»   » ಮತ್ತೆ ನನಸಾಗಲಿಲ್ಲ 'ಕೋಟಿಗೊಬ್ಬ' ಸುದೀಪನ ಕನಸು

ಮತ್ತೆ ನನಸಾಗಲಿಲ್ಲ 'ಕೋಟಿಗೊಬ್ಬ' ಸುದೀಪನ ಕನಸು

Posted By: ಕುಸುಮ
Subscribe to Filmibeat Kannada

ಕಳೆದ ವರ್ಷ ಮೈಸೂರಿನ ಮೂಲೆಯಲ್ಲೆಲ್ಲೋ 'ರನ್ನ' ಚಿತ್ರ ರಿಲೀಸ್ ಆಗೋಕೂ ಎರಡು ದಿನಗಳ ಮುಂಚೆಯೇ ಒಂದು ಥಿಯೇಟರ್ನ ಮುಂದೆ ತನ್ನ ಕಟೌಟ್ ಹಾಕೋಕೆ ಸೇರಿದ್ದ ಸಾವಿರಾರು ಅಭಿಮಾನಿಗಳನ್ನು ಕಂಡು ಪುಳಕಿತರಾಗಿದ್ದ ಸುದೀಪ್, ತನ್ನಿಂದ ಏನನ್ನೂ ಬಯಸದ ಇಂತಹಾ ನಿಸ್ವಾರ್ಥ ಅಭಿಮಾನಿಗಳಿಗಾದರೂ ವರ್ಷಕ್ಕೆರೆಡು ಸಿನಿಮಾದಲ್ಲಿ ನಟಿಸಬೇಕು ಎನ್ನುವ ಮಾತನ್ನಾಡಿದ್ರು.

Kotigobba Sudeep does not keep his promise

ಆದರೆ ಈ ಬಾರಿ ಮತ್ತೆ ಕಿಚ್ಚನ ಕೋಟಿಗೊಬ್ಬ ಲೇಟಿಗೆ ಮತ್ತೊಬ್ಬ ಎಂಬಂತಾಗಿದೆ. ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾ ತೆರೆಗೆ ಬಂದಿದ್ದು ಜೂನ್ 4 2015ರಂದು. ಅಂದ್ರೆ ಕಿಚ್ಚನ ಸಿನಿಮಾ ತೆರೆಗೆ ಬಂದು ಒಂದು ವರ್ಷ ಆಯ್ತು. [ಎಕ್ಸ್ ಕ್ಲೂಸಿವ್: 'ಕೋಟಿಗೊಬ್ಬ-2' ಬೊಂಬಾಟ್ ಫೋಟೋ]

Kotigobba Sudeep does not keep his promise

ರನ್ನ ಸಿನಿಮಾ ತೆರೆಗೆ ಬಂದಾಗ ಸುದೀಪ್ ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರೆ ಅಭಿಮಾನಿಗಳು ಬೇಸರಿಸಿಕೊಳ್ತಾರೆ. ಆದರೆ ಏನು ಮಾಡೋದು ನಿರ್ಮಾಪಕರುಗಳಿಗೆ ಸಹಾಯ ಮಾಡೋಕೆ ಹೋಗಿ ಒಂದೊಂದು ಸಿನಿಮಾವೂ ಒಂದೊಂದು ವರ್ಷ ತೆಗೆದುಕೊಳ್ತಿದೆ. ಮುಂದೆ ನಾನೇ ಎಚ್ಚರಿಕೆ ತೆಗೆದುಕೊಂಡು ವರ್ಷಕ್ಕೆ ಎರಡು ಸಿನಿಮಾದಲ್ಲಾದ್ರೂ ಅಭಿನಯಿಸಬೇಕು ಅಂತ ನಿರ್ಧರಿಸಿದ್ರು.

Kotigobba Sudeep does not keep his promise

ಅದರ ನಡುವೆ ಬಿಗ್ಬಾಸ್ ಬಂತು, ಸಿಸಿಎಲ್ ಮುಗಿಯಿತು... ಎಲ್ಲವೂ ಆಯ್ತು. ಆದ್ರೆ ಕಿಚ್ಚ ಅಂದುಕೊಂಡಂತೆ ಈ ವರ್ಷವೂ ಆಗಿಲ್ಲ. ಇನ್ನೂ ಕೂಡ ಕೋಟಿಗೊಬ್ಬ ಚಿತ್ರ ರಿಲೀಸ್ಗೆ ತಯಾರಾಗಿಲ್ಲ. ಕೆ ಎಸ್ ರವಿಕುಮಾರ್ ನಿರ್ದೇಶನದ ಕೋಟಿಗೊಬ್ಬ2 ಅಂತಿಮ ಹಂತದಲ್ಲಿದೆ. ಇತ್ತೀಚೆಗೆ ಚಿತ್ರದ ಹಾಡುಗಳ ಚಿತ್ರೀಕರಣ ಮುಗಿದಿದ್ದು ಕಿಚ್ಚನ ಜೊತೆ ನಿತ್ಯಾ ಮೆನನ್ ಡ್ಯುಯೆಟ್ ಹಾಡಿರುವ ಭರ್ಜರಿ ಚಿತ್ರಗಳು ಕಿಚ್ಚನ ಅಭಿಮಾನಿಗಳ ಕಣ್ಣಲ್ಲಿ ಕುತೂಹಲ ಹೆಚ್ಚಿಸುತ್ತಿವೆ. ['ಕೋಟಿಗೊಬ್ಬ-2' ಬಗ್ಗೆ ಬ್ರೇಕಿಂಗ್ ನ್ಯೂಸ್ ಕೇಳಿದ್ರೆ ಕಣ್ಣು-ಬಾಯಿ ಬಿಡ್ತೀರಾ!]
Kotigobba Sudeep does not keep his promise

ಅಷ್ಟರಲ್ಲಿ ಧೂಮ್ ಧಮಾಕಾ ಅನ್ನುವಂಥ ಸುದ್ದಿಯೊಂದು ಹೊರಬಿದ್ದಿದೆ. ಇದನ್ನು ಕೇಳಿ ಕನ್ನಡ ಚಿತ್ರಪ್ರೇಮಿಗಳು ಪುಳಕಿತರಾಗುವುದರಲ್ಲಿ ಅನುಮಾನವೇ ಇಲ್ಲ. ಅದೇನೆಂದರೆ, ಕೋಟಿಗೊಬ್ಬ2ನಲ್ಲಿ ಭೂಲೋಕದ ಅಪ್ಸರೆಯಂಥ ಚೆಲುವೆ ಸನ್ನಿ ಲಿಯೋನ್ ಮತ್ತು ಕಾಮವೇ ಮೈವೆತ್ತಂತಿರುವ ಶೆರ್ಲಿನ್ ಚೋಪ್ರಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ರಸಿಕರು ಕುಣಿದು ಕುಪ್ಪಳಿಸಲು ಇನ್ನೇನು ಬೇಕು?
English summary
Kichcha Sudeep has promised last year during Ranna release that he would release 2 movies per year. One year over but Sudeep has not been able to release Kotigobba 2 as promised. In the meanwhile, there is news that Sunny Leone and Sherlyn Chopra will appear in this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada