For Quick Alerts
  ALLOW NOTIFICATIONS  
  For Daily Alerts

  ಇಪ್ಪತ್ತೈದನೇ ದಿನಕ್ಕೆ ದರ್ಶನ್ 'ಸಂಗೊಳ್ಳಿ ರಾಯಣ್ಣ'

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಇದೇ ನವೆಂಬರ್ 25ಕ್ಕೆ ಯಶಸ್ವಿ ಇಪ್ಪತ್ತೈದು ದಿನಗಳನ್ನು ಪೂರೈಸಲಿದೆ. ಬಾಲಿವುಡ್ ಹಾಗೂ ಪರಭಾಷಾ ಚಿತ್ರಗಳ ತೀವ್ರ ಪೈಪೋಟಿಯ ನಡುವೆಯೂ 'ರಾಯಣ್ಣ' ಕಲೆಕ್ಷನ್ ಗೇನು ಹೊಡೆತ ಬಿದ್ದಿಲ್ಲ.

  'ಸಾರಥಿ' ಚಿತ್ರದ ಬಳಿಕ ದರ್ಶನ್ ಅಭಿನಯದ ಈ ಚಿತ್ರವೂ ಬಾಕ್ಸಾಫೀಸರಲ್ಲಿ ಸದ್ದುಗದ್ದಲ ಮಾಡಿದೆ. ಚಿತ್ರವನ್ನು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು ಈಗಾಗಲೆ ಆ ಮೊತ್ತ ನಿರ್ಮಾಪಕರ ಗಲ್ಲಾಪೆಟ್ಟಿಗೆ ಸೇರಿದೆ ಎನ್ನುತ್ತವೆ ಮೂಲಗಳು.

  'ರಾಯಣ್ಣ' ಚಿತ್ರ ಇದುವರೆಗೂ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೂ ನಿರ್ಮಾಪಕರ ಪಾಲು ದಿನವೊಂದಕ್ಕೆ ರು.2 ಕೋಟಿ ಅವರ ಜೇಬು ಸೇರುತ್ತಿದೆ ಎಂಬ ಮಾಹಿತಿ ಇದೆ. ದರ್ಶನ್ ಚಿತ್ರಗಳ ಮೇಲೆ ಬಂಡವಾಳ ಹೂಡಿದರೆ ಲಾಭ ಗ್ಯಾರಂಟಿ ಎಂಬುದನ್ನು ರಾಯಣ್ಣ ಸಾಬೀತುಪಡಿಸಿದ್ದಾನೆ.ಚಿತ್ರ ವಿಮರ್ಶೆ ಓದಿ.

  ನವೆಂಬರ್ 1ರಂದು ಚಿತ್ರ 135 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಚಿತ್ರ ದಿನೇ ದಿನೇ ಚಿತ್ರಮಂದಿರಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿತ್ತು. ಸಾಮಾನ್ಯವಾಗಿ ಚಿತ್ರವೊಂದು ತೆರೆಕಂಡ ಬಳಿಕ ವಾರಗಳು ಉರುಳುತ್ತಿದ್ದಂತೆ ಚಿತ್ರಮಂದಿರಗಳ ಸಂಖ್ಯೆಯೂ ಇಳಿಮುಖವಾಗುತ್ತಾ ಸಾಗುತ್ತದೆ. ಆದರೆ 'ಸಂಗೊಳ್ಳಿ ರಾಯಣ್ಣ' ವಿಚಾರದಲ್ಲಿ ಉಲ್ಟಾ ಆಗಿದೆ. ಚಿತ್ರಮಂದಿರಗಳ ಸಂಖ್ಯೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ. ದರ್ಶನ್ ಅಭಿಮಾನಿಗಳಿಗಂತೂ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಗಿದೆ. (ಏಜೆನ್ಸೀಸ್)

  English summary
  Challenging Star Darshan lead Kannada film Krantiveera Sangolli Rayanna running successfully and completing 25 days on 25th November in 100 plus theaters. A historical biopic Kannada film directed by Naganna and produced by Anand Appugol the business expectations have touched the sky.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X