ಶ್ರೀಮುರಳಿಗೆ ಸುದೀಪ್ ಬರ್ತಡೇ ವಿಶ್; 'ಬಘೀರ' ಬಗ್ಗೆ ಕಿಚ್ಚ ಹೇಳಿದ್ದೇನು?

ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಗ್ರಂ ವೀರನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Recommended Video

ಬಘೀರ ಲುಕ್ ನೋಡಿ ವಿಶ್ ಮಾಡಿದ ಸುದೀಪ್ | Sudeep | Sriimurali | Filmibeat Kannada

ಈ ಬಾರಿ ಶ್ರೀಮುರಳಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಸಂಭ್ರಮಿಸಿದ್ದಾರೆ. ಈ ಬಾರಿ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಸಿಗದಿದ್ದರೂ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಹೌದು, ಹೊಂಬಾಳೆ ಫಿಲ್ಮ್ಸ್ ನ ಮುಂದಿನ ಸಿನಿಮಾದಲ್ಲಿ ಶ್ರೀಮುರಳಿ ನಟಿಸುತ್ತಿದ್ದಾರೆ. ಈ ಸುದ್ದಿ ಅಭಿಮಾನಿಗಳ ನಿದ್ದೆ ಗೆಡಿಸಿದೆ.

ರೋರಿಂಗ್ ಸ್ಟಾರ್ ಗೆ ಸುದೀಪ್ ವಿಶ್

ರೋರಿಂಗ್ ಸ್ಟಾರ್ ಗೆ ಸುದೀಪ್ ವಿಶ್

ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ವಿಶ್ ಮಾಡಿದ್ದಾರೆ. ಜನ್ಮದಿನದ ಶುಭಾಶಯ ತಿಳಿಸುವ ಜೊತೆಗೆ ಬಘೀರ ಸಿನಿಮಾದ ಬಗ್ಗೆಯೂ ಹೇಳಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಶ್ರೀಮುರಳಿಗೆ ಸಂದೇಶ ರವಾನಿಸಿರುವ ಶ್ರೀಮುರಳಿ, 'ಹುಟ್ಟುಹಬ್ಬದ ಶುಭಾಶಯಗಳು ಶ್ರೀಮುರಳಿ. ಯಾವಾಗಲು ಸಂತೋಷವಾಗಿರಿ ಎಂದು ಹಾರೈಸುತ್ತೇನೆ. ಬಘೀರ ಲುಕ್ ಅದ್ಭುತವಾಗಿದೆ' ಎಂದು ಹೇಳಿದ್ದಾರೆ.

ಮದಗಜ ಟೀಸರ್ ರಿಲೀಸ್

ಮದಗಜ ಟೀಸರ್ ರಿಲೀಸ್

ಅಭಿಮಾನಿಗಳು ಸುದೀಪ್ ಮತ್ತು ಶ್ರೀಮುರಳಿ ಫೋಟೋಗಳನ್ನು ಶೇರ್ ಮಾಡಿ, ಹುಟ್ಟುಹಬ್ಬ ಶುಭಾಶಯ ತಿಳಿಸುತ್ತಿದ್ದಾರೆ. ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಇಂದು ಮದಗಜ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲೂ ಶ್ರೀಮುರಳಿ ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

ಸೂರಿ ನಿರ್ದೇಶನದಲ್ಲಿ ಬಘೀರ

ಸೂರಿ ನಿರ್ದೇಶನದಲ್ಲಿ ಬಘೀರ

ಶ್ರೀಮುರಳಿ ನಟನೆಯ ಬಘೀರ ಸಿನಿಮಾದ ಲುಕ್ ಎಲ್ಲರ ಕಣ್ಣುಕುಕ್ಕುತ್ತಿದೆ. ಫಸ್ಟ್ ಲುಕ್ ನಲ್ಲಿ ಮುರಳಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ. ಈ ಸಿನಿಮಾಗೆ ಡಾ. ಸೂರಿ ನಿರ್ದೇಶನ ಮಾಡುತ್ತಿದೆ. ಹೊಂಬಾಳೆ ಫಿಲ್ಸ್ಮ್ ನ 8ನೇ ಸಿನಿಮಾ ಇದಾಗಿದೆ. ಈಗಾಗಲೇ ನೇ ಸಿನಿಮಾ ಪ್ರಭಾಸ್ ಜೊತೆ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ.

ಬಘೀರನಿಗೆ ಕಥೆ ಬರೆದ ಪ್ರಶಾಂತ್ ನೀಲ್

ಬಘೀರನಿಗೆ ಕಥೆ ಬರೆದ ಪ್ರಶಾಂತ್ ನೀಲ್

ವಿಶೇಷ ಎಂದರೆ ಬಘೀರ ಸಿನಿಮಾದ ಕಥೆಯನ್ನು ಪ್ರಶಾಂತ್ ನೀಲ್ ಬರೆದ್ದಾರೆ. 'ನನ್ನ ಮೊದಲ ನಿಜವಾದ ಮಾಸ್ ಹೀರೋ ಶ್ರೀಮುರಳಿಗಾಗಿ ಶೌರ್ಯದ ಕಥೆಯನ್ನು ಬರೆದಿದ್ದೀನಿ. ಹುಟ್ಟುಹಬ್ಬದ ಶುಭಾಶಯಗಳು ಶ್ರೀಮುರಳಿ' ಎಂದು ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Kichcha Sudeep Wishes Sriimurali on his Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X