Don't Miss!
- News
ತವರು ಜಿಲ್ಲೆಯಲ್ಲಿ 335 ಕೋಟಿ ರೂ.ಗಳ ಯೋಜನೆಗಳಿಗೆ ಸಿಎಂ ಅಡಿಗಲ್ಲು
- Lifestyle
ಗರುಡ ಪುರಾಣ ಪ್ರಕಾರ ಈ 4 ಗುಣಗಳಿದ್ದರೆ ಆ ವ್ಯಕ್ತಿ ಖಂಡಿತ ಯಶಸ್ವಿಯಾಗುತ್ತಾನೆ
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Oscars Nominations 2023 : ಆಸ್ಕರ್ ಪ್ರಶಸ್ತಿಗೆ ಅರ್ಹತೆ ಗಿಟ್ಟಿಸಿಕೊಂಡ ದಕ್ಷಿಣ ಭಾರತದ 5 ಚಿತ್ರಗಳಿವು
95ನೇ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳಲು ಅರ್ಹತೆ ಗಿಟ್ಟಿಸಿಕೊಂಡಿರುವ ವಿಶ್ವದ 301 ಚಿತ್ರಗಳ ಪಟ್ಟಿ ಇಂದು ( ಜನವರಿ 10 ) ಬಿಡುಗಡೆಗೊಂಡಿದೆ. ಇಷ್ಟು ವರ್ಷಗಳ ಕಾಲ ಆಸ್ಕರ್ ರೇಸ್‌ನಲ್ಲಿ ಭಾರತದ ಚಿತ್ರಗಳು ಅರ್ಹತೆ ಗಿಟ್ಟಿಸಿಕೊಳ್ಳುವುದು ಕಷ್ಟ ಹಾಗೂ ಅತಿ ವಿರಳ ಎಂಬ ಮಾತಿತ್ತು. ಆದರೆ ಈ ಬಾರಿ ಭಾರತದ ವಿವಿಧ ಚಿತ್ರರಂಗಗಳ ಹಲವಾರು ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡಿವೆ.
ಅದರಲ್ಲಿಯೂ ದಕ್ಷಿಣ ಭಾರತ ಚಿತ್ರರಂಗಗಳ ಐದು ಚಿತ್ರಗಳು ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿರುವುದು ವಿಶೇಷವಾಗಿದೆ. ಕನ್ನಡ ಚಿತ್ರರಂಗದ ಚಿತ್ರಗಳಾದ ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳಲು ಅರ್ಹತೆ ಗಿಟ್ಟಿಸಿಕೊಂಡಿದ್ದು, ತೆಲುಗಿನ ಆರ್ ಆರ್ ಆರ್ ಹಾಗೂ ತಮಿಳು ಚಿತ್ರರಂಗದ ರಾಕೆಟ್ರಿ ದ ನಂಬಿ ಎಫೆಕ್ಟ್ ಮತ್ತು ಇರವಿನ್ನಳಲ್ ಚಿತ್ರಗಳು ಅರ್ಹತೆ ಪಡೆದುಕೊಂಡಿರುವ ವಿಶ್ವದ 301 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಕಳೆದ ವರ್ಷ ಬಾಕ್ಸ್ ಆಫೀಸ್ ವಿಚಾರದಲ್ಲಿ ಧೂಳ್ ಎಬ್ಬಿಸಿದ್ದ ದಕ್ಷಿಣ ಭಾರತ ಚಿತ್ರರಂಗ ಈಗ ಆಸ್ಕರ್ ಪ್ರಶಸ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವುದರಲ್ಲಿಯೂ ಸಹ ಸದ್ದು ಮಾಡುತ್ತಿವೆ. ಸದ್ಯ ಅರ್ಹತೆ ಗಿಟ್ಟಿಸಿಕೊಂಡಿರುವ 301 ಚಿತ್ರಗಳಲ್ಲಿ ಯಾವ ಚಿತ್ರಗಳು ನಾಮ ನಿರ್ದೇಶನ ಪಡೆದುಕೊಳ್ಳಲಿವೆ ಎಂಬುದು ಜನವರಿ 24ರಂದು ಬಿಡುಗಡೆಗೊಳ್ಳಲಿರುವ ನಾಮಿನೇಟೆಡ್ ಮೂವೀಸ್ ಪಟ್ಟಿಯ ಮೂಲಕ ತಿಳಿಯಲಿದೆ. ಇನ್ನು ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 12ರ ಭಾನುವಾರದಂದು ಜರುಗಲಿದೆ. ಮಾರ್ಚ್ 2ರ ಬೆಳಗ್ಗೆ ಒಂಬತ್ತು ಗಂಟೆಯಿಂದ ಮಾರ್ಚ್ 7ರ ಸಂಜೆ ಐದು ಗಂಟೆಯವರೆಗೆ ನಾಮಿನೇಟ್ ಆದ ಕಲಾವಿದರು ಹಾಗೂ ಚಿತ್ರಗಳಿಗೆ ವೋಟಿಂಗ್ ನಡೆಯಲಿದ್ದು, ಮಾರ್ಚ್ 12ರ ಭಾನುವಾರದಂದು 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ರೀತಿ ಆಸ್ಕರ್ ರೇಸ್ ನಡೆಯಲಿದ್ದು, ಆಸ್ಕರ್ ಸದಸ್ಯರು ನೀಡುವ ಮತಗಳ ಆಧಾರದ ಮೇಲೆ ಆಸ್ಕರ್ ವಿಜೇತರನ್ನು ವಿಜೇತರೆಂದು ಆಯ್ಕೆ ಮಾಡಲಾಗುತ್ತದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್‌ನ ಸುಮಾರು 9500 ನುರಿತ ಸದಸ್ಯರು ಇಲ್ಲಿ ವೋಟ್ ಮಾಡಲಿದ್ದಾರೆ.