»   » ಲವ್ಲಿ ಸ್ಟಾರ್ ಪ್ರೇಮ್ ಗೆ ಅರ್ಧ 'ಚಂದ್ರ' ಪ್ರಯೋಗ

ಲವ್ಲಿ ಸ್ಟಾರ್ ಪ್ರೇಮ್ ಗೆ ಅರ್ಧ 'ಚಂದ್ರ' ಪ್ರಯೋಗ

Posted By:
Subscribe to Filmibeat Kannada
<ul id="pagination-digg"><li class="next"><a href="/news/lovely-star-prem-absence-from-chandra-promotion-074976.html">Next »</a></li></ul>

ಕನ್ನಡ ಚಿತ್ರರಂಗದಲ್ಲಿ ವಿವಾದಗಳು ಹೊಸದಲ್ಲ, ನಿತ್ಯನೂತನ. ಇನ್ನೇನು ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ವಿವಾದಗಳು ತಣ್ಣಗೆ ಭುಗಿಲೇಳುತ್ತವೆ. ಈಗ ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರವೂ ವಿವಾದಕ್ಕೆ ಗುರಿಯಾಗಿದೆ. ಅದೇನು ವಿವಾದ, ಯಾಕಾಯಿತು? ಬನ್ನಿ ಒಮ್ಮೆ ನೋಡಿ ಬರೋಣ.

ರೂಪಾ ಅಯ್ಯರ್ ನಿರ್ದೇಶನದ ಕನ್ನಡ, ತೆಲುಗು ಹಾಗೂ ತಮಿಳು ತ್ರಿಭಾಷಾ 'ಚಂದ್ರ' ಚಿತ್ರ ಇದೇ ಜೂ.27ಕ್ಕೆ ತೆರೆಕಾಣುತ್ತಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸೋಮವಾರ (ಜೂ.17) ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಚಿತ್ರತಂಡದ ಎಲ್ಲರೂ ಹಾಜರಿದ್ದರು. ಆದರೆ ನಾಯಕ ನಟ ಪ್ರೇಮ್ ಮಾತ್ರ ನಾಪತ್ತೆಯಾಗಿದ್ದರು.

Chandra film press meet

ಪತ್ರಿಕಾಗೋಷ್ಠಿಗೆ ಪ್ರೇಮ್ ಅವರು ಯಾಕೆ ಬಂದಿಲ್ಲ ಎಂದು ರೂಪಾ ಅಯ್ಯರ್ ಅವರನ್ನು ಕೇಳಿದರೆ ಅವರು ಹೇಳಿದ್ದಿಷ್ಟು, "ನಾವಾಗಿ ಯಾರನ್ನೂ ಬರಬೇಡಿ ಎಂದು ಹೇಳಿಲ್ಲ. ಮೂರು ದಿನಗಳ ಹಿಂದೆಯೇ ಆಹ್ವಾನ ನೀಡಿದ್ದೆವು. ಆದರೂ ಅವರು ಬಂದಿಲ್ಲ. ಯಾಕೆ ಬರಲಿಲ್ಲವೋ ನಮಗೆ ಗೊತ್ತಿಲ್ಲ. ಅವರನ್ನೇ ಕೇಳಿ" ಎಂದಿದ್ದಾರೆ ರೂಪಾ ಅಯ್ಯರ್.

ಚಿತ್ರದ ಪೋಸ್ಟರ್ ಗಳಲ್ಲಿ ಯಶ್ ಅವರನ್ನು ತೋರಿಸಲಾಗಿದೆ. ಇದೂ ಒಂದು ಕಾರಣ ಇರಬಹುದೇ ಎಂದರೆ, "ಯಶ್ ಸಣ್ಣ ಕಲಾವಿದರೇನು ಅಲ್ಲ. ಅವರೂ ಒಬ್ಬ ಹೀರೋ. ಪೋಸ್ಟರ್ ಗಳಲ್ಲಿ ಯಶ್ ಫೋಟೋ ಬಳಸಿಕೊಳ್ಳಬಾರದು ಎಂದೇನು ಇಲ್ಲವಲ್ಲಾ. ಚಿತ್ರದಲ್ಲಿ ಅವರೂ ಅಭಿನಯಿಸಿರುವ ಕಾರಣ ಯಶ್ ಫೋಟೋ ಬಳಸಿಕೊಂಡಿದ್ದೇವೆ" ಎಂದಿದ್ದಾರೆ.

ಎಲ್ಲರನ್ನೂ ಚಿತ್ರದ ಪ್ರಚಾರಕ್ಕೆ ಕರದಿದ್ದೇವೆ. ಪ್ರೇಮ್ ಅವರನ್ನೂ ಕರೆದಿದ್ದೇವೆ. ಪ್ರೇಮ್ ಅವರಿಗೆ ತಾಂಬೂಲ ಕೊಟ್ಟು ಸ್ಪೆಷಲ್ ಆಗಿ ಕರೆಯುವುದಕ್ಕೆ ಆಗುತ್ತದೆಯೇ? ಯಾಕೆ ಬರಲಿಲ್ಲ ಎಂಬುದು ನಮಗೆ ಗೊತ್ತಿಲ್ಲ ಎನ್ನುತ್ತಾರೆ ರೂಪಾ ಅಯ್ಯರ್.

ಇನ್ನು 'ಚಂದ್ರ' ಚಿತ್ರದ ನಾಯಕ ನಟ ಪ್ರೇಮ್ ಹೇಳುವುದೇನೆಂದರೆ, ಚಿತ್ರ ಆರಂಭವಾದ ದಿನಗಳಿಂದಲೂ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ. ನಮ್ಮಿಬ್ಬರ ನಡುವೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಲೇ ಇವೆ. ನಮ್ಮಿಬ್ಬರ ಪರ್ಸನಲ್ ಗಲಾಟೆಯಲ್ಲಿ ಚಿತ್ರ ಬಡವಾಗುವುದು ಬೇಡ ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ.

<ul id="pagination-digg"><li class="next"><a href="/news/lovely-star-prem-absence-from-chandra-promotion-074976.html">Next »</a></li></ul>
English summary
Roopa Iyer's Trilingual film 'Chandra' lands in fresh controversy, which will be slated for release on 27th June. The films hero Lovely Star Prem Kumar has not been promoting for promotion, which has raising a lot of questions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada