For Quick Alerts
  ALLOW NOTIFICATIONS  
  For Daily Alerts

  'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ರೈಟ್ಸ್ ಗೆ ಅಷ್ಟೊಂದು ಬೆಲೆಯೇ.? ಅಬ್ಬಬ್ಬಾ.!

  By Harshitha
  |

  ಕಳೆದ ವರ್ಷಾಂತ್ಯದಲ್ಲಿ (2016 ಡಿಸೆಂಬರ್‌) ತೆರೆಕಂಡ 'ಕಿರಿಕ್ ಪಾರ್ಟಿ' ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಕಾಲೇಜು ಹುಡುಗ-ಹುಡುಗಿಯರಿಗೆ ಹೇಳಿ ಮಾಡಿಸಿದಂತಿದ್ದ ಈ ಸಿನಿಮಾ, ಹರೆಯದ ಹುಡುಗ-ಹುಡುಗಿಯರ ಮನಸ್ಸಿಗೆ ತುಂಬಾ ಆಪ್ತವಾಗಿತ್ತು.

  ರಾಜ್ಯಾದ್ಯಂತ ಸತತ ಹೌಸ್ ಫುಲ್ ಪ್ರದರ್ಶನ ಕಂಡ ಈ ಸಿನಿಮಾ 50 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಬಿಸಿನೆಸ್ ಮಾಡಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ಹೊಸ ದಾಖಲೆಗಳಿಗೆ ನಾಂದಿ ಹಾಡಿದ 'ಕಿರಿಕ್ ಪಾರ್ಟಿ' ಸಿನಿಮಾ ಈಗ ಮತ್ತೊಂದು ರೆಕಾರ್ಡ್ ಮಾಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

  ದಾಖಲೆ ಬೆಲೆಗೆ ಸೇಲ್ ಆಗಿದೆ 'ಕಿರಿಕ್ ಪಾರ್ಟಿ' ರೀಮೇಕ್ ರೈಟ್ಸ್

  ದಾಖಲೆ ಬೆಲೆಗೆ ಸೇಲ್ ಆಗಿದೆ 'ಕಿರಿಕ್ ಪಾರ್ಟಿ' ರೀಮೇಕ್ ರೈಟ್ಸ್

  ಕರ್ನಾಟಕ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಕಿರಿಕ್ ಪಾರ್ಟಿ' ಸಿನಿಮಾದ ರೀಮೇಕ್ ರೈಟ್ಸ್ ದಾಖಲೆ ಬೆಲೆಗೆ ಸೇಲ್ ಆಗಿದೆ. ಆ ದಾಖಲೆ ಬೆಲೆ ಎಷ್ಟು ಅಂತ ಕೇಳಿದರೆ, ನೀವು 'ಅಬ್ಬಬ್ಬಾ..!' ಎಂದು ಬಾಯಿ ಮೇಲೆ ಬೆರಳಿಡುವುದು ಗ್ಯಾರೆಂಟಿ.

  'ಕಿರಿಕ್ ಪಾರ್ಟಿ' ಗ್ಯಾಂಗ್ ನ ಸಕ್ಸಸ್ ಪಾರ್ಟಿ ಸಿಕ್ಕಾಪಟ್ಟೆ ಕಲರ್ ಫುಲ್

  ದಾಖಲೆ ಮೊತ್ತ ಎಷ್ಟು ಅಂದ್ರೆ...

  ದಾಖಲೆ ಮೊತ್ತ ಎಷ್ಟು ಅಂದ್ರೆ...

  ಸುಮಾರು ಎರಡು ಕೋಟಿ ರೂಪಾಯಿಗೆ 'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ಹಕ್ಕುಗಳು ಸೇಲ್ ಆಗಿದೆ. ಈ ಬಗ್ಗೆ ಚಿತ್ರತಂಡ ಕೂಡ ಫುಲ್ ಖುಷಿ ಆಗಿದೆ.

  ವಿಡಿಯೋ: ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ 'ಕಿರಿಕ್ ಪಾರ್ಟಿ' ಹಾಡು.. 'ಅಲೆಲೆಲೆ..'

  ಮೂರು ಭಾಷೆಗಳಿಗೆ ರೀಮೇಕ್ ರೈಟ್ಸ್ ಸೇಲ್

  ಮೂರು ಭಾಷೆಗಳಿಗೆ ರೀಮೇಕ್ ರೈಟ್ಸ್ ಸೇಲ್

  ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಿಗೆ 'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ರೈಟ್ಸ್ ಬಿಕರಿ ಆಗಿದೆ. ಈ ಮೂರು ಭಾಷೆಗಳಿಂದ ಸುಮಾರು ಎರಡು ಕೋಟಿ ರೂಪಾಯಿ 'ಪರಂವಾ' ಸ್ಟುಡಿಯೋ ಅಕೌಂಟ್ ಗೆ ಸೇರಿದೆ.

  'ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!

  ಮೊದಲ ಸಿನಿಮಾ

  ಮೊದಲ ಸಿನಿಮಾ

  ಹಾಗ್ನೋಡಿದ್ರೆ, 'ಪರಂವಾ ಸ್ಟುಡಿಯೋ' ಅಡಿ ನಿರ್ಮಾಣವಾದ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ'. ಮೊದಲ ಚಿತ್ರವೇ ಈ ಮಟ್ಟದ ಯಶಸ್ಸು ಗಳಿಸಿರುವುದರಿಂದ, ಇನ್ಮುಂದೆಯೂ ಸದಭಿರುಚಿಯ ಚಿತ್ರಗಳನ್ನ 'ಪರಂವಾ ಸ್ಟುಡಿಯೋ' ಅಡಿ ನಿರ್ಮಾಣ ಮಾಡುವ ಆಶಯ ರಕ್ಷಿತ್ ಶೆಟ್ಟಿ ರವರಿಗಿದೆ.

  ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ

  English summary
  Rakshit Shetty starrer Kannada Movie 'Kirik Party' remake rights for Hindi, Telugu and Tamil sold for Record Price.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X