»   » ನಟ ದುನಿಯಾ ವಿಜಯ್ ವಿರುದ್ಧ ಕಿಡ್ನಾಪ್ ಕೇಸ್

ನಟ ದುನಿಯಾ ವಿಜಯ್ ವಿರುದ್ಧ ಕಿಡ್ನಾಪ್ ಕೇಸ್

By: ಉದಯರವಿ
Subscribe to Filmibeat Kannada
Actor Duniya Vijay
ನಟ ದುನಿಯಾ ವಿಜಯ್ ಅವರು ವಿವಾಹ ವಿಚ್ಛೇದನ ಪ್ರಕರಣದ ಮೂಲಕ ಇತ್ತೀಚೆಗೆ ಸುದ್ದಿ ಮಾಡಿದ್ದರು. ಈಗ ಅವರ ಮೇಲೆ ಅವರ ಮಾವ ರುದ್ರಪ್ಪ ಅವರು ಕಿಡ್ನಾಪ್ ಕೇಸನ್ನು ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ತಮ್ಮ ಮಗ ಆನಂದ್ ಅವರನ್ನು ದುನಿಯಾ ವಿಜಯ್ ಅಪಹರಿಸಿದ್ದಾರೆ ಎಂದು ಆರೋಪಿಸಿರುವ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ರುದ್ರಪ್ಪ ಅವರ ಪುತ್ರ ಆನಂದ್ ಅವರು ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ದುನಿಯಾ ವಿಜಯ್ ಅವರೇ ತಮ್ಮ ಮಗನನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಆನಂದ್ ಅವರಿಗೆ ಮದುವೆ ಸಂಬಂಧವನ್ನು ವಿಜಿ ಕಡೆಯವರು ನೋಡಿದ್ದರಂತೆ. ಆದರೆ ಈ ಸಂಬಂಧ ಆನಂದ್ ಕುಟುಂಬಿಕರಿಗೆ ಇಷ್ಟವಿರಲಿಲ್ಲವಂತೆ ಎನ್ನಲಾಗಿದ್ದು. ಈಗ ತಮ್ಮ ಮಗನನ್ನು ವಿಜಿ ಅವರೇ ಕಿಡ್ನಾಪ್ ಮಾಡಿಸಿರಬೇಕು ಎಂದು ರುದ್ರಪ್ಪ ಆರೋಪಿಸಿದ್ದಾರೆ.

ದುನಿಯಾ ವಿಜಿ ಮೇಲೆ ಕಿಡ್ನಾಪ್ ಪ್ರಕರಣ ದಾಖಲಾಗುವ ಮೂಲಕ ಅವರ ವಿವಾಹ ವಿಚ್ಛೇದನ ಪ್ರಕರಣಕ್ಕೂ ಹೊಸ ತಿರುವು ಸಿಕ್ಕಂತಾಗಿದೆ. ಕಿಡ್ನಾಪ್ ಆಗಿದ್ದಾರೆ ಎನ್ನಲಾಗಿರುವ ಆನಂದ್ ಅವರು ನಾಗರತ್ನ ಅವರ ತಮ್ಮ.

English summary
Kannada actor Duniya Vijay is now facing charges of kidnap of his brother in law Anand. Viji's father in law Rudrappa files case in Jigani police station.
Please Wait while comments are loading...