»   » ಸಿನಿಮಾ ತಿಥಿ ಮಾಡ್ಬೇಡಿ ಸ್ವಾಮಿ, ತಿಥಿಯಂಥ ಸಿನಿಮಾ ಮಾಡಿ

ಸಿನಿಮಾ ತಿಥಿ ಮಾಡ್ಬೇಡಿ ಸ್ವಾಮಿ, ತಿಥಿಯಂಥ ಸಿನಿಮಾ ಮಾಡಿ

By: ಕುಸುಮ
Subscribe to Filmibeat Kannada

ಒಂದು ತಿಂಗಳ ಹಿಂದೆ ತೆರೆಕಂಡ 'ತಿಥಿ' ಸಿನಿಮಾ ಇರುವ ಅಷ್ಟೂ ಸ್ಕ್ರೀನ್ಗಳಲ್ಲಿ ಹೆಚ್ಚಿನ ಶೋಗಳು ವಾರವಿಡೀ ಹೌಸ್ಫುಲ್ ನಡೀತಿದೆ. ಒಮ್ಮೆ ನೋಡಿದವರು ಮತ್ತೊಮ್ಮೆ ನೋಡ್ತಿದ್ದಾರೆ. ಕೆಲವರಂತೂ ಅದೇನ್ ಸಾರ್ ಆ ಗಡ್ಡಪ್ಪನ ಕ್ಯಾರೆಕ್ಟರ್ರು.. ಸೂ.....ಪರ್ ಎನ್ನುತ್ತಿದ್ದಾರೆ. ಜನರಿಗೂ ಈ ಸಾಂಗ್ಸು, ಫೈಟ್ಸು, ಫಾರೀನ್ ಲೊಕೇಷನ್ಗಳು ನೋಡಿ ಬೋರಾಗಿದೆ.

ಕತ್ತಲಲ್ಲಿ ಕುಳಿತು ಕಲರ್ಫುಲ್ ಸಿನಿಮಾ ನೋಡ್ಬೇಕು ಅನ್ನುತ್ತಿದ್ದ ಪ್ರೇಕ್ಷಕ ಈಗ ಕತ್ತಲಲ್ಲಿ ಕುಳಿತು ಬ್ಲ್ಯಾಕ್ ಅಂಡ್ ವೈಟ್ ತರಹ ಅನ್ನಿಸೋ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನೋಡಿ "ಏನ್ ಸಿನಿಮಾ ಮಾಡಿದ್ದಾರೆ.. ವಾವ್ ಹಿಂಗಿರ್ಬೇಕು., ಅಪ್ಪ ಅಮ್ಮನನ್ನೂ ಕರ್ಕೊಂಡು ಬಂದು ನೋಡ್ತೀನಿ ಇನ್ನೊಂದ್ಸಾರಿ' ಅಂತ ಖುಷಿಯಿಂದ ಮನೆಗೆ ಹೋಗುತ್ತಿದ್ದಾನೆ.

ಮೊನ್ನೆ ಮೊನ್ನೆ 'ತಿಥಿ' ಸಿನಿಮಾ ಎರಡನೇ ಸಾರಿ ನೋಡಿ ಥಿಯೇಟರಿಂದ ಹೊರಗಡೆ ಬಂದ ಒಬ್ಬ ಕಾಲೇಜ್ ತರುಣ ಹೇಳ್ತಿದ್ದ, "ಕಳ್ದೋಗ್ಬಿಟ್ಟೆ ಸಾರ್, ಈ ಸಿನಿಮಾ ಮುಂದೆ ಯಾವ್ ಸ್ಟಾರ್ ಸಿನಿಮಾ ನೋಡೋದು ವೇಸ್ಟು, ಇಂಥ ಸಿನಿಮಾ ಬಂದ್ರೆ ವಾರ ವಾರ ಥಿಯೇಟರ್ಗೇ ಬಂದು ಸಿನಿಮಾ ನೋಡ್ತೀನಿ". [ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]

Latest movies like Thithi attracting Kannada audience

ಯಾವ್ದೋ ಸ್ಟಾರ್ ಸಿನಿಮಾ ಬರುತ್ತೆ ಅಂತ ಕಾಯುತ್ತಿದ್ರೆ, ಮೊದಲ ವಾರ ಅಭಿಮಾನಿಗಳ ನೂಕು ನುಗ್ಗಲು, ಬ್ಲ್ಯಾಕ್ ಟಿಕೇಟ್ನವರ ಕಾಟ. ಇನ್ನೂ ಸಿನಿಮಾ ಇರುತ್ತಲ್ವಾ ಅನ್ನುವುದರೊಳಗೆ ಒಂದೇ ವಾರ, ಹೆಚ್ಚು ಅಂದ್ರೆ 2 ವಾರ. ಮೀಡಿಯಾದವ್ರು ಕೊಟ್ಟಿರೋ ಹೈಪ್ ನೋಡಿ ಈ ಶನಿವಾರ ಹೋಗಿ ಸಿನಿಮಾ ನೋಡೋಣ ಅನ್ನೋದ್ರೊಳಗೆ ಸಿನಿಮಾ ಥಿಯೇಟರ್ನಲ್ಲೇ ಇರೋದಿಲ್ಲ. ಥಿಯೇಟರ್ಗೆ ಬಂದ್ರೂ ಬಿಲ್ಡಪ್ ನೋಡೋಕಾಗದೆ ಅರ್ಧದಿಂದ ಎದ್ದು ಬಂದಿರೋ ಸ್ಟಾರ್ ಸಿನಿಮಾಗಳೇ ಹೆಚ್ಚು.

ಅಂಥದ್ರಲ್ಲಿ ಕನ್ನಡ ಸಿನೆಮಾಗಳಿಗೆ ಈಗ ಪರ್ವ ಕಾಲ. ತಿಥಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಇಷ್ಟಕಾಮ್ಯ, ಕರ್ವ, ಯೂಟರ್ನ್ ನಂಥ ಚಿತ್ರಗಳಿಗೆ ಪ್ರೇಕ್ಷಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಇದು ನಾನು ಹೇಳಿದ್ದಲ್ಲ. ಎಲ್ಲ ಸಿನಿಪ್ರೇಮಿಗಳ ಅಭಿಪ್ರಾಯ. ['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

English summary
Latest movies like Thithi, Godhi Banna Sadharana Maikattu, Karva are attracting Kannada audience to theatres. Movie lovers are fed up with formula movies. They would like to savour real life stories on big screen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada