»   » 'ಜನನ-ಮರಣದ ಮಧ್ಯೆ ನಡುಗಿದ ಪ್ರೇಮಕಥೆ': 'ದುನಿಯಾ 2' ಹೊಸ ಟೀಸರ್

'ಜನನ-ಮರಣದ ಮಧ್ಯೆ ನಡುಗಿದ ಪ್ರೇಮಕಥೆ': 'ದುನಿಯಾ 2' ಹೊಸ ಟೀಸರ್

Posted By:
Subscribe to Filmibeat Kannada

ಲೂಸ್ ಮಾದ ಯೋಗೀಶ್ ಅಭಿನಯದ 'ದುನಿಯಾ-2' ಚಿತ್ರ ಸೆಟ್ಟೇರಿದಾಗನಿಂದಲೂ ಕುತೂಹಲ ಹುಟ್ಟಿಹಾಕಿದೆ. ಈಗಾಗಲೇ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರದ ಎರಡನೇ ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.[ವಿಡಿಯೋ: 'ದುನಿಯಾ-2' ಟೀಸರ್ ಬಿಡುಗಡೆ!]

'ದುನಿಯಾ' ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿದ್ದ ಲೂಸ್ ಮಾದ ಯೋಗಿ, 'ದುನಿಯಾ-2' ಚಿತ್ರದಲ್ಲಿ ಹೀರೋ ಆಗಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಇನ್ನೂ ನಟಿ ಹಿತಾ ಚಂದ್ರಶೇಖರ್ 'ದುನಿಯಾ-2' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.[ಚಿತ್ರಗಳು : ಬಿ.ಎಂ.ಟಿ.ಸಿ ಬಸ್ ನಲ್ಲಿ ಲೂಸ್ ಮಾದನ ಹೊಸ 'ದುನಿಯಾ']

ದುನಿಯಾ 2 ಚಿತ್ರಕ್ಕೆ ಹರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ಹರಿ, 'ದುನಿಯಾ-2' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಷನ್ ಮಾಡ್ತಿದ್ದು, ಎರಡನೇ ಟೀಸರ್ ನಲ್ಲೂ ತಮ್ಮ ಕೈಚಳಕ ತೋರಿದ್ದಾರೆ.

ಅಂದ್ಹಾಗೆ, 2007ರಲ್ಲಿ ತೆರೆಕಂಡಿದ್ದ 'ದುನಿಯಾ' ಚಿತ್ರಕ್ಕೂ 'ದುನಿಯಾ-2' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. 'ದುನಿಯಾ-2' ಚಿತ್ರದಲ್ಲಿ ಯೋಗಿ ತಾಯಿ ಅಂಬುಜಾ ತೆರೆಮೇಲೂ ಯೋಗಿ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದುನಿಯಾ ಚಿತ್ರವನ್ನ ನಿರ್ಮಾಣ ಮಾಡಿದ್ದ ಯೋಗಿ ತಂದೆ ಟಿ.ಪಿ.ಸಿದ್ಧರಾಜು ಅವರೇ 'ದುನಿಯಾ-2' ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ.

English summary
Kannada Actor Lose Mada Yogesh starrer Kannada Movie 'Duniya-2' Second Teaser Released. Hitha Chandrashekar is Playing Female Lead. Hari is Directing the film. Here is the Second Teaser of Duniya 2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada