»   » ಪವರ್ ಸ್ಟಾರ್ ಬಗ್ಗೆ ನೀವರಿಯದ ಗುಣವಿಶೇಷಣಗಳು

ಪವರ್ ಸ್ಟಾರ್ ಬಗ್ಗೆ ನೀವರಿಯದ ಗುಣವಿಶೇಷಣಗಳು

By: ಜೀವನರಸಿಕ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರಿಗೂ ಇಷ್ಟವಾಗುವಂತಹ ವ್ಯಕ್ತಿ. ಪುನೀತ್ ಹೇಗೆ ಅಂದ್ರೆ ಅವರ ಸಿನಿಮಾಗಳ ಹಾಗೆ ಯಾವುದೇ ಆಡಂಬರಗಳಿಲ್ಲದ ಕೂಲ್ ಕೂಲ್ ನಟ. ಎಲ್ಲೂ ಸ್ಟಾರ್ ತರಹ ತನನ್ನ ತಾನು ತೋರಿಸಿಕೊಳ್ಳದ ವ್ಯಕ್ತಿತ್ವ.

ಹಲವು ಸ್ಟಾರ್ ಗಳ ವಿಚಾರದಲ್ಲಿ ಗೆಲುವು ಸೋಲು ಲೆಕ್ಕಕ್ಕೆ ಬರುತ್ತೆ. ಆದ್ರೆ ಸೋಲು ಗೆಲವುಗಳನ್ನ ಒಂದೇ ತಕ್ಕಡಿಯಲ್ಲಿ ತೂಗೋ ನಟ ಅಂದ್ರೆ ಪುನೀತ್. ಪುನೀತ್ ಸೋಲಿಗೆ ಕುಗ್ಗಲ್ಲ ಗೆಲುವಿಗೆ ಹಿಗ್ಗಲ್ಲ.

ಪುನೀತ್ ರ ಇಂತಹಾ ವಿರಳಾತಿವಿರಳ ಗುಣಗಳೇ ಅವರನ್ನ ಎವಗ್ರೀನ್ ಆಗಿ ಮಾಡಿವೆ. ಪುನೀತ್ ಸಿನಿಮಾಗಳು ಎಷ್ಟೇ ಸೋತ್ರೂ ಅಭಿಮಾನಿಗಳ ಅಭಿಮಾನ ಮಾತ್ರ ಸಾಸಿವೆ ಕಾಳಿನಷ್ಟೂ ಕಡಿಮೆಯಾಗಿಲ್ಲ. ಅವರ ಅಭಿಮಾನ ಪ್ರೀತಿ ಮತ್ತಷ್ಟು ಹೆಚ್ಚಿದೆ.

ತನ್ನ ವಿನಯ ವಿಧೇಯತೆಯಿಂದಾನೇ ಚಿತ್ರಪ್ರೇಮಿಗಳ ಮತ್ತು ಚಿತ್ರರಂಗದವರ ಮೆಚ್ಚಿನ ನಟನಾಗಿರೋ ಪುನೀತ್ ಹುಟ್ಟುಹಬ್ಬದ ದಿನ (ಮಾ.17) ಅವರ ಬಗ್ಗೆ ನೀವರಿಯದ ವಿಶೇಷ ಗುಣಗಳನ್ನ ನಿಮ್ಮ ಮುಂದಿಡ್ತಿದ್ದೀವಿ, ಸ್ಲೈಡ್ ಸರಿಸುತ್ತಾ ಓದಿ.

ವಿನಯ ವಿಧೇಯತೆ

ಪವರ್ ಸ್ಟಾರ್ ಪುನೀತ್ ವಿನಯ ವಿಧೇಯತೆಯಿಂದಾನೇ ಚಿತ್ರರಂಗದಲ್ಲಿ ಎಲ್ಲರ ಪ್ರೀತಿಯ ಅಪ್ಪು. ಪವರ್ ಸ್ಟಾರ್ ಅನ್ನೋ ಹೆಸರಿದ್ದರೂ ಪುನೀತ್ ಮಾತಿನಲ್ಲಿ ನಡತೆಯಲ್ಲಿ ಪುನೀತ್ ಒರಟುತನ ಇಲ್ಲದ ನಗುಮೊಗದ ಹುಡುಗ.

ಸೀದಾ ಸಾದಾ ಹೈದ

ವಯಸ್ಸು ಹೆಚ್ಚಿದಂತೆಲ್ಲಾ ಗಂಭೀರವಾಗ್ತಾ ಹೋಗೋದು. ಸ್ಟಾರ್ ಅನ್ನೋ ಆಟಿಟ್ಯೂಡ್ ನ ನಟರ ಮುಖದಲ್ಲಿ ಮಾತಲ್ಲಿ ಕಾಣ್ತೀವಿ ಆದ್ರೆ ಅದ್ಯಾವುದೂ ಇಲ್ಲದ ಸೀದಾ ಸಾದಾ ಹಳ್ಳಿಹೈದನಂತಹಾ ಪುನೀತ್ ಎಲ್ಲರನ್ನೂ ಸೆಳೆಯೋದು ತಮ್ಮ ಇಂತಹಾ ಗುಣದಿಂದ್ಲೇ.

40ರ ವಯಸ್ಸಲ್ಲೂ ನಗು

ಪವರ್ ಸ್ಟಾರ್ ಮನೆಗೆ ಯಾರೇ ಅಭಿಮಾನಿಗಳು ಎಂಟ್ರಿಕೊಟ್ರೂ ಗೇಟ್ ಗೆ ಬಂದು ಒಳಕ್ಕೆ ಕರೆದು ಫೋಟೊ ತೆಗಿಸಿಕೊಂಡು ಮಾತನಾಡಿಸಿ ಕಳಿಸೋ ಪುನೀತ್ 40ರ ವಯಸ್ಸಲ್ಲೂ 20ರ ಹುಡುಗನ ತರಹ ನಗು ನಗುತ್ತಾ ಇರ್ತಾರೆ.

ಸಿಂಪಲ್ ಕಾಸ್ಟ್ಯೂಮ್

ಪುನೀತ್ ಡ್ರೆಸ್ಸಿಂಗ್ ವಿಷಯದಲ್ಲಂತೂ ವೆರಿ ವೆರಿ ಸಿಂಪಲ್. ಹಿಂಗೇ ಇರ್ಬೇಕು ಹಂಗೇ ಇರ್ಬೇಕು ಅನ್ನೋ ಯಾವ ಯೋಚನೆಯನ್ನೂ ಮಾಡೋದೇ ಇಲ್ಲ ಪುನೀತ್. ಮೈ ಮುಚ್ಚೋಕೆ ಬಟ್ಟೆ ಇದ್ರೆ ಸಾಕು ಅದಕ್ಯಾಕೆ ಬ್ರ್ಯಾಂಡು ಬ್ಯಾಮಡು ಎಲ್ಲ ಅಂತಾರೆ.

ಹೋಮ್ ವರ್ಕ್ ಮಾಡ್ತಾರೆ ಪವರ್ ಸ್ಟಾರ್

ಸ್ಟಾರ್ ನಟ ಆದ್ರೂ ಅನುಭವ ಸಾಕಷ್ಟಿದ್ರೂ ಪಾತ್ರದ ವಿಷಯಕ್ಕೆ ಬಂದ್ರೆ ಪುನೀತ್ ಹಾರ್ಡ್ ವರ್ಕರ್. ಒಂದೊಂದು ಸೀನ್ ಗೂ ತನ್ನದೇ ಆದ ಐಡಿಯಾ ಇಟ್ಕೊಂಡು ನಿರ್ದೇಶಕರ ಹತ್ತಿರ ಚರ್ಚೆ ಮಾಡಿ ತಯಾರಾಗ್ತಾರೆ. ಪಾತ್ರಕ್ಕೆ ಬೇಕಾದ ಡೆಡಿಕೇಷನ್ ಕೊಡೋದ್ರಲ್ಲಿ ಪುನೀತ್ ಸೂಪರ್ ಅಂತಾರೆ ನಿರ್ದೇಶಕರು.

ಅಣ್ಣ ಸೂಪರ್ ಅಂತಾರೆ ತಮ್ಮ

ಅಣ್ಣ ಶಿವರಾಜ್ ಕುಮಾರ್ ಎನರ್ಜಿ, ಡಾನ್ಸು ಸೂಪರ್ ಅಂತ ಶಿವಣ್ಣರನ್ನ ಪುನೀತ್ ಹೊಗಳ್ತಾರೆ. ಆದ್ರೆ ಪುನೀತೇ ನಂಗೇ ಆಕ್ಟಿಂಗ್ ಗೆ ಪ್ರೇರಣೆ ಅಂತ ಶಿವಣ್ಣ ಹೇಳ್ತಾರೆ. ಸದ್ಯದ ಗುಡ್ ನ್ಯೂಸ್ ಅಂದ್ರೆ ಈ ಇಬ್ಬರೂ ಸ್ಟಾರ್ ಗಳು ಒಟ್ಟಾಗಿ ನಟಿಸ್ತಿರೋದು ನಿಮ್ಗೆ ಗೊತ್ತೇ ಇದೆ.

40ರ ನವಯುವಕನಿಗೆ ನಮ್ಮ ವಿಶ್

40ರ ವಸಂತಕ್ಕೆ ಕಾಲಿಡ್ತಿರೋ ಪವರ್ ಸ್ಟಾರ್ ಗೆ ನಮ್ಮ ಕಡೆಯಿಂದ ಶುಭಾಶಯಗಳು. ಪುನೀತ್ ಹೀಗೆ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಗ್, ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುತ್ತಿರಲಿ.

    English summary
    Sandalwood Power Star Puneeth Rajkumar celebrating 40th birthday on 17th March, here is the interesting facts about the actor. The actor is known for his simplicity.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada