For Quick Alerts
  ALLOW NOTIFICATIONS  
  For Daily Alerts

  ಅಂಬರಕ್ಕೆ ಜಿಗಿಯುತ್ತಿರುವ ಅಂಬಾರಿ ನಟ ಯೋಗೇಶ್

  |

  ಸಿದ್ಲಿಂಗು ಚಿತ್ರ ಯಶಸ್ವಿಯಾದ ನಂತರ ಲೂಸ್ ಮಾದ ಯೋಗೇಶ್ ಅವರ ವೃತ್ತಿಜೀವನ ಸಂಪೂರ್ಣ ಏರುಮುಖವಾಗಿದೆ. ದುನಿಯಾ ಚಿತ್ರದಿಂದ ಗುರುತಿಸಿಕೊಂಡ ಯೋಗೇಶ್, ಅಂಬಾರಿ ಚಿತ್ರ ಸೂಪರ್ ಹಿಟ್ ಆದ ನಂತರ ತಿರುಗಿ ನೋಡಲಿಲ್ಲ. ಆದರೆ ನಂತರ ಬಂದ ಸಾಕಷ್ಟು ಚಿತ್ರಗಳು ದಯನೀಯವಾಗಿ ನೆಲಕಚ್ಚಿ ಯೋಗೇಶ್ ಚಿಂತಾಜನಕ ಸ್ಥಿತಿಯಲ್ಲಿದ್ದರು.

  ಹುಡುಗರು ಹಾಗೂ ಸಿದ್ಲಿಂಗು ಯೋಗೇಶ್ ಅವರ ಚಿತ್ರಬದುಕಿಗೆ ಮತ್ತೆ ಏರುತಿರುವು ನೀಡಿದ್ದವು. ಈಗ ಮತ್ತೆ ಯೋಗೇಶ್ ಗೆಲ್ಲುವ ಕುದುರೆ. ಬಂಗಾರಿ ಚಿತ್ರದ ಚಿತ್ರೀಕರಣ ಮುಗಿಸಿರುವ ಯೋಗೇಶ್ ಇದೀಗ ಹೊಸ ಚಿತ್ರ 'ಅಂಬರ'ಕ್ಕಾಗಿ ಸಿದ್ಧರಾಗಿದ್ದಾರೆ. ಅಂಬರ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸೇನ್ ಪ್ರಕಾಶ್.

  "ಯೋಗಿ ಇಮೇಜ್‌ಗೆ ತಕ್ಕಂತೆ ಕಥೆ ಮಾಡಿದ್ದೇನೆ. ಕಾಮಿಡಿ, ಆಕ್ಷನ್, ಪ್ರೀತಿ ಎಲ್ಲವೂ ಇದೆ. ಕಣ್ಣ ಮುಂದೆ ನಡೆದ ನಿಜ ಘಟನೆಗಳನ್ನು ಆಧರಿಸಿಯೇ ಬಹುತೇಕ ಕಥೆಯನ್ನು ಬರೆಯಲಾಗಿದೆ. ಈ ಚಿತ್ರ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಿದೆ" ಎಂದಿದ್ದಾರೆ ನಿರ್ದೇಶಕ ಸೇನ್ ಪ್ರಕಾಶ್.

  ಆನಂದ್ ಎಂಬವರು ಈ 'ಅಂಬರ' ಚಿತ್ರವನ್ನು ನಿರ್ಮಿಸಲಿದ್ದಾರೆ. 'ಮೊದಲಾ ಸಲ' ಮೂಲಕ ಕನ್ನಡಕ್ಕೆ ಬಂದ ಭಾಮಾ ಈ ಚಿತ್ರದ ನಾಯಕಿ. ಅಂದುಕೊಂಡಂತೆ ಎಲ್ಲವೂ ನಡೆದರೆ ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ. ನಂತರ ಗೋವಿಂದಾಯ ನಮಃ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಚಿತ್ರವೊಂದು ಯೋಗೇಶ್ ಅವರಿಗಾಗಿ ಕಾಯುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Loose Mada Yogesh acts in a new movie called Ambara. Sen Prakash Directs this and Anand produces for yogesh. Bhama is the Heroine for this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X