ಸಿಕ್ಸ್ ಪ್ಯಾಕ್ ಗಾಗಿ ಟೈಟ್ ಆದ ಲೂಸ್ ಮಾದ ಯೋಗಿ
ಲೂಸ್ ಮಾದ ಯೋಗಿ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರೋದು ಕಡಿಮೆ. 'ತಕಧಿಮಿತ ಡಾನ್ಸಿಂಗ್ ಸ್ಟಾರ್'ನಲ್ಲೇ ಬಿಜಿಯಾಗಿದ್ದ ಯೋಗಿ ಈಗೆಲ್ಲಿದ್ದಾರೆ ಅಂದ್ರೆ ಬಹುಶಃ ಜಿಮ್ ನಲ್ಲಿದ್ದಾರಂತೆ. ಅವರು ಜಿಮ್ ನಲ್ಲಿರೋದಕ್ಕೆ ಕಾರಣವೂ ಇದೆ. ಇಷ್ಟಕ್ಕೂ ಲೂಸ್ ಮಾದ ಯೋಗಿ ಒಂದು ಬ್ರೇಕ್ ಗಾಗಿ ಕಾಯ್ತಿದ್ದಾರೆ.
ಇತ್ತೀಚೆಗೆ ಬಂದಿರೋ ಸಿನಿಮಾಗಳಲ್ಲಿ ಯಶಸ್ಸು ಕಾಣದ ಮ್ಯಾಜಿಕ್ ಸ್ಟಾರ್ ಗೆಲುವಿನ ಮ್ಯಾಜಿಕ್ಕನ್ನೇ ಮಾಡಿಲ್ಲ. ಇದೆಲ್ಲದರ ನಡುವೆ ಯೋಗಿಯ 24ನೇ ಹುಟ್ಟುಹಬ್ಬ ಹತ್ತಿರವಾಗ್ತಿದೆ. 24ನೇ ವರ್ಷಕ್ಕೇ 25ನೇ ಸಿನಿಮಾ ಮಾಡ್ತಿರೋ ಯೋಗಿ ಈ ಬಾರಿ ಡಿಫ್ ರೆಂಟಾಗಿ ಬರ್ತಡೇ ಸೆಲಬ್ರೇಟ್ ಮಾಡೋ ಯೋಚನೆಯಲ್ಲಿದ್ದಾರೆ ಅನ್ನಿಸುತ್ತೆ. [ಸ್ಟೈಲಿಶ್ ಸ್ಟಾರ್ ಪ್ರೇಮ್ ಈಗ ಸಿಕ್ಸ್ ಪ್ಯಾಕ್ ಪೊಲೀಸ್]

ಹಾಗಾಗೀನೇ ಯೋಗಿ ಮಾಧ್ಯಮದವರ ಫೋನ್ ಗೂ ಸಿಗ್ತಿಲ್ಲವಂತೆ. ಜಿಮ್ ನಲ್ಲಿ ಬೆವರು ಸುರಿಸೋದ್ರಲ್ಲಿ ಯೋಗಿ ಬಿಜಿ ಅನ್ನಿಸುತ್ತೆ. ಹಾಗಾಗಿ ಬರ್ತಡೇಗೆ ಯೋಗಿಯನ್ನ ಡಿಫ್ರೆಂಟಾಗಿ ನೋಡ್ಬಹುದು ಅಂತ ಚಿತ್ರಪ್ರೇಮಿಗಳು ಲೆಕ್ಕ ಹಾಕ್ತಿದ್ದಾರೆ.
English summary
Loose Mada gains 86 kg weight for mass look for his upcoming movie. He is getting ready for the six packs abs for upcoming movie.


Click it and Unblock the Notifications