»   » 'ಲೂಸ್ ಕನೆಕ್ಷನ್' ಈಗ ಯುವ ಜನತೆಯ ಅಚ್ಚುಮೆಚ್ಚಿನ ವೆಬ್ ಸೀರಿಸ್

'ಲೂಸ್ ಕನೆಕ್ಷನ್' ಈಗ ಯುವ ಜನತೆಯ ಅಚ್ಚುಮೆಚ್ಚಿನ ವೆಬ್ ಸೀರಿಸ್

Posted By:
Subscribe to Filmibeat Kannada

ಕನ್ನಡದಲ್ಲಿ ವೆಬ್ ಸೀರಿಸ್ ಗಳ ಸಂಖ್ಯೆ ತೀರ ಬೆರಳೆಣಿಕೆಯಷ್ಟು. ಇದೀಗ ಆ ಕೊರಗನ್ನು ನಿವಾರಿಸುತ್ತಿರುವುದು 'ಲೂಸ್ ಕನೆಕ್ಷನ್' ಎಂಬ ವೆಬ್ ಸೀರಿಸ್.

'ಲೂಸ್ ಕನೆಕ್ಷನ್' ವೆಬ್ ಸೀರಿಸ್ ಈಗಾಗಲೇ ಸಖತ್ ಫೇಮಸ್ ಆಗಿದೆ. ಬರೀ ಸಿನಿಮಾ, ಶಾರ್ಟ್ ಮೂವಿ ಮತ್ತು ಧಾರಾವಾಹಿಗಳನ್ನು ನೋಡಿದ್ದ ಪ್ರೇಕ್ಷಕರಿಗೆ 'ಲೂಸ್ ಕನೆಕ್ಷನ್' ಒಂದು ಹೊಸ ಅನುಭವವನ್ನು ನೀಡುತ್ತಿದೆ.

'Loose Connection' webseries is 4th trending video in Youtube

'ಲೂಸ್ ಕನೆಕ್ಷನ್' ಕ್ರೇಜ್ ಯಾವ ಮಟ್ಟಿಗೆ ಇದೆ ಎನ್ನುವುದಕ್ಕೆ ಒಂದು ಉದಾಹರಣೆ ನಿನ್ನೆ ರಿಲೀಸ್ ಆದ 'ಲೂಸ್ ಕನೆಕ್ಷನ್' ಪಾರ್ಟ್ 6 ಎಪಿಸೋಡ್. ಈ ಎಪಿಸೋಡ್ ಈಗ ಯೂ ಟ್ಯೂಬ್ ನಲ್ಲಿ ನಂ.4 ಟ್ರೆಂಡಿಂಗ್ ನಲ್ಲಿದೆ. 24 ಗಂಟೆಯ ಒಳಗೆ ಈ ಸಂಚಿಕೆಗೆ 1 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

'ಲೂಸ್ ಕನೆಕ್ಷನ್' ವೆಬ್ ಸೀರಿಸ್ ನಲ್ಲಿ ಬರುತ್ತಿರುವ ಎಪಿಸೋಡ್ ಗಳು ಒಂದಕ್ಕಿಂತ ಒಂದು ಸಖತ್ ಆಗಿದೆ. ಪ್ರತಿ ಎಪಿಸೋಡ್ ಬೋರ್ ಆಗದೆ ನೋಡುಗರಿಗೆ ಮಜಾ ನೀಡುತ್ತಿದೆ.

'Loose Connection' webseries is 4th trending video in Youtube

ಅಂದಹಾಗೆ, ಇಲ್ಲಿ 'ಎಕ್ಸ್ ಕ್ಯೂಸ್ ಮಿ' ಖ್ಯಾತಿಯ ನಟ ಸುನೀಲ್ ನಾಯಕನಾಗಿ ನಟಿಸಿದ್ದಾರೆ. ನಾಯಕಿಯರಾಗಿ ಸಿಂಧು ಲೋಕನಾಥ್, ಅನುಪಮ ಗೌಡ, ಗೌರಿ ನೀಲಾವರ್ ಕಾಣಿಸಿಕೊಂಡಿದ್ದಾರೆ. ಆರ್ ಜೆ ಪ್ರದೀಪ್ ಈ ವೆಬ್ ಸೀರಿಸ್ ಗೆ ಬಂಡವಾಳ ಹಾಕಿದ್ದಾರೆ. ಈಶಂ ಖಾನ್, ಹಸೀನ್ ಖಾನ್ ಮತ್ತು ರಘು ಶಾಸ್ತ್ರಿ 'ಲೂಸ್ ಕನೆಕ್ಷನ್' ಗೆ ನಿರ್ದೇಶನ ಮಾಡಿದ್ದಾರೆ.

English summary
'Loose Connection' kannada webseries is 4th trending video in Youtube at present. It features Actor sunil, sindhu lokanath and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada