»   » 'ಕ್ರಾಂತಿವೀರ'ನಾಗಿ ಕನ್ನಡದಲ್ಲಿ ಮೆರಯಲಿದ್ದಾನೆ ಭಗತ್ ಸಿಂಗ್

'ಕ್ರಾಂತಿವೀರ'ನಾಗಿ ಕನ್ನಡದಲ್ಲಿ ಮೆರಯಲಿದ್ದಾನೆ ಭಗತ್ ಸಿಂಗ್

By: ಜೀವನರಸಿಕ
Subscribe to Filmibeat Kannada

ಸೆಪ್ಟೆಂಬರ್ 28 ಭಾರತದ ಸ್ವಾತಂತ್ರ್ಯ ಹೋರಾಟಗಾರ, ತ್ಯಾಗ ಬಲಿದಾನದ ಮೂರ್ತರೂಪ 'ಶಹೀದ್' ಭಗತ್ ಸಿಂಗ್ ಅವರ 109ನೇ ಜಯಂತಿ. ಪಂಜಾಬ್ ನ ಈ ಪುರುಷ ಸಿಂಹ ಇಂದಿಗೂ ಎಂದೆಂದಿಗೂ ಯುವಕರಿಗೆ ಪ್ರೇರಣೆ. ತ್ಯಾಗ ಬಲಿದಾನಗಳ ಮೂಲಕ ಸ್ಪೂರ್ತಿಯ ಚಿಲುಮೆ.

ಈಗ ಭಗತ್ ಸಿಂಗ್ ಕುರಿತಂತೆ ಚಿತ್ರವೊಂದು ಕನ್ನಡದಲ್ಲಿ ಬರ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಚಿತ್ರದ ಹೆಸರು 'ಕ್ರಾಂತಿವೀರ'. ಇತ್ತೀಚೆಗಷ್ಟೆ ಚಿತ್ರದ ಫೋಟೋಶೂಟ್ ನಡೆದಿದೆ. 'ಅಗಮ್ಯ' ಚಿತ್ರದ ಮೂಲಕ ಹೀರೋ ಆಗಿ ಕಾಣಿಸಿಕೊಂಡಿದ್ದ ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ಅವರು ಭಗತ್ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. [ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಲುಕ್ ನಲ್ಲಿ ಯಶ್]

Krantiveer : Kannada movie on Bhagat Singh

ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿರೋದು ಈ ಹಿಂದೆ ಹರ್ಷಿಕಾ ಪೂಣಚ್ಚ ಮತ್ತು ಹೊಸ ನಟರನ್ನಿಟ್ಟುಕೊಂಡು 'ಅಲೆ' ಚಿತ್ರ ನಿರ್ದೇಶನ ಮಾಡಿದ್ದ ಆದತ್. ಕ್ರಾಂತಿಸಿಂಹ ಭಗತ್ ಸಿಂಗ್ ಜನ್ಮದಿನದಂದೇ ಚಿತ್ರ ಆರಂಭವಾಗ್ತಿರೋದು ವಿಶೇಷ. ಕನ್ನಡದಲ್ಲಿ ಭಗತ್ ಸಿಂಗ್ ಕುರಿತ ಸಿನೆಮಾ ಆಗ್ತಿರೋದು ಕೂಡ ಇದೇ ಮೊದಲ ಸಲ.

ಹಿಂದಿ ಚಿತ್ರರಂಗದಲ್ಲಿ ಭಾರತಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಭಗತ್ ಸಿಂಗ್ ಕುರಿತ ಹಲವಾರು ಚಿತ್ರಗಳು ಬಂದು ಯಶಸ್ವಿಯಾಗಿವೆ. 1965ರಲ್ಲಿ ಶಹೀದ್ ಚಿತ್ರ ಬಂದಿತ್ತು. ಅದರಲ್ಲಿ ಮನೋಜ್ ಕುಮಾರ್ ಭಗತ್ ಸಿಂಗ್ ಆಗಿ ಪಾತ್ರ ವಹಿಸಿದ್ದರು. 2002ರಲ್ಲಿ ಅದೇ ಹೆಸರಿನಿಂದ ಬಂದಿದ್ದ, ಬಾಬ್ಬಿ ಡಿಯೋಲ್ ನಟಿಸಿದ್ದ ಚಿತ್ರ ಬಿಡುಗಡೆಯಾಗಿತ್ತು.

Krantiveer : Kannada movie on Bhagat Singh

2002ರಲ್ಲಿಯೇ ಅಜಯ್ ದೇವಗನ್ ನಟಿಸಿದ್ದ 'ಭಗತ್ ಸಿಂಗ್' ಚಿತ್ರ ಭಾರೀ ಯಶಸ್ಸು ಗಳಿಸಿತ್ತು. ಇದೇ ವರ್ಷ ಭಗತ್ ಸಿಂಗ್ ಕುರಿತಂತೆ ಒಂದೆರಡಲ್ಲ ನಾಲ್ಕು ಚಿತ್ರಗಳು ನಿರ್ಮಾಣವಾಗಿದ್ದು ವಿಶೇಷ. ಸೋನು ಸೂದ್ ನಟಿಸಿದ್ದ ಭಗತ್-ಈ-ಆಜಮ್ ಚಿತ್ರ ಕೂಡ ಬಿಡುಗಡೆಯಾಗಿ ಚಿತ್ರರಸಿಕರ ಮನಗೆದ್ದಿತ್ತು.

English summary
Krantiveer, a Kannada movie based on revolutionary freedom fighter Bhagat Singh, has been launched on birthday of the legendary personality. Ajith Jayaraj, son of Don Jayaraj, is donning the role of Bhagat Singh. 'ಕ್ರಾಂತಿವೀರ'ನಾಗಿ ಕನ್ನಡದಲ್ಲಿ ಮೆರಯಲಿದ್ದಾನೆ ಭಗತ್ ಸಿಂಗ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada