For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿ ಚಿತ್ರದ 4ನೇ ಹಾಡು ಬಿಡುಗಡೆ ಯಾವಾಗ, ಯಾವ ಊರಿನಲ್ಲಿ? ಚಿತ್ರದಲ್ಲಿ ಒಟ್ಟು ಎಷ್ಟು ಹಾಡುಗಳಿವೆ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಇದೇ ತಿಂಗಳ ಗಣರಾಜ್ಯೋತ್ಸವದ ಪ್ರಯುಕ್ತ ಕ್ರಾಂತಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದ್ದು ಚಿತ್ರತಂಡ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ಹೈಪ್ ಹೆಚ್ಚಿಸುವತ್ತ ಚಿತ್ತ ನೆಟ್ಟಿದೆ.

  ಮೊದಲಿಗೆ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದ ಕ್ರಾಂತಿ ಚಿತ್ರತಂಡ ಕಳೆದ ಶನಿವಾರವಷ್ಟೇ ( ಜನವರಿ 7 ) ಟ್ರೈಲರ್ ಬಿಡುಗಡೆಗೊಳಿಸಿತ್ತು. ಟ್ರೈಲರ್ ವೀಕ್ಷಿಸಿದ್ದ ದರ್ಶನ್ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಇನ್ನು ಮೊದಲಿಗೆ ಚಿತ್ರದ ಎಲ್ಲಾ ಹಾಡುಗಳನ್ನು ಒಂದೊಂದು ಊರಿನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದ ಕ್ರಾಂತಿ ಚಿತ್ರತಂಡ ಅದರಂತೆ ಚಿತ್ರದ ಮೊದಲ ಹಾಡು ಧರಣಿಯನ್ನು ಮೈಸೂರಿನಲ್ಲಿ, ಎರಡನೇ ಹಾಡು ಬೊಂಬೆ ಬೊಂಬೆಯನ್ನು ಹೊಸಪೇಟೆಯಲ್ಲಿ ಹಾಗೂ ಮೂರನೇ ಹಾಡು ಪುಷ್ಪವತಿಯನ್ನು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

  ಹೀಗೆ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದ ಕ್ರಾಂತಿ ಚಿತ್ರತಂಡ ನಾಲ್ಕನೇ ಹಾಡಿನ ಬಗ್ಗೆ ಯಾವುದೇ ಮಾಹಿತಿ ನೀಡದೇ ಟ್ರೈಲರ್ ಅನ್ನು ಬಿಡುಗಡೆಗೊಳಿಸಿತ್ತು. ಇದೇ ಸಮಯಕ್ಕೆ ಅಭಿಮಾನಿಗಳಲ್ಲಿ ಚಿತ್ರದ ಮುಂದಿನ ಹಾಡನ್ನು ಚಿತ್ರತಂಡ ಯಾವ ಊರಿನಲ್ಲಿ ಬಿಡುಗಡೆ ಮಾಡಲಿದೆ ಎಂಬ ಕುತೂಹಲ ಹಾಗೂ ಪ್ರಶ್ನೆ ಮೂಡಿತ್ತು. ಅದೇ ರೀತಿ ನೇರವಾಗಿ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಬಹುದಾ ಎಂಬ ಅನುಮಾನವೂ ಸಹ ಮೂಡಿತ್ತು. ಇದೀಗ ಈ ವಿಷಯದ ಕುರಿತಾಗಿ ಮಾಹಿತಿಯೊಂದು ಹೊರಬಿದ್ದಿದ್ದು, ನಾಲ್ಕನೇ ಹಾಡು ಯಾವ ದಿನದಂದು, ಯಾವ ಊರಿನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ನಾಲ್ಕನೇ ಹಾಡು ತುಮಕೂರಿನಲ್ಲಿ

  ನಾಲ್ಕನೇ ಹಾಡು ತುಮಕೂರಿನಲ್ಲಿ

  ಕ್ರಾಂತಿ ಚಿತ್ರದ ನಾಲ್ಕನೇ ಹಾಡು ಜನವರಿ 14ರ ಶನಿವಾರದಂದು ತುಮಕೂರಿನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸದ್ಯ ಹೊರಬಿದ್ದಿದೆ. ಇನ್ನು ಇದೊಂದು ಜಾನಪದ ಶೈಲಿಯ ಹಾಡಾಗಿರಲಿದೆ ಎಂದೂ ಸಹ ಹೇಳಲಾಗುತ್ತಿದ್ದು, ಇತ್ತೀಚೆಗಷ್ಟೆ ವಿ ಹರಿಕೃಷ್ಣ ಹಾಡಿನ ಕೆಲಸಕ್ಕಾಗಿ ಚೆನ್ನೈಗೆ ಭೇಟಿ ನೀಡಿದ್ದರು ಎಂಬ ಫೋಟೊ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

  ಚಿತ್ರದಲ್ಲಿ ಒಟ್ಟು ಎಷ್ಟು ಹಾಡುಗಳಿವೆ?

  ಚಿತ್ರದಲ್ಲಿ ಒಟ್ಟು ಎಷ್ಟು ಹಾಡುಗಳಿವೆ?

  ಇನ್ನು ಕ್ರಾಂತಿ ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಇರಲಿವೆ ಎಂಬ ಮಾಹಿತಿಯನ್ನು ಸ್ವತಃ ದರ್ಶನ್ ಅವರೇ ಮೊದಲನೇ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಈ ಪೈಕಿ ಮೂರು ಹಾಡುಗಳು ಬಿಡುಗಡೆಯಾಗಿದ್ದು, ನಾಲ್ಕನೇ ಹಾಡು ಮುಂದಿನ ಶನಿವಾರ ಬಿಡುಗಡೆಯಾಗಲಿದೆ ಹಾಗೂ ಐದನೇ ಹಾಡು ನಂತರದ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

  ಪುಷ್ಪವತಿ ಹಿಟ್

  ಪುಷ್ಪವತಿ ಹಿಟ್

  ಸದ್ಯ ಬಿಡುಗಡೆಗೊಂಡಿರುವ ಹಾಡುಗಳ ಪೈಕಿ ನಿರೀಕ್ಷೆಗೂ ಮೀರಿ ವೈರಲ್ ಆಗಿರುವುದು ಪುಷ್ಪವತಿ ಹಾಡು. ಮೊದಲ ಹಾಡು ಧರಣಿ ಹಾಗೂ ಎರಡನೇ ಹಾಡು ಬೊಂಬೆ ಬೊಂಬೆ ಸದ್ದು ಮಾಡಿದರೂ ಸಹ ನಿರೀಕ್ಷೆಯ ಮಟ್ಟದ ರೀಚ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಪುಷ್ಪವತಿ ನಿರೀಕ್ಷೆಯನ್ನು ಯಶಸ್ವಿಯಾಗಿ ಮುಟ್ಟಿತ್ತು. ಸದ್ಯ ಸಾಮಾಜಿಕ ಜಾಲತಾಣದ ತುಂಬಾ ಪುಷ್ಪವತಿ ಹಾಡು ವೈರಲ್ ಆಗಿದೆ. ನೆಟ್ಟಿಗರು ಈ ಹಾಡಿನ ರೀಲ್ಸ್‌ಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಈ ಹಾಡಿನ ಮೂಲಕ ನಟಿ ನಿಮಿಕಾ ರತ್ನಾಕರ್ ಸಹ ಖ್ಯಾತಿ ಪಡೆದುಕೊಂಡರು.

  English summary
  Kranti movie 4th song releasing on January 14th in Tumkur. Read on
  Tuesday, January 10, 2023, 10:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X