For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆಗೆ ಕೌಂಟ್ ಡೌನ್ ಶುರು!

  By Naveen
  |
  ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆಗೆ ಕೌಂಟ್ ಡೌನ್ ಶುರು! | Filmibeat Kannada

  ನಟ ಲೂಸ್ ಮಾದ ಯೋಗೀಶ್ ತಮ್ಮ ಗೆಳತಿ ಸಾಹಿತ್ಯ ಜೊತೆ ಮದುವೆಯಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಯೋಗಿ ವಿವಾಹ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ.

  ನವೆಂಬರ್ 2ಕ್ಕೆ ಯೋಗಿ ಮತ್ತು ಸಾಹಿತ್ಯ ಹಸೆಮಣೆ ಏರಲಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದ ಯೋಗಿ ಬಾಳಿಗೆ ಈಗ ಸಾಹಿತ್ಯ ಎಂಟ್ರಿ ಕೊಡಲಿದ್ದಾರೆ. ಜೂನ್ 11ಕ್ಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಮುಂದಿನ ಗುರುವಾರ ಅದ್ದೂರಿಯಾಗಿ ನಡೆಯಲಿದೆ. ಮುಂದೆ ಓದಿ...

  ಯೋಗೀಶ್ ವೆಡ್ಸ್ ಸಾಹಿತ್ಯ

  ಯೋಗೀಶ್ ವೆಡ್ಸ್ ಸಾಹಿತ್ಯ

  ಲೂಸ್ ಮಾದ ಯೋಗೀಶ್ - ಸಾಹಿತ್ಯ ಮದುವೆ ನವೆಂಬರ್ 2ಕ್ಕೆ ನಡೆಯಲಿದ್ದು, ಬೆಂಗಳೂರಿನ ಬನಶಂಕರಿಯ 8ನೇ ಹಂತದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ವಿವಾಹ ಕಾರ್ಯಕ್ರಮ ಜರುಗಲಿದೆ.

  ಲಗ್ನ ಪತ್ರಿಕೆ

  ಲಗ್ನ ಪತ್ರಿಕೆ

  ಯೋಗೀಶ್ ಮತ್ತು ಸಾಹಿತ್ಯ ವಿವಾಹದ ಲಗ್ನ ಪತ್ರಿಕೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ.

  ಬೆಳ್ಳಗೆ 5 ಗಂಟೆಗೆ ಮುಹೂರ್ತ

  ಬೆಳ್ಳಗೆ 5 ಗಂಟೆಗೆ ಮುಹೂರ್ತ

  ಬೆಳಗ್ಗೆ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

  'ಲೂಸ್ ಮಾದ' ಯೋಗೀಶ್-ಸಾಹಿತ್ಯ ಎಂಗೇಜ್ಮೆಂಟ್ ಚಿತ್ರಗಳು

  ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥ ಆಗಿತ್ತು

  ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥ ಆಗಿತ್ತು

  ಬೆಂಗಳೂರಿನ ಯಡಿಯೂರಿನಲ್ಲಿರುವ ಸಾಹಿತ್ಯ ರವರ ನಿವಾಸದಲ್ಲಿ ಜೂನ್ 11 ರಂದು ನಿಶ್ಚಿತಾರ್ಥ ಸಮಾರಂಭ ಸರಳವಾಗಿ ನಡೆದಿತ್ತು.

  ಇದೀಗ ಬಂದ ಸುದ್ದಿ: ಲೂಸ್ ಮಾದ ಯೋಗಿ ಮದುವೆ ದಿನಾಂಕ ಫಿಕ್ಸ್

  ಪ್ರೇಮ ವಿವಾಹ

  ಪ್ರೇಮ ವಿವಾಹ

  ಕಳೆದ 13 ವರ್ಷಗಳಿಂದ ಸ್ನೇಹಿತರಾಗಿರುವ ಸಾಹಿತ್ಯ-ಯೋಗಿ, ಎರಡು ವರ್ಷಗಳಿಂದ ಪ್ರೀತಿ-ಪ್ರೇಮ ಅಂತ ಸೀರಿಯಸ್ ಆಗಿದ್ದರು. ಬಳಿಕ ಇವರ ಪ್ರೀತಿಗೆ ಎರಡು ಮನೆಯವರು ಸಹ ಸಮ್ಮತಿ ಸೂಚಿಸಿದ್ದರು.

  ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!

  ಸಾಹಿತ್ಯ ಬಗ್ಗೆ

  ಸಾಹಿತ್ಯ ಬಗ್ಗೆ

  ಸಾಹಿತ್ಯ ಮೂಲತಃ ಐಟಿ ಉದ್ಯೋಗಿ. ಸಿನಿಮಾರಂಗಕ್ಕೂ ಅವರಿಗೂ ನಂಟು ಇಲ್ಲವೇ ಇಲ್ಲ. ಯೋಗಿಯ ಜೀವದ ಗೆಳತಿಯಾಗಿದ್ದ ಈಕೆ ಈಗ ಜೀವನದ ಸಂಗಾತಿ ಆಗಲಿದ್ದಾರೆ.

  English summary
  Kannada Actor Yogesh and Sahitya will be getting married on November 2nd 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X