»   » ಹೈದರಾಬಾದಿನಲ್ಲಿ ಕಿಚ್ಚ ಸುದೀಪ್ 'ಜಟ್ಟ' ವೀಕ್ಷಣೆ

ಹೈದರಾಬಾದಿನಲ್ಲಿ ಕಿಚ್ಚ ಸುದೀಪ್ 'ಜಟ್ಟ' ವೀಕ್ಷಣೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರಿಗೆ ಒಂದು ಚಿತ್ರ ಇಷ್ಟವಾಯಿತು ಎಂದರೆ ಅವರು ಎಲ್ಲೇ ಇರಲಿ ಅದನ್ನು ನೋಡುವವರೆಗೂ ಅವರ ಮನಸ್ಸಿಗೆ ಸಮಾಧಾನವಿರಲ್ಲ. ಈ ಹಿಂದೊಮ್ಮೆ 'ಟೋನಿ' ಚಿತ್ರವನ್ನು ಮಲ್ಲೇಶ್ವರಂನ ರಿಜಾಯ್ಸ್ ಚಿತ್ರಮಂದಿರಲ್ಲಿ ವೀಕ್ಷಿಸಿದ್ದರು. ಆ ಚಿತ್ರದ ಮೇಕಿಂಗ್ ಹಾಗೂ ಜಯತೀರ್ಥ ನಿರ್ದೇಶನವನ್ನು ಕೊಂಡಾಡಿದ್ದರು.

ಈಗ ಗಿರಿರಾಜ್ ನಿರ್ದೇಶನದ 'ಜಟ್ಟ' ಚಿತ್ರದ ಬಗ್ಗೆಯೂ ಅವರಿಗೆ ಅತೀವ ಕುತೂಹಲ ಉಂಟಾಗಿತ್ತು. ಅದಕ್ಕೆ ಕಾರಣವಾಗಿದ್ದು ಚಿತ್ರದ ಬಗ್ಗೆ ಹರಿದುಬರುತ್ತಿರುವ ಮೆಚ್ಚುಗೆ ಮಾತುಗಳು. ಈ ಚಿತ್ರವನ್ನು ನೋಡಲೇಬೇಕು ಎಂದು ಅವರು ಹಂಬಲಿಸುತ್ತಿದ್ದರು. ಆದರೆ ಅವರು ಹೈದರಾಬಾದಿನಲ್ಲಿದ್ದು 'ಮಿರ್ಚಿ' ರೀಮೇಕ್ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.


ಆದಕಾರಣ ಅದು ಸಾಧ್ಯವಾಗಿರಲಿಲ್ಲ. ಬೆಂಗಳೂರಿನಲ್ಲೇ 'ಜಟ್ಟ' ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆದರೆ ಟೈಮಿಗೆ ಸರಿಯಾಗಿ ಪ್ರಿಂಟ್ ಬರದೆ ಸುದೀಪ್ ಚಿತ್ರವನ್ನು ವೀಕ್ಷಿಸಲು ಆಗಲಿಲ್ಲ. ಈಗ ಸ್ವತಃ ಗಿರಿರಾಜ್ ಅವರೇ 'ಜಟ್ಟ' ಚಿತ್ರದ ಮಾಸ್ಟರ್ ಡಿವಿಡಿಯನ್ನು ಸುದೀಪ್ ಅವರಿಗೆ ಕಳುಹಿಸಿದ್ದಾರೆ.

ಶೀಘ್ರದಲ್ಲೇ ಹೈದರಾಬಾದಿನಲ್ಲಿ ಚಿತ್ರವನ್ನು ವೀಕ್ಷಿಸಲಿದ್ದಾರೆ ಸುದೀಪ್. ಇನ್ನೂ ಮೂರು ವಾರಗಳ ಕಾಲ ಅವರು ಹೈದರಾಬಾದಿನಲ್ಲೇ ಇರುತ್ತಾರೆ. 'ಜಟ್ಟ' ಚಿತ್ರದ ಬಗ್ಗೆ ಅವರ ಅಭಿಪ್ರಾಯ ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಅವರ ಟ್ವಿಟ್ಟರ್ ಅಪ್ ಡೇಟ್ಸ್ ನ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. (ಏಜೆನ್ಸೀಸ್)

English summary
Kannada actor Sudeep recently watched Kannada film Jatta in Hyderabad.The actor is shooting in Hyderabad for his film 'Mirchi' with a host of actors. Jatta's director Giriraj has sent the master DVD of the film to Hyderabad.
Please Wait while comments are loading...