»   » ಕಿಚ್ಚ ಸುದೀಪ್ ಕಡೆಯಿಂದ 'ಹೆಬ್ಬುಲಿ' ಕೃಷ್ಣ ಬಾಯಿಗೆ ಲಡ್ಡು ಬಂದು ಬಿದ್ದಾಗ...

ಕಿಚ್ಚ ಸುದೀಪ್ ಕಡೆಯಿಂದ 'ಹೆಬ್ಬುಲಿ' ಕೃಷ್ಣ ಬಾಯಿಗೆ ಲಡ್ಡು ಬಂದು ಬಿದ್ದಾಗ...

Posted By:
Subscribe to Filmibeat Kannada

'ಹೆಬ್ಬುಲಿ' ಸಿನಿಮಾ ಬ್ಲಾಕ್ ಬಸ್ಟರ್ ಆದ್ಮೇಲೆ ಕಿಚ್ಚ ಸುದೀಪ್ 'ದಿ ವಿಲನ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಹೀಗಿರುವಾಗಲೇ, ಸುದೀಪ್ ರವರ ಮುಂದಿನ ಚಿತ್ರ ಟಾಕ್ ಅಫ್ ದಿ ಟೌನ್ ಆಗಿದೆ.

ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬರಬೇಕಿದ್ದ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಪೋಸ್ಟ್ ಪೋನ್ ಆಗಿರುವ ಸುದ್ದಿ ಮೊನ್ನೆಯಷ್ಟೇ ಬ್ರೇಕ್ ಆಯ್ತು. ಹೀಗಾಗಿ, ಸುದೀಪ್ ಯಾವ ಚಿತ್ರವನ್ನ ಕೈಗೆತ್ತಿಕೊಳ್ಳಬಹುದು ಎಂಬ ಕುತೂಹಲ ಅಭಿಮಾನಿಗಳ ಮನಸ್ಸಲ್ಲಿದೆ.

ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.!

ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿದೆ. 'ದಿ ವಿಲನ್' ಚಿತ್ರೀಕರಣ ಮುಗಿದ ಬಳಿಕ ಕೃಷ್ಣ ಅಲಿಯಾಸ್ ಕಿಟ್ಟಪ್ಪ ನಿರ್ದೇಶಿಸಲಿರುವ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ. ['ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!]

ಕೃಷ್ಣ ಬಾಯಿಗೆ ಲಡ್ಡು ಬಂತು ಬಿತ್ತು

ರಕ್ಷಿತ್ ಶೆಟ್ಟಿ ಜೊತೆಗಿನ 'ಥಗ್ಸ್ ಆಫ್ ಮಾಲ್ಗುಡಿ' ಮುಂದಕ್ಕೆ ಹೋಗುತ್ತಿದ್ದಂತೆಯೇ, ಕೃಷ್ಣ ಬಾಯಿಗೆ ಲಡ್ಡು ಬಂದು ಬಿತ್ತು. 'ಹೆಬ್ಬುಲಿ' ನಂತರ ಕೃಷ್ಣ ನಿರ್ದೇಶಿಸಲಿರುವ ಮತ್ತೊಂದು ಚಿತ್ರದಲ್ಲಿ ನಟಿಸಲು ಸುದೀಪ್ ಮನಸ್ಸು ಮಾಡಿದ್ದಾರೆ.['ಹೆಬ್ಬುಲಿ ಕೃಷ್ಣ' ಮನೆಗೆ ಬಂತು ದುಬಾರಿ ಕಾರ್!]

ಗಾಸಿಪ್ ಅಲ್ಲ.!

''ದಿ ವಿಲನ್' ಚಿತ್ರೀಕರಣ ಮುಗಿದ ಬಳಿಕ ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುದೀಪ್ ನಟಿಸುವುದು ಪಕ್ಕಾ'' ಹೀಗಂತ ಸ್ವತಃ ಕೃಷ್ಣ ರವರೇ ಸಂತಸದಿಂದ ಟ್ವೀಟ್ ಮಾಡಿದ್ದಾರೆ.

ಕೃಷ್ಣ ರವರಿಗೆ ಖುಷಿಯೋ ಖುಷಿ.!

''ಸುದೀಪ್ ಜೊತೆ ಮತ್ತೊಂದು ಸಿನಿಮಾ ಮಾಡಬೇಕು ಎಂಬ ಪ್ಲಾನ್ ಇತ್ತು. ಆದ್ರೆ, ಇಷ್ಟು ಬೇಗ ಮತ್ತೆ ಒಂದಾಗುತ್ತೇವೆ ಎಂದುಕೊಂಡಿರಲಿಲ್ಲ'' ಎನ್ನುತ್ತಾರೆ ಕೃಷ್ಣ.

ಕೃಷ್ಣ ಬಗ್ಗೆ ಸುದೀಪ್ ಗೆ ನಂಬಿಕೆ

'ಹೆಬ್ಬುಲಿ' ಸಿನಿಮಾದಲ್ಲಿ ಕೃಷ್ಣ ಹಾಗೂ ಸುದೀಪ್ ರವರ ಕಾಂಬಿನೇಷನ್ ವರ್ಕೌಟ್ ಆಗಿತ್ತು. ನಿರೀಕ್ಷೆಯಂತೆ 'ಹೆಬ್ಬುಲಿ' ಸೂಪರ್ ಹಿಟ್ ಆಯ್ತು. ಹೀಗಾಗಿ ಕೃಷ್ಣ ಮೇಲೆ ಅಪಾರ ನಂಬಿಕೆ ಇಟ್ಟಿರುವ ಸುದೀಪ್, ಅವರೊಂದಿಗೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. [ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!]

ಸುದೀಪ್ ಮುಂದೆ ಮೂರು ಕಥೆಗಳಿವೆ

ಈಗಾಗಲೇ ಸುದೀಪ್ ರವರಿಗೆ ಕೃಷ್ಣ ಮೂರು ಸ್ಕ್ರಿಪ್ಟ್ ಗಳನ್ನು ಹೇಳಿದ್ದಾರೆ. ಅದರಲ್ಲಿ ಸುದೀಪ್ ಓಕೆ ಮಾಡಿದ ಸ್ಕ್ರಿಪ್ಟ್ ನ ಕೃಷ್ಣ ಕೈಗೆತ್ತಿಕೊಳ್ಳಲಿದ್ದಾರೆ. ['ಹೆಬ್ಬುಲಿ' ವಿಮರ್ಶೆ: ಗನ್ ಹಿಡಿದು ಘರ್ಜಿಸಿದ ಆರಡಿ ಟೈಗರ್ ಸೂಪರ್ ಗುರು]

ಅಕ್ಟೋಬರ್ ನಲ್ಲಿ ಶುರು

'ದಿ ವಿಲನ್' ಚಿತ್ರದ ಚಿತ್ರೀಕರಣ ಮುಗಿದ ಬಳಿಕ.. ಅಂದ್ರೆ ಅಕ್ಟೋಬರ್ ನಲ್ಲಿ ಕೃಷ್ಣ-ಸುದೀಪ್ ಕಾಂಬಿನೇಷನ್ ನ ಎರಡನೇ ಸಿನಿಮಾ ಸೆಟ್ಟೇರಲಿದೆ.

English summary
'Hebbuli' director Krishna has taken his twitter account to announce his directorial next with Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada