»   » ಮುಂದಿನ ಚಿತ್ರಗಳ ಬಗ್ಗೆ ಕಿಚ್ಚ ಕೊಟ್ಟರು ಎಕ್ಸ್‌ಕ್ಲೂಸಿವ್ ಮಾಹಿತಿ

ಮುಂದಿನ ಚಿತ್ರಗಳ ಬಗ್ಗೆ ಕಿಚ್ಚ ಕೊಟ್ಟರು ಎಕ್ಸ್‌ಕ್ಲೂಸಿವ್ ಮಾಹಿತಿ

Posted By:
Subscribe to Filmibeat Kannada

'ದಿ ವಿಲನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಿಚ್ಚ ಸುದೀಪ್ ವಾರಾಂತ್ಯದಲ್ಲಿ ಅಭಿಮಾನಿಗಳ ಮುಂದೆ ಬಂದು ಬಿಗ್ ಬಾಸ್ ನಿರೂಪಣೆ ಮಾಡುವುದರ ಜೊತೆಗೆ ಅಡುಗೆ ಮಾಡಿ ಅಭಿಮಾನಿಗಳ ಬಾಯಲ್ಲಿ ನೀರು ಬರಿಸುತ್ತಿದ್ದಾರೆ. 'ದಿ ವಿಲನ್' ಚಿತ್ರ ಇನ್ನೇನು ಮುಗಿಯುತ್ತಾ ಬಂದಿದೆ. ಕಿಚ್ಚ ಮುಂದಿನ ಚಿತ್ರ ಯಾವಾಗ ಪ್ರಾರಂಭ ಆಗುತ್ತೆ. ಅನ್ನುವುದು ಅಭಿಮಾನಿಗಳ ಪ್ರಶ್ನೆ.

ಕನ್ನಡ ಸಿನಿಮಾಗಳಲ್ಲದೆ ಕಿಚ್ಚ ಹಾಲಿವುಡ್ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವುದು ಗೊತ್ತಿರುವ ವಿಚಾರ. ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಕ್ಯೂರಿಯಾಸಿಟಿ ಮೂಡಿಸಿರುವ ಚಿತ್ರತಂಡ ಚಿತ್ರೀಕರಣಕ್ಕೂ ಸಿದ್ದತೆ ಮಾಡಿಕೊಳ್ಳುತ್ತಿದೆಯಂತೆ.

'ಹೆಬ್ಬುಲಿ' ಸಿನಿಮಾದ ನಂತರ ಅದೇ ನಿರ್ದೇಶಕರ ಜೊತೆ ಚಿತ್ರವನ್ನ ಅನೌನ್ಸ್ ಮಾಡಿದ್ದು ಆ ಚಿತ್ರ ಯಾವಾಗ ಸೆಟ್ಟೇರುತ್ತೆ ಅನ್ನುವುದನ್ನ ತಿಳಿದುಕೊಳ್ಳಲು ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ರಸಿಕರು ಕಾದಿದ್ದಾರೆ. ಇಷ್ಟೆಲ್ಲಾ ಪ್ರಶ್ನೆಗಳಿಗೆ ಖುದ್ದು ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ. ಈ ವರ್ಷ ಸುದೀಪ್ ಯಾವ ಯಾವ ಚಿತ್ರಗಳಲ್ಲಿ ಅಭಿನಯಿಸುತ್ತಾರೆ?. ಹೇಗಿರಲಿದೆ ಕಿಚ್ಚನ ಚಿತ್ರಗಳ ಶೆಡ್ಯೂಲ್? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಪೈಲ್ವಾನ್ ಆಗಲಿರುವ ಕಿಚ್ಚ

ಹೆಬ್ಬುಲಿ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಕೃಷ್ಣ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಪೈಲ್ವಾನ್ ಚಿತ್ರ ಇದೇ ತಿಂಗಳ (ಜನವರಿ) ಅಂತ್ಯಕ್ಕೆ ಶುರುವಾಗಲಿದೆ.

ಹಾಲಿವುಡ್ ಸಿನಿಮಾದಲ್ಲಿ ಕಿಚ್ಚ ಭಾಗಿ

ಫಸ್ಟ್ ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲವನ್ನ ಮೂಡಿಸಿರುವ ಹಾಲಿವುಡ್ ನ ರೈಸನ್ ಸಿನಿಮಾದ ಚಿತ್ರೀಕರಣದಲ್ಲಿ ಕಿಚ್ಚ ಭಾಗಿಯಾಗಲಿದ್ದಾರೆ. ಸುದೀಪ್ ಮಾರ್ಚ್ ನಲ್ಲಿ ರೈಸನ್ ಸಿನಿಮಾದ ಚಿತ್ರೀಕರಣವನ್ನ ಪ್ರಾರಂಭ ಮಾಡಲಿದ್ದಾರಂತೆ.

ಸೆಟ್ಟೇರಲಿದೆ ಕೋಟಿಗೊಬ್ಬ 3

ವರ್ಷದ ಮಧ್ಯದಲ್ಲಿ ಕೋಟಿಗೊಬ್ಬ3 ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಚಿತ್ರವನ್ನ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು ಸೂರಪ್ಪ ಬಾಬು ನಿರ್ಮಾಣ ಮಾಡಲಿದ್ದಾರೆ.

ಟ್ವಿಟ್ಟರ್ ನಲ್ಲಿ ಮಾಹಿತಿ ನಿಡಿದ ಕಿಚ್ಚ

ಈ ವರ್ಷ ಕಿಚ್ಚ ಸುದೀಪ್ ಯಾವ ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಎನ್ನುವುದರ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಸುದೀಪ್ ಮೂರು ಸಿನಿಮಾದ ಚಿತ್ರೀಕರಣದಲ್ಲಿ ಈ ವರ್ಷ ಭಾಗಿ ಆಗಲಿದ್ದಾರೆ.

English summary
Kannada actor Kichcha Sudeep will star in three films this year. Sudeep will act in Pilwan, Kotigobba 3 and Risen Hollywood movie, Sudeep wrote on his Twitter about this

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X