For Quick Alerts
  ALLOW NOTIFICATIONS  
  For Daily Alerts

  ಡಾಲಿ ಸಿನಿಮಾ ಪ್ರೀತಿಗಾಗಿ 'ರೌಡಿ ಗಂಗ' ಪಾತ್ರ ಒಪ್ಪಿಕೊಂಡ ಯೋಗಿ

  |

  ಡಾಲಿ ಧನಂಜಯ್‌ ಅಭಿನಯದ 'ಹೆಡ್‌ ಬುಷ್‌' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್‌ 21ರಂದು ಚಿತ್ರ ತೆರೆ ಕಾಣಲು ಸಜ್ಜಾಗಿದ್ದು, ಡಾಲಿ ಅಭಿಮಾನಿಗಳು ಹೆಡ್‌ ಬುಷ್‌ಗಾಗಿ ಕಾತುರರಾಗಿದ್ದಾರೆ. ಈ ಚಿತ್ರ ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿದೆ.

  ಈಗಾಗಲೇ ಅನೇಕ ರೌಡಿಸಂ ಪಾತ್ರದಲ್ಲಿ ನಟಿಸಿರುವ ಡಾಲಿ ಧನಜಂಯ್‌ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಹೆಡ್‌ ಬುಷ್‌ ಕ್ರೇಜ್‌ ಹೆಚ್ಚಾಗಿದ್ದು, ಧನಜಂಯ್‌ ಇತ್ತೀಚಿಗೆ ಹೆಚ್ಚಾಗಿ ಬೆಲ್‌ ಬಾಟಮ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪಕ್ಕಾ ರೌಡಿಸಂ ಚಿತ್ರವಾಗಿದ್ದು, ಡಾನ್‌ ಜಯರಾಜ್‌ ಅವರ ಕಾಲಘಟ್ಟದಲ್ಲಿದ್ದ ಬೆಂಗಳೂರು ಭೂಗತ ಲೋಕವನ್ನು ತೋರಿಸಲು ಹೆಡ್‌ ಬುಷ್‌ ಚಿತ್ರತಂಡ ಸಜ್ಜಾಗಿದೆ.

  ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?

  'ಹೆಡ್‌ ಬುಷ್‌' ಚಿತ್ರಕ್ಕೆ ಅಗ್ನಿ ಶ್ರೀಧರ್‌ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದು, ನಿರ್ದೇಶಕ ಶೂನ್ಯ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ಜೋಡಿಯಾಗಿ ಪಾಯಲ್‌ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಭೂಗತ ಲೋಕದ ಕತೆಯಾಗಿದ್ದು, ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದಲ್ಲಿ ಲೂಸ್‌ ಮಾದ ಯೋಗಿ ನಟಿಸುತ್ತಿದ್ದಾರೆ. ಜಯರಾಜ್‌ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡರೆ ಲೂಸ್‌ ಮಾದ ಯೋಗಿ ರೌಡಿ ಗಂಗ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಬಹಳ ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಲೂಸ್‌ ಮಾದ ಯೋಗಿ ಈಗಾಗಲೇ ಎಲ್ಲ ಜಾನರ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ದುನಿಯಾ ಚಿತ್ರದಲ್ಲಿ ಲೂಸ್‌ ಮಾದ ಆಗಿದ್ದ ಯೋಗಿ ಬಳಿಕ ಅನೇಕ ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಅಲ್ಲದೇ ಹುಡುಗರು, ಯಾರೇ ಕೂಗಾಡಲಿ ಚಿತ್ರಗಳಲ್ಲಿ ಯೋಗಿ ಕಾಮಿಡಿ ಪಾತ್ರಗಳಲ್ಲೂ ಕಾಣಿಸಿಕೊಂಡರು. ಇದೀಗ ಯೋಗಿ ತಮ್ಮ ಮತ್ತೊಂದು ಲುಕ್‌ನಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

  ಲೂಸ್‌ ಮಾದ ಯೋಗಿ ಹಾಗೂ ಡಾಲಿ ಧನಂಜಯ್‌ ಉತ್ತಮ ಸ್ನೇಹಿತರು. ಇಬ್ಬರ ಮಧ್ಯೆ ಅತ್ಯುತ್ತಮ ಬಾಂಧವ್ಯವಿದೆ. ಆದರೂ ಗಂಗಾ ಪಾತ್ರಕ್ಕಾಗಿ ಯೋಗಿ ಅವರನ್ನು ಸಂಪರ್ಕಿಸುವ ವೇಳೆ ಹೇಗೆ ಕೇಳೋದು ಎನ್ನುವ ಯೋಚನೆ ನಟ ಡಾಲಿ ಧನಂಜಯ್‌ ಅವರನ್ನು ಕಾಡಿತ್ತಂತೆ. ಈ ಬಗ್ಗೆ ಅವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ನಡೆದ ಯೋಗಿ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.

  ಧನಂಜಯ್ ಮಾತಿಗೆ ಉತ್ತರಿಸಿದ ನಟ ಯೋಗಿ, ಆ ಪಾತ್ರ ನಾನು ಇಷ್ಟ ಪಡುವ ಪಾತ್ರ. ಜಯರಾಜ್‌ ಹಾಗೂ ಅವರ ಜೊತೆಗಿನ ವಿಚಾರವನ್ನು ಕೇಳಿಕೊಂಡು ಬೆಳೆದ್ದಿದ್ದೇವೆ. ಬೆಂಗಳೂರಿನಲ್ಲೇ ಹುಟ್ಟಿರುವುದರಿಂದ ಅವರ ಬಗ್ಗೆ ನನಗೆ ಗೊತ್ತಿತ್ತು. ಜೊತೆಗೆ ಈ ಚಿತ್ರದಲ್ಲಿ ಆ ಪಾತ್ರದ ತೂಕ ಎಷ್ಟಿದೆ ಎನ್ನುವುದು ನನಗೆ ಗೊತ್ತಿತ್ತು. ಹೀಗಾಗಿ ಆ ಪಾತ್ರನ ಒಪ್ಪಿಕೊಂಡೆ ಎಂದರು.

  ಮಾತು ಮುಂದುವರಿಸಿದ ಯೋಗಿ, ಇನ್ನೂ ಮುಖ್ಯವಾಗಿ ನಾನು ಮತ್ತು ನೀವು ಮೊದಲ ಸಾರಿ ಭೇಟಿಯಾದಗಲೇ ಗಡಿ ಮೀರಿದ ಬಾಂಧವ್ಯ ನಮ್ಮಿಬ್ಬರ ಮಧ್ಯೆ ಬೆಳೆದಿತ್ತು. ನಾನು ಬೇಗ ಒಬ್ಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇನೆ. ಅದು ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಈಗ ನನಗಿರೋ ಲೆಕ್ಕ ಹಾಕುವಷ್ಟು ಇರುವ ಗೆಳೆಯರಲ್ಲಿ ನೀನು ಒಬ್ಬ. ಸಿನಿಮಾ ಬಗ್ಗೆ ನಿನಗಿರುವ ಪ್ರೀತಿ ಗೊತ್ತಿತ್ತು. ಹೀಗಾಗಿ ಈ ಪಾತ್ರವನ್ನು ಒಪ್ಪಿಕೊಂಡೆ ನಾನು ಎಂದು ಗಂಗ ಪಾತ್ರವನ್ನು ಸ್ವೀಕರಿಸಿದ ಬಗ್ಗೆ ಲೂಸ್‌ ಮಾದ ಯೋಗಿ ಹೇಳಿಕೊಂಡಿದ್ದಾರೆ.

  English summary
  Sandalwood Actor Loose Mada Yogi opens up about Head Bush movie Ganga character with Daali Dhananjay.
  Wednesday, October 5, 2022, 19:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X