For Quick Alerts
  ALLOW NOTIFICATIONS  
  For Daily Alerts

  ರಾಜಕಾರಣಿ ಮಗ ಅನ್ನೋದನ್ನು ಬಿಡು, ಮೊದಲು ಕನ್ನಡ ಕಲಿ ಇಲ್ಲಾಂದ್ರೆ ಬೆಳೆಯಲ್ಲ; ಝೈದ್ ಖಾನ್‌ಗೆ ಯಶ್ ಕ್ಲಾಸ್!

  |

  ಝೈದ್ ಖಾನ್ ಹಾಗೂ ಸೋನಾಲ್ ಮೊಂತೇರೊ ಅಭಿನಯದ ಬನಾರಸ್ ಚಿತ್ರ ನಾಳೆ ( ನವೆಂಬರ್ 4 ) ದೇಶಾದ್ಯಂತ ದೊಡ್ಡಮಟ್ಟದಲ್ಲಿ ತೆರೆಕಾಣಲು ಸಿದ್ಧವಾಗಿದೆ.

  ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿರುವ ಈ ಬನಾರಸ್ ಚಿತ್ರಕ್ಕೆ ಬೆಲ್ ಬಾಟಮ್ ಖ್ಯಾತಿಯ ಜಯತೀರ್ಥ ನಿರ್ದೇಶನವಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಬನಾರಸ್ ಚಿತ್ರದ ಟ್ರೈಲರ್ ವೀಕ್ಷಿಸಿದ ಸಿನಿಪ್ರೇಕ್ಷಕರು ಇದೊಂದು ಕಂಟೆಂಟ್ ಇರುವಂತಹ ಚಿತ್ರದ ರೀತಿ ತೋರುತ್ತಿದೆ ಎಂಬ ಅಭಿಪ್ರಾಯಗಳನ್ನು ಹೆಚ್ಚಾಗಿ ವ್ಯಕ್ತಪಡಿಸಿದ್ದರು.

  ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದ ನಟ ಝೈದ್ ಖಾನ್ ಬನಾರಸ್ ಚಿತ್ರದ ಟ್ರೈಲರ್ ನಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡಿದ್ದು ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಈ ಹಿಂದೆ ಝೈದ್ ಖಾನ್ ಕಾರ್ಯಕ್ರಮಗಳಲ್ಲಿ ಹಾಗೂ ಸಂದರ್ಶನದಲ್ಲಿ ಮಾತನಾಡಿದ್ದ ಕನ್ನಡಕ್ಕೂ ಬನಾರಸ್ ಟ್ರೈಲರ್ ವಿಡಿಯೋದಲ್ಲಿ ಇದ್ದ ಝೈದ್ ಖಾನ್ ಅವರ ಕನ್ನಡಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಪರವಾಗಿಲ್ಲ ಝೈದ್ ಖಾನ್ ಹೋಂವರ್ಕ್ ಮಾಡಿದಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗೆ ಸಾಕಷ್ಟು ಚರ್ಚೆಗೊಳಗಾಗಿದ್ದ ತನ್ನ ಕನ್ನಡ ಉಚ್ಚಾರಣೆ ಕುರಿತು ಇದೀಗ ಸ್ವತಃ ಝೈದ್ ಖಾನ್ ಅವರೇ ಮಾತನಾಡಿದ್ದಾರೆ.

   'ರಾಜಕಾರಣಿ ಮಗ ಅನ್ನೋದನ್ನು ಬಿಟ್ಟು ಹೊರಗೆ ಬಾ'

  'ರಾಜಕಾರಣಿ ಮಗ ಅನ್ನೋದನ್ನು ಬಿಟ್ಟು ಹೊರಗೆ ಬಾ'

  ಫಿಲ್ಮಾಗ್ರಫಿ ಎಂಬ ಕನ್ನಡದ ಯೂಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಝೈದ್ ಖಾನ್‌ ನಟ ಯಶ್ ತನಗೆ ನೀಡಿದ್ದ ಸಲಹೆಯನ್ನು ಬಿಚ್ಚಿಟ್ಟರು. 'ಚಿತ್ರದ ಕತೆ ಆಯ್ಕೆಯ ಸಮಯದಲ್ಲಿ ಭೇಟಿಯಾಗಿದ್ದಾಗ ಯಶ್ ಸರ್ ಅವರು ನನಗೆ ಕ್ಲಿಯರ್ ಆಗಿ ಹೇಳಿದರು. ನೋಡು ಇದು ಆಟ ಅಲ್ಲ, ತುಂಬಾ ಸೀರಿಯಸ್ ಆಗಿ ಮಾಡಬೇಕು. ನೀನು ಪೊಲಿಟೀಷಿಯನ್ ಮಗ, ಲಕ್ಷುರಿಯಸ್ ಲೈಫ್ ಇದೆಲ್ಲವನ್ನೂ ಬಿಟ್ಟು ಆಚೆ ಬರಬೇಕು ಇಲ್ಲಾಂದ್ರೆ ನೀನು ಇಲ್ಲಿ ಯಾವುದೇ ಸಾಧನೆಯನ್ನು ಸಹ ಮಾಡಲಾಗುವುದಿಲ್ಲ' ಎಂದು ದೊಡ್ಡ ಸಲಹೆಯೊಂದನ್ನು ನೀಡಿದ್ದರು ಎಂಬುದನ್ನು ಝೈದ್ ಖಾನ್ ಬಿಚ್ಚಿಟ್ಟರು.

   ಕನ್ನಡ ಕಲಿ ಎಂದಿದ್ರು!

  ಕನ್ನಡ ಕಲಿ ಎಂದಿದ್ರು!

  ಮುಂದುವರಿದು ಮಾತನಾಡಿದ ಝೈದ್ ಖಾನ್ 'ಯಶ್ ಅವರನ್ನು ಅಂದು ಭೇಟಿ ಮಾಡಿದ್ದ ಸಂದರ್ಭದಲ್ಲಿ ನನಗೆ ಇಷ್ಟು ಸ್ಪಷ್ಟವಾಗಿ ಕನ್ನಡ ಬರುತ್ತಿರಲಿಲ್ಲ. ಕನ್ನಡ ಬರುತ್ತಿತ್ತು ಆದರೆ ಉಚ್ಚಾರಣೆ ಮತ್ತು ವ್ಯಾಕರಣದಲ್ಲಿ ತಪ್ಪು ಮಾಡುತ್ತಿದ್ದೆ. ಇದನ್ನು ಗಮನಿಸಿದ ಯಶ್ ಸರ್ ದಿನಾ ಪೇಪರ್ ಓದು ಆದಷ್ಟು ಕನ್ನಡದಲ್ಲಿ ಮಾತನಾಡಿ ಕನ್ನಡ ಕಲಿತುಕೋ, ಇಲ್ಲವೆಂದರೆ ಕನ್ನಡ ಚಿತ್ರರಂಗದಲ್ಲಿ ನಿನಗೆ ಭವಿಷ್ಯವಿಲ್ಲ ಎಂದು ಸಲಹೆ ನೀಡಿದರು' ಎಂದು ಮುಕ್ತವಾಗಿ ಮಾತನಾಡಿದರು.

   ಇದು ನೆಗೆಟಿವ್ ಅಲ್ಲ ಪಾಸಿಟಿವ್..

  ಇದು ನೆಗೆಟಿವ್ ಅಲ್ಲ ಪಾಸಿಟಿವ್..

  ಇನ್ನು ಯಶ್ ಈ ರೀತಿ ತನಗೆ ಸಲಹೆ ನೀಡಿದ್ದನ್ನು ನೆಗೆಟಿವ್ ಎಂದು ತಾನು ತೆಗೆದುಕೊಳ್ಳಲೇ ಇಲ್ಲ, ಬದಲಾಗಿ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡೆ ಎಂದು ಝೈದ್ ಖಾನ್ ಹೇಳಿದರು. ಯಶ್ ಅವರು ಈ ರೀತಿ ಸಲಹೆ ನೀಡುತ್ತಿದ್ದಂತೆ ತಾನು ಗೌರಿ ದತ್ ಎಂಬುವವರ ಬಳಿ 9 ತಿಂಗಳು ಕನ್ನಡ ಅಭ್ಯಾಸ ನಡೆಸಿದ್ದಾಗಿ ಹೇಳಿಕೊಂಡರು ಹಾಗೂ ಅದರಿಂದಲೇ ತನ್ನ ಕನ್ನಡ ಮತ್ತಷ್ಟು ಬೆಳವಣಿಗೆ ಕಂಡಿತು ಎಂದು ಸಹ ಜೈದ್ ಖಾನ್ ಹೇಳಿಕೊಂಡಿದ್ದಾರೆ.

  English summary
  Learn Kannada otherwise You don't have future in Kannada films; Zaid Khan revealed Yash's warning. Read on,
  Thursday, November 3, 2022, 16:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X