»   » ಚಂದ್ರ ಪ್ರಚಾರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಮತ್ತೆ ಗೈರು

ಚಂದ್ರ ಪ್ರಚಾರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಮತ್ತೆ ಗೈರು

Posted By:
Subscribe to Filmibeat Kannada

ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ನಡುವಿನ ಭಿನ್ನಾಭಿಪ್ರಾಯಗಳು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿಂದೆ 'ಚಂದ್ರ' ಚಿತ್ರದ ಪ್ರಚಾರಕ್ಕೆ ಪ್ರೇಮ್ ಗೈರು ಹಾಜರಾಗುವ ಮೂಲಕ ವಿವಾದ ಭುಗಿಲೆದ್ದಿತ್ತು.

ಈಗ ಮತ್ತೊಮ್ಮೆ ಪ್ರೇಮ್ ಚಿತ್ರದ ಪ್ರಚಾರದಿಂದ ದೂರ ಉಳಿದಿದ್ದು ಇನ್ನಷ್ಟು ಅನುಮಾನಗಳನ್ನು ಗಾಂಧಿನಗರದಲ್ಲಿ ಹುಟ್ಟು ಹಾಕಿದೆ. ಈ ಚಿತ್ರದ ಪ್ರಚಾರ ಕಾರ್ಯಕ್ರಮವನ್ನು ಕೋರಮಂಗಲದ ಇಜೋನ್ ನಲ್ಲಿ ಆಯೋಜಿಸಲಾಗಿತ್ತು. ಆದರೆ ಪ್ರೇಮ್ ಸುಳಿವಿರಲಿಲ್ಲ.


ದೂರದ ಚೆನ್ನೈನಿಂದ ಹಾಸ್ಯನಟ ವಿವೇಕ್ ಹಾಗೂ ಗಣೇಶ್ ವೆಂಕಟರಾಮನ್ ಹಾಜರಾಗಿದ್ದರು. ಜೊತೆಗೆ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಸಹ ಇದ್ದರು. ಆದರೆ ಪ್ರೇಮ್ ಅವರಿಗೆ ಆಹ್ವಾನ ಹೋಗಿರಲಿಲ್ಲವೋ ಏನೋ ಕಥೆಯೋ ಉತ್ತರ ಇನ್ನೂ ಸಿಕ್ಕಿಲ್ಲ. (ರೂಪಾ ಅಯ್ಯರ್ ಸಂದರ್ಶನ)

ಚಂದ್ರ ಚಿತ್ರದ ಪೋಸ್ಟರ್ ಗಳಲ್ಲಿ ಯಶ್ ಅವರನ್ನು ಬಳಸಿಕೊಂಡಿರುವುದು, ಶ್ರೀಯಾ ಸರನ್ ಅವರಿಗೇ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿರುವುದು ಪ್ರೇಮ್ ಅವರ ಅಸಹನೆಗೆ ಕಾರಣವಾಗಿರಬಹುದು ಎನ್ನುತ್ತವೆ ಮೂಲಗಳು. ಇದೇ ಜೂನ್ 27ಕ್ಕೆ 'ಚಂದ್ರ' ಚಿತ್ರ ತೆರೆಕಾಣುತ್ತಿದೆ.

ಇನ್ನು ಚಿತ್ರದ ಹೀರೋಯಿನ್ ಶ್ರೀಯಾ ಸರನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀಯಾ ಸರನ್ ಅವರು ರಾಜಕುಮಾರಿ ಚಂದ್ರಾವತಿಯಾಗಿ ಹಾಗೂ ಚಂದ್ರಹಾಸನಾಗಿ ಪ್ರೇಮ್ ಅವರು ಸಾಮಾನ್ಯ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ರಾಯಲ್ ಲವ್ ಸ್ಟೋರಿಯೇ ಚಿತ್ರದ ಕಥಾವಸ್ತು. (ಏಜೆನ್ಸೀಸ್)

English summary
Lovely Star Prem again abstention from 'Chandra' movie promotion. Recently press meet organised in Kormangala's EZONE. But Prem not attended the press meet. The film will be slated for release on 27th June.
Please Wait while comments are loading...