twitter
    For Quick Alerts
    ALLOW NOTIFICATIONS  
    For Daily Alerts

    ಅರ್ಧವಾರ್ಷಿಕ ರಿಪೋರ್ಟ್ : ರಿಮೇಕ್ ಚಿತ್ರಗಳಿಗೆ ಭಾರೀ ಪೆಟ್ಟು

    By ಬಾಲರಾಜ್ ತಂತ್ರಿ
    |

    ಪರಭಾಷಾ ಚಿತ್ರಗಳ ಹಾವಳಿಗಳ ನಡುವೆಯೂ ಮೊದಲ ಆರು ತಿಂಗಳಲ್ಲಿ 54 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ.

    ವರ್ಷದಿಂದ ವರ್ಷಕ್ಕೆ ಕನ್ನಡ ಚಿತ್ರಗಳು ಸದ್ದು ಮಾಡುತ್ತಿರುವುದು, ಬಾಕ್ಸಾಫೀಸಿನಲ್ಲಿ ಗದ್ದಲ ಮಾಡುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷ.

    ಮೊದಲ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ, 1974ರಲ್ಲಿ ಬಿಡುಗಡೆಯಾಗಿದ್ದ ರಾಜ್, ಕಲ್ಪನ, ಮಂಜುಳಾ ಅಭಿನಯದ ಬ್ಲಾಕ್ ಬಸ್ಟರ್ 'ಎರಡು ಕನಸು' ರಿರಿಲೀಸ್ ಆಗಿ ಮತ್ತೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದದ್ದು (ಕಸ್ತೂರಿನಿವಾಸ ಚಿತ್ರದ ಮಟ್ಟಿಗೆ ಅಲ್ಲದಿದ್ದರೂ) ಗಮನಾರ್ಹ.

    ಇದಲ್ಲದೇ, ಶಿವಣ್ಣ ಅಭಿನಯದ ಉಪೇಂದ್ರ ನಿರ್ದೇಶನದ ಓಂ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾರ್ಚ್ ಹನ್ನೆರಡರಂದು ಬಿಡುಗಡೆಯಾಗಿತ್ತು.

    ಓಂ ಚಿತ್ರಕ್ಕೆ ರಾಜ್ಯಾದ್ಯಂತ ಮತ್ತೊಮ್ಮೆ, ಮಗುದೊಮ್ಮೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು ಮೊದಲ ಆರು ತಿಂಗಳ ಕನ್ನಡ ಚಿತ್ರದ ಪ್ರೊಗ್ರೆಸ್ ರಿಪೋರ್ಟಿನ ಹೈಲೆಟ್.

    ಜನವರಿಯಿಂದ ಜೂನ್ 2015 ವರೆಗಿನ ಬಿಡುಗಡೆಯಾದ ಚಿತ್ರಗಳಲ್ಲಿ ರಿಮೇಕ್ ಚಿತ್ರಗಳಾವು, ಅದಕ್ಕೆ ಕನ್ನಡದ ಪ್ರೇಕ್ಷಕ ನೀಡಿದ ಹಣೆಬರಹ ಏನು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

    ಮೊದಲ ಚಿತ್ರವೇ ರಿಮೇಕ್

    ಮೊದಲ ಚಿತ್ರವೇ ರಿಮೇಕ್

    2015ರ ಹೊಸ ವರ್ಷದ ದಿನ ಬಿಡುಗಡೆಯಾದ ಮೊದಲ ಚಿತ್ರವೇ ರಿಮೇಕ್ ಚಿತ್ರ. ಅದು ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ನಂದಿನಿ ರೈ ಅಭಿನಯದ 'ಖುಷಿ ಖುಷಿಯಾಗಿ' ಚಿತ್ರ. ಇದು ತೆಲುಗಿನ ಗುಂಡೆ ಜಾರಿ ಗುಲ್ಲಂತಾಯೆಂದಿ ಚಿತ್ರದ ರಿಮೇಕ್. ಇದು ಮೂರಕ್ಕೆ ಏರಿಲ್ಲ, ಆರಕ್ಕೆ ಇಳಿದಿಲ್ಲ. ಚಿತ್ರವನ್ನು ಯೋಗಿ ಜಿ ರಾಜ್ ನಿರ್ದೇಶಿಸಿದ್ದರು.

    ಜಾಕ್ಸನ್

    ಜಾಕ್ಸನ್

    ಸನತ್ ಕುಮಾರ್ ನಿರ್ದೇಶನದ ಈ ಚಿತ್ರ ತಮಿಳಿನ ಇದರಕುತಾಮೆ ಆಸೆಪಟ್ಟೈ ಬಾಲಕುಮಾರ್ ಚಿತ್ರದ ರಿಮೇಕ್. ಚಿತ್ರದ ಪ್ರಮುಖ ತಾರಾಗಣದಲ್ಲಿ ದುನಿಯಾ ವಿಜಯ್, ಪಾವನ ಗೌಡ, ರಂಗಾಯಣ ರಘು ಮುಂತಾದವರಿದ್ದರು. ಈ ಚಿತ್ರ ಕೂಡಾ ಬಾಕ್ಸಾಫೀಸಿನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.

    ಒಂದ್ ಚಾನ್ಸ್ ಕೊಡಿ

    ಒಂದ್ ಚಾನ್ಸ್ ಕೊಡಿ

    ಬೆಸ್ಟ್ ಆಫ್ ಲಕ್ ಎನ್ನುವ ಮಲಯಾಳಂ ಚಿತ್ರದ ರಿಮೇಕ್ 'ಒಂದ್ ಚಾನ್ಸ್ ಕೊಡಿ'. ಸತ್ಯಮಿತ್ರ ನಿರ್ದೇಶನದ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ನಂದಿನಿ, ಸಾಧು, ಟೆನ್ನಿಸ್ ಕೃಷ್ಣ ಮುಂತಾದ ತಾರಾಗಣವಿತ್ತು. ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.

    ರುದ್ರ ತಾಂಡವ

    ರುದ್ರ ತಾಂಡವ

    ತಮಿಳಿನ ಪಾಂಡ್ಯನಾಡು ಚಿತ್ರದ ರಿಮೇಕ್ 'ರುದ್ರ ತಾಂಡವ'. ಚಿರಂಜೀವಿ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಗಿರೀಶ್ ಕಾರ್ನಾಡ್, ರವಿಶಂಕರ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣುವಲ್ಲಿ ಸಫಲವಾಗಿತ್ತು, ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶಿಸಿದ್ದರು.

    ಗೋವಾ

    ಗೋವಾ

    ತಮಿಳಿನ ಅದೇ ಹೆಸರಿನ ಚಿತ್ರದ ರಿಮೇಕ್. ಕೋಮಲ್, ತರುಣ್ ಚಂದ್ರ, ಶ್ರೀಕಾಂತ್, ಶರ್ಮಿಳ ಮಾಂಡ್ರೆ ಮುಂತಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು. ಸೂರ್ಯ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿತ್ತು.

    ಒಂದು ರೊಮ್ಯಾಂಟಿಕ್ ಕ್ರೈಂ ಸ್ಟೋರಿ

    ಒಂದು ರೊಮ್ಯಾಂಟಿಕ್ ಕ್ರೈಂ ಸ್ಟೋರಿ

    ಇದು ತೆಲುಗಿನ ಒಕು ರೊಮ್ಯಾಂಟಿಕ್ ಕ್ರೈಂ ಕಥಾ ಎನ್ನುವ ಚಿತ್ರದ ರಿಮೇಕ್. ಶ್ಯಾಂ ಚೈತನ್ಯ ನಿರ್ದೇಶನದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅರುಣ್, ಅಶ್ವಿನಿ ಚಂದ್ರಶೇಖರ್, ಪೂಜಾಶ್ರೀ ಮುಂತಾದವರಿದ್ದರು. ಇದು ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು.

    ಕಟ್ಟೆ

    ಕಟ್ಟೆ

    ಇದು ತಮಿಳು 'ಖೇಡಿ ಭಿಲ್ಲಾ ಕಿಲಾಡಿ ರಂಗ' ಚಿತ್ರದ ರಿಮೇಕ್. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಚಂದನ್ ಕುಮಾರ್, ನಾಗಶೇಖರ್, ಶ್ರಾವ್ಯ, ಗೀತಾ ಮುಂತಾದವರಿದ್ದರು. ಈ ಚಿತ್ರ ಕೂಡಾ ಬಾಕ್ಸಾಫೀಸಿನಲ್ಲಿ ಸೋತಿತ್ತು.

    ರನ್ನ

    ರನ್ನ

    ತೆಲುಗಿನ ಅತ್ತಾರೆಂಟೇಕಿ ದಾರಿಯೇದಿ ಚಿತ್ರದ ರಿಮೇಕ್. ಸುದೀಪ್, ರಚಿತಾ ರಾಮ್, ಹರಿಪ್ರಿಯ, ಮಧೂ, ಚಿಕ್ಕಣ್ಣ, ದೇವರಾಜ್ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದರು. ರನ್ನ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದು.

    English summary
    List of remake movies released in First six months of year 2015.
    Monday, July 13, 2015, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X