ಬೇಟೆಯಾಡುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ. ಹೀಗಾಗಿ ಪರಭಾಷಿಗರಲ್ಲಿ ಕನ್ನಡ ಸಿನಿಮಾಗಳ ಮೇಲಿನ ಭರವಸೆ ಹೆಚ್ಚಾಗಿದ್ದು, ಬಿಗ್ ಬಜೆಟ್ ಸಿನಿಮಾಗಳಿಗೆ ಬಾಕ್ಸಾಫೀಸ್ ಕಲೆಕ್ಷನ್ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಇದೆ. ಈಗ 'ವಿಕ್ರಾಂತ್ ರೋಣ' ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಈ ಸಿನಿಮಾ 'ಕೆಜಿಎಫ್ 2' ದಾಖಲೆ ಮೀರಿ ಮುನ್ನುಗುತ್ತಾ ಎಂಬ ನಿರೀಕ್ಷೆಗಳು ಹೆಚ್ಚಾಗಿದೆ.
ವಿಕ್ರಾಂತ್
ರೋಣ:
ಓವರ್ಸೀಸ್
ರೈಟ್ಸ್
ದಾಖಲೆ
ಮೊತ್ತಕ್ಕೆ
ಸೇಲ್
ಆದ
ಮೊದಲ
ಕನ್ನಡ
ಚಿತ್ರ

ವಿದೇಶದಲ್ಲಿ 'ವಿಕ್ರಾಂತ್ ರೋಣ'ಗೆ ಭಾರೀ ಡಿಮ್ಯಾಂಡ್
ಇದರ ನಡುವೆಯೇ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರಿ ಬ್ಯುಸಿನೆಸ್ ಮಾಡಿಕೊಂಡಿದೆ. ವಿಶೇಷ ಅಂದರೆ ವಿದೇಶದಲ್ಲಿ 'ವಿಕ್ರಾಂತ್ ರೋಣ' ಸಿನಿಮಾಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ವಿದೇಶದ ವಿತರಕರು 'ವಿಕ್ರಾಂತ್ ರೋಣ' ಸಿನಿಮಾದ ಹಕ್ಕುಗಳನ್ನು ಖರೀದಿಸುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅದರ ಪರಿಣಾಮವೇ ರಿಲೀಸ್‌ಗೂ ಮುನ್ನವೇ ಸಿನಿಮಾ ಬರೋಬ್ಬರಿ 10 ಕೋಟಿ ರೂಪಾಯಿಗೆ ಡೀಲ್ ಮಾಡಿಕೊಂಡಿದೆ. ಸದ್ಯ ಈ ವಿಚಾರ ಸುದೀಪ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಹೊಸ ದಾಖಲೆ ಮಾಡಿದ ನಟ ಕಿಚ್ಚ ಸುದೀಪ್
'ವಿಕ್ರಾಂತ್ ರೋಣ' ಸಿನಿಮಾ 3ಡಿ ಅವತರಣಿಕೆಯಲ್ಲಿ ಮೂಡಿ ಬರುತ್ತಿದೆ. ಸಿನಿಮಾ 6 ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಕನ್ನಡ ಸೇರಿದಂತೆ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇಂಗ್ಲಿಷ್‌ನಲ್ಲಿ ಸ್ವತಃ ಕಿಚ್ಚ ಸುದೀಪ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಡಬ್ ಮಾಡಿದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಕಿಚ್ಚ ಸುದೀಪ್ ಪಾಲಾಗಿದೆ. ಜುಲೈ 28 ರಂದು ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರಲಿದೆ. ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ರವಿಶಂಕರ್ ಗೌಡ, ಮಧುಸೂದನ್ರಾವ್, ವಾಸುಕಿ ವೈಭವ್ ಮುಂತಾದವರು ನಟಿಸಿದ್ದಾರೆ.
ಜುಲೈನಲ್ಲಿ
ಮತ್ತೆ
ಕಿಚ್ಚ
v/s
ಅಜಯ್
ದೇವಗನ್:
ಈ
ಬಾರಿ
ಬಾಕ್ಸಾಫೀಸ್ನಲ್ಲಿ
ಮಹಾಯುದ್ಧ?

'ವಿಕ್ರಾಂತ್ ರೋಣ' ಟೈಟಲ್ ಬದಲಾಗುತ್ತಾ?
'ವಿಕ್ರಾಂತ್ ರೋಣ' ಸಿನಿಮಾ ಟೈಟಲ್ ಬದಲಾಗುತ್ತೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ವಿಕ್ರಾಂತ್ ರೋಣ' ಟೈಟಲ್ ಅನ್ನು ಶಾರ್ಟ್ ಮಾಡಿ, ವಿ ಆರ್ ಎಂದು ನಾಮಕರಣ ಮಾಡಲಾಗುತ್ತಿದೆ ಎಂಬುದು ಕಿಚ್ಚನ ಅಭಿಮಾನಿ ವಲಯದಲ್ಲಿ ಓಡಾಡುತ್ತಿದೆ. ಸದ್ಯಕ್ಕೆ ಈ ತಂಡ ನೀಡುವ ಸರ್ಪ್ರೈಸ್ ಬಗ್ಗೆ ಕುತೂಹಲ ಹೆಚ್ಚಿದೆ. ಕಿಚ್ಚ ಅಭಿಮಾನಿಗಳಿಗೆ ಅದೇನು ಸರ್ಪ್ರೈಸ್ ನೀಡುತ್ತಾರೆ ಎನ್ನುವುದು ಸದ್ಯಕ್ಕಂತೂ ಕುತೂಹಲ.