For Quick Alerts
  ALLOW NOTIFICATIONS  
  For Daily Alerts

  ಲಹರಿ ಆಡಿಯೋಕ್ಕೆ 'ವಜ್ರದ ಉಡುಗೊರೆ' ಕಳಿಸಿದ ಯೂಟ್ಯೂಬ್

  |

  ಲಹರಿ ಆಡಿಯೋ ಸಂಸ್ಥೆ ಭಾರತದ ಪ್ರಮುಖ ಆಡಿಯೋ ಸಂಸ್ಥೆಗಳಲ್ಲಿ ಒಂದು. ದಕ್ಷಿಣ ಭಾರತದಲ್ಲಿ ಲಹರಿ ಆಡಿಯೋ ಸಂಸ್ಥೆ ನಂಬರ್ 1 ಆಡಿಯೋ ಸಂಸ್ಥೆಯಾಗಿದೆ.

  ಲಹರಿ ಆಡಿಯೋ ಸಂಸ್ಥೆಯು ಹತ್ತು ವರ್ಷದ ಹಿಂದೆಯೇ ಯೂಟ್ಯೂಬ್ ಚಾನೆಲ್ ತೆರೆದಿದ್ದು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಂದಿ ಸಬ್‌ಸ್ಕ್ರೈಬರ್ಸ್ ಹೊಂದಿರುವ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಆಗಿದೆ.

  ಲಹರಿ ಆಡಿಯೋ ಸಂಸ್ಥೆಯ ಯೂಟ್ಯೂಬ್‌ ಚಾನೆಲ್‌ಗೆ 1.18 ಕೋಟಿ ಚಂದಾದಾರರಿದ್ದಾರೆ. ತೆಲುಗು, ಮಲಯಾಳಂ, ತಮಿಳಿನ ಇನ್ಯಾವುದೇ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ಗೆ ಇಷ್ಟು ದೊಡ್ಡ ಸಂಖ್ಯೆಯ ಚಂದಾದಾರರು ಇಲ್ಲ.

  ಚಂದಾರಾರು ಹೆಚ್ಚು ಆಗುತ್ತಲೂ ಯೂಟ್ಯೂಬ್ ಸಂಸ್ಥೆಯು ಯೂಟ್ಯೂಬ್ ಚಾನೆಲ್ ಮಾಲೀಕರಿಗೆ ವಿವಿಧ ಪ್ಲೇ ಬಟನ್‌ಗಳನ್ನು ಬಹುಮಾನದ ರೂಪದಲ್ಲಿ ನೀಡುತ್ತದೆ. ಈ ಹಿಂದೆ ಸಿಲ್ವರ್, ಗೋಲ್ಡ್ ಪ್ಲೇ ಬಟನ್ ಪಡೆದಿರುವ ಲಹರಿ ಆಡಿಯೋ ಸಂಸ್ಥೆಗೆ ಈಗ ಡೈಮೆಂಡ್ ಪ್ಲೇ ಬಟನ್ ಅನ್ನು ಯೂಟ್ಯೂಬ್ ನೀಡಿದೆ.

  ಯೂಟ್ಯೂಬ್ ನೀಡಿರುವ ಡೈಮೆಂಡ್ ಪ್ಲೇ ಬಟನ್ ಹಿಡಿದು ಸಿಬ್ಬಂದಿಯ ಜೊತೆ ಫೊಟೊಕ್ಕೆ ಫೋಸು ನೀಡಿದ್ದಾರೆ ಲಹರಿ ವೇಲು. ''ಜನರ ಆಶೀರ್ವಾದದಿಂದ, ಹಾಡುಗಾರರು, ಸಂಗೀತಗಾರರು, ಸಂಗೀತ ನಿರ್ದೇಶಕರುಗಳು ನಮ್ಮೊಂದಿಗೆ ಕೈಜೋಡಿಸಿದ ನಟ-ನಟಿಯರು, ನಿರ್ಮಾಕರಿಂದ ಇದು ಸಾಧ್ಯವಾಯಿತು'' ಎಂದಿದ್ದಾರೆ.

  ಲಹರಿ ಆಡಿಯೋ ಸಂಸ್ಥೆಯು ಕರ್ನಾಟಕ ಆಡಿಯೋ ಸಂಸ್ಥೆಯಾಗಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನ ಪ್ರಭಾವ ಹೊಂದಿದೆ. ಕನ್ನಡದ, ಪ್ರೇಮಲೋಕ, ರಣಧೀರ, ರಣರಂಗ ಇನ್ನೂ ಹಲವಾರು ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಹೊಂದಿರುವ ಲಹರಿ ಇತ್ತೀಚೆಗೆ ಕೆಜಿಎಫ್ 2 ಸಿನಿಮಾದ ಆಡಿಯೋ ಹಕ್ಕನ್ನು ಬರೋಬ್ಬರಿ 7.20 ಕೋಟಿ ಹಣ ತೆತ್ತು ಖರೀದಿ ಮಾಡಿದೆ. 'ಕೆಜಿಎಫ್ 2'ನ ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಲಹರಿ ಬಳಿಯೇ ಇವೆ.

  ಭಾರತದ ಕೊರೊನಾ ಲಸಿಕೆ ಬಿಟ್ಟು ಅಮೆರಿಕ ಲಸಿಕೆಗಾಗಿ ಕಾಯ್ತಿದ್ದಾರೆ ರಮ್ಯಾ | Filmibeat Kannada

  ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಸಹ ಲಹರಿ ಖರೀದಿಸಿದೆ. ಈ ಹಿಂದೆ 3.5 ಕೋಟಿ ಮೊತ್ತಕ್ಕೆ 'ಬಾಹುಬಲಿ 2' ಸಿನಿಮಾದ ಆಡಿಯೋ ಹಕ್ಕುಗಳನ್ನು ಲಹರಿ ಖರೀದಿಸಿತ್ತು.

  English summary
  Lahari Audio company's YouTube chanele gets diamond play button from YouTube. Lahari YouTube channel has 1.10 crore subscribers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X