For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಅತಿ ದೊಡ್ಡ ಬಜೆಟ್ ಸಿನಿಮಾದಲ್ಲಿ ಪ್ರೇಮ್ ನಾಯಕ

  |

  ಪರ ಭಾಷೆಗಳಲ್ಲಿ ಭಾರಿ ಬಜೆಟ್‌ ಸಿನಿಮಾಗಳು ಮಾಮೂಲಿ ಎಂಬಂತಾಗಿಬಿಟ್ಟಿವೆ. ಕನ್ನಡ ಚಿತ್ರರಂಗವೂ ಕಡಿಮೆ ಏನಿಲ್ಲ. ನಮ್ಮಲ್ಲೂ ಭರ್ಜರಿ ಬಜೆಟ್‌ನ ಸಿನಿಮಾಗಳು ಒಂದರ ಹಿಂದೊಂದರಂತೆ ತಯಾರಾಗುತ್ತಿವೆ.

  ದೊಡ್ಡ ಬಂಡವಾಳ ಹೂಡಿ ಅದನ್ನು ಜಾಣ್ಮೆಯಿಂದ ಹೇಗೆ ಲಾಭವಾಗಿ ಪಡೆಯಬೇಕೆಂದು 'ಕೆಜಿಎಫ್‌' ಹೇಳಿಕೊಟ್ಟಿದೆ. ಅದರ ಬೆನ್ನಲ್ಲೆ ಹಲವು ಅದ್ಧೂರಿ ಬಜೆಟ್ ಸಿನಿಮಾಗಳು ತೆರೆಗೆ ಬಂದಿವೆ. ಇದೀಗ ಈವರೆಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಈವರೆಗೆ ಯಾರೂ ನಿರ್ಮಿಸದ ದೊಡ್ಡ ಬಜೆಟ್ ಚಿತ್ರವೊಂದು ನಿರ್ಮಾಣವಾಗುತ್ತಿದ್ದು, ಬರೋಬ್ಬರಿ 400 ಕೋಟಿ ಬಂಡವಾಳವನ್ನು ಹೂಡಲಾಗುತ್ತಿದೆ.

  ಈ ಭಾರಿ ಬಂಡವಾಳದ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವುದು ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್, ಶಿವಣ್ಣ, ಯಶ್‌ ಯಾರೂ ಅಲ್ಲ ಬದಲಿಗೆ ನಟ ನೆನಪಿರಲಿ ಪ್ರೇಮ್.

  ನಟ ಪ್ರೇಮ್ ನಟಿಸಲಿರುವ ಬಿಗ್ ಬಜೆಟ್ ಸಿನಿಮಾದಲ್ಲಿ ಭರ್ಜರಿ ಬಂಡವಾಳದ ಜೊತೆಗೆ ಇನ್ನೂ ಹಲವು ವಿಶೇಷತೆಗಳಿವೆ. ಈ ಸಿನಿಮಾಕ್ಕಾಗಿ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಲಿದ್ದು, ಸಿನಿಮಾವನ್ನು ಹಾಲಿವುಡ್ ಮಾದರಿಯಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ಸಿನಿಮಾದಲ್ಲಿ ಪಾತ್ರಧಾರಿಗಳು ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಹಾಲಿವುಡ್‌ನವರೇ ಆಗಿರುತ್ತಾರೆ.

  ಈ ಭಾರಿ ಬಜೆಟ್‌ನ ಸಿನಿಮಾವನ್ನು ರಾಘವೇಂದ್ರ ನಿರ್ದೇಶನ ಮಾಡಲಿದ್ದಾರೆ ಇವರನ್ನು ಹೊರತುಪಡಿಸಿದರೆ ಇನ್ನೆಲ್ಲ ತಂತ್ರಜ್ಞರು ಸಹ ವಿದೇಶದವರೇ ಆಗಿದ್ದಾರೆ. ಸಿನಿಮಾವು ಕನ್ನಡ, ಹಿಂದಿ, ಇಂಗ್ಲೀಷ್ ಹಾಗೂ ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

  ಈ ಸಿನಿಮಾವು ಕರ್ನಾಟಕದ ಕೆಚ್ಚೆದೆಯ ವೀರ ಯೋಧ ಕಾರಿಯಪ್ಪ ಜೀವನ ಆಧರಿಸಿದ ಸಿನಿಮಾ ಆಗಿದೆ. ಪ್ರೇಮ್ ಕಾರಿಯಪ್ಪ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈನ್ಯದ ದೃಶ್ಯಗಳು, ಯುದ್ಧದ ಸನ್ನಿವೇಶಗಳು ಸಿನಿಮಾದಲ್ಲಿ ಇರಲಿವೆ. ಸಿನಿಮಾವು ಕರ್ನಾಟಕ, ಕಾಶ್ಮೀರ, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಆಗಲಿದೆ. ಸಿನಿಮಾವನ್ನು ಕೇದಾಂಬರಿ ಕ್ರಿಯೇಷನ್ಸ್ ಮತ್ತು ಮಂಗಳೂರಿನ ರಾಜಕುಮಾರ ಅನ್ನುವವರು ನಿರ್ಮಾಣ ಮಾಡುತ್ತಿದ್ದಾರೆ.

  ಪ್ರೇಮ್ ಪ್ರಸ್ತುತ 'ಪ್ರೇಮಂ ಪೂಜ್ಯಂ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಆ ಸಿನಿಮಾದ ಬಿಡುಗಡೆಗೆ ತಯಾರಾಗಿದೆ. ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳು ಬಂದ್ ಆಗಿದ್ದ ಕಾರಣ ಸಿನಿಮಾ ಬಿಡುಗಡೆ ತಡವಾಗಿದೆ.

  ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕರ್ನಾಟಕದ ಹೆಮ್ಮೆಯ ಯೋಧ. ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದವರು. ಕೊಡಗಿನವರಾಗಿದ್ದ ಕಾರಿಯಪ್ಪ ಮೂರು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 1947ರ ಬಳಿಕದ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಿದ್ದರು. ಸೇನೆಯಲ್ಲಿ ಐದು ಸ್ಟಾರ್ ಪಡೆದ ಇಬ್ಬರೇ ಯೋಧರಲ್ಲಿ ಒಬ್ಬರು ಕಾರಿಯಪ್ಪ. ಐದು ಸ್ಟಾರ್ ಪಡೆದ ಮತ್ತೊಬ್ಬ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್‌ಶಾ.

  English summary
  Lovely Prem acting in Kannada's highest budget movie. This movie is based on Lt general Cariappa's life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X