Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶ್ರೇಷ್ಠ ಗಾಯಕ ಶಾಸ್ತ್ರಿ ಕಂಠದಲ್ಲಿ ಮೂಡಿದ 6 ಶ್ರೇಷ್ಠ ಗೀತೆಗಳು
1996ರಲ್ಲಿ ತೆರೆಕಂಡ ಕಾಶೀನಾಥ್ ಅಭಿನಯದ 'ಅಜಗಜಾಂತರ' ಚಿತ್ರದಿಂದ ತಮ್ಮ ಸಂಗೀತ ಪಯಣವನ್ನು ಆರಂಭಿಸಿದ ಶಾಸ್ತ್ರೀಯವರು ಇದುವರೆಗೂ 300 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವುದೇ ಅಲ್ಲದೆ 15ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಯಿಸಿದ್ದ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವ' ಗೀತೆಯಿಂದಲೇ ಇಂದಿಗೂ ಪ್ರಸಿದ್ಧಿ ಹೊಂದಿರುವ ಶಾಸ್ತ್ರಿ ಈ ಹಾಡಿಗಾಗಿ ರಾಜ್ಯ ಪ್ರಶಸ್ತಿ ಗಳಿಸಿಕೊಂಡಿದ್ದರು.
ನಾದಬ್ರಹ್ಮ ಹಂಸಲೇಖ ಹಾಗೂ ವಿ.ಮನೋಹರ್ ಅವರ ಬಳಿ ಶಿಷ್ಯ ವೃತ್ತಿಯನ್ನೂ ಮಾಡಿದ್ದ ಎಲ್.ಎನ್.ಶಾಸ್ತ್ರಿಯವರು 'ಕನಸಲ್ಲೂ ನೀನೇ ಮನಸಲ್ಲೂ ನೀನೇ' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. 'ರವಿಮಾಮ', 'ಆಂಟಿ ಪ್ರೀತ್ಸೆ', 'ಹಾಲು ಸಕ್ಕರೆ', 'ನಿನಗೋಸ್ಕರ', 'ಬಳ್ಳಾರಿ ನಾಗ', 'ಡೆಡ್ಲಿ -2', 'ಫ್ಲಾಪ್', 'ಮೆಲೋಡಿ' ಮುಂತಾದ ಗೀತೆಗಳಿಗೆ ಸಂಗೀತವನ್ನು ನೀಡಿದ್ದಾರೆ.
ಎಲ್.ಎನ್ ಶಾಸ್ತ್ರಿ ಅವರ ಸಂಗೀತ ಸಾಗರದಲ್ಲಿ ಕೆಲವೊಂದು ಹಾಡುಗಳು ಪದೇ ಪದೇ ಕೇಳಬೇಕು ಎನಿಸುತ್ತದೆ. ಅಂತಹ ಹಾಡುಗಳ ಪಟ್ಟಿ ಇಲ್ಲಿದೆ ನೋಡಿ.....

ಅವಳಲ್ಲಿ......ಇವನಲ್ಲಿ
ಕುಮಾರ್ ಗೋವಿಂದು ನಾಯಕನಾಗಿ ಅಭಿನಯಿಸಿದ್ದ 'ಶ್' ಚಿತ್ರದ ''ಅವಳಲ್ಲಿ......ಇವನಲ್ಲಿ'' ಹಾಡಿಗೆ ಧ್ವನಿಯಾಗಿದ್ದವರೇ ಎಲ್.ಎನ್ ಶಾಸ್ತ್ರಿ ಅವರು. ಈ ಹಾಡಿಗೆ ಸಾಧುಕೋಕಿಲಾ ಸಂಗೀತ ಸಂಯೋಜನೆ ಮಾಡಿದ್ದರು.
ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ

ಕೋಲುಮಂಡೆ ಜಂಗಮ ದೇವ....
ಎಲ್.ಎನ್ ಶಾಸ್ತ್ರಿ ಅವರು ಹಾಡಿರುವ ಹಾಡುಗಳಲ್ಲಿ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವ....' ಹಾಡು ಹೆಚ್ಚು ಖ್ಯಾತಿ ಗಳಿಸಿಕೊಂಡಿದೆ. ಈ ಹಾಡಿನ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿದೆ. ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದರು.
ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
ಗಾನ ನಿಲ್ಲಿಸಿದ ಶ್ರೇಷ್ಠ ಗಾಯಕನಿಗೆ ಕಂಬನಿ ಮಿಡಿದ ಸಂಗೀತಲೋಕ

ಲಾಲಿ ಸುವ್ವಾಲಿ.....
ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬಂದಿದ್ದ 'ಜೋಡಿ ಹಕ್ಕಿ' ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್. ಇದರಲ್ಲಿ ಎಲ್.ಎನ್ ಶಾಸ್ತ್ರಿ ಹಾಡಿದ್ದ ''ಲಾಲಿ ಸುವ್ವಾಲಿ.....'' ಹಾಡು ಹೆಚ್ಚು ಕಾಡುತ್ತೆ. ವಿ.ಮನೋಹರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದರು.
ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

ಹೇಳ್ಕೊಳ್ಳೊಕೊಂದೂರು....
ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದ ಎ ಚಿತ್ರದ ಹಾಡುಗಳು ಕೂಡ ಒಂದಕ್ಕಿಂತ ಒಂದು ಬ್ಲ್ಯಾಕ್ ಬಸ್ಟರ್ ಆಗಿದ್ದವು. ಈ ಚಿತ್ರದಲ್ಲಿ ಶಾಸ್ತ್ರಿ ಅವರು ಮೂರು ಹಾಡುಗಳನ್ನ ಹಾಡಿದ್ದು, ''ಹೇಳ್ಕೊಳ್ಳೊಕೊಂದೂರು........'' ಹಾಡು ತುಂಬಾ ಕಾಡುತ್ತೆ. ಗುರುಕಿರಣ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು.
ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ
ಸ್ವರ ನಿಲ್ಲಿಸಿದ ಗಾನ ಕೋಗಿಲೆ ಎಲ್.ಎನ್.ಶಾಸ್ತ್ರಿಗೆ ರೇಖಾ ರಾಣಿ ನುಡಿ ನಮನ

ಅಂತಿಂಥ ಗಂಡು ನಾನಲ್ಲ...
ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡ ಮೊದಲ ಚಿತ್ರ ಭಂಡ ನನ್ನ ಗಂಡ ಚಿತ್ರದಲ್ಲಿ ಟೈಟಲ್ ಹಾಡು ಹಾಡಿರುವುದು ಎಲ್.ಎನ್ ಶಾಸ್ತ್ರಿ. 'ಅಂತಿಂಥ ಗಂಡು ನಾನಲ್ಲ....' ಈ ಹಾಡು ಇಂದಿಗೂ ಜಗ್ಗೇಶ್ ಅವರ ಪಾಲಿಗೆ ಎವರ್ ಗ್ರೀನ್ ಹಾಡು.
ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

ಕರುನಾಡೇ.....
ಕ್ರೇಜಿಸ್ಟಾರ್ ರವಿಂದ್ರನ್ ಅಭಿನಯದ 'ಮಲ್ಲ' ಚಿತ್ರದ ಸೂಪರ್ ಹಿಟ್ ಹಾಡು 'ಕರುನಾಡೇ......' ಗೀತೆಯನ್ನ ಕೂಡ ಎಲ್.ಎನ್ ಶಾಸ್ತ್ರಿ ಅವರೇ ಹಾಡಿದ್ದರು.
ಈ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ