»   » ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಮಳೆಯಲ್ಲಿ ನೆನೆಯಿರಿ

ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಮಳೆಯಲ್ಲಿ ನೆನೆಯಿರಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ನಾಳೆ(ಆಗಸ್ಟ್ 7) ಭಾರಿ ಮಳೆಯೊಂದು ಸುರಿಯಲಿದೆ. ಆರ್.ಚಂದ್ರು ನಿರ್ಮಾಣದಲ್ಲಿ ನಾಳೆ 'ಮಳೆ' ಸುರಿಯಲಿದ್ದು, ಪ್ರೇಕ್ಷಕರಿಗೆ ಈ ಮಾನ್ಸೂನ್ ಗೆ ತೆರೆಯ ಮೇಲೆ ಭರ್ಜರಿ ಮಳೆಯ ದರ್ಶನವಾಗಲಿದೆ.

ಹೌದು ಆರ್.ಚಂದ್ರು ನಿರ್ಮಾಣದಲ್ಲಿ, ತೇಜಸ್ ಆಕ್ಷನ್-ಕಟ್ ಹೇಳಿರುವ, ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್, ಅಮೂಲ್ಯ ಜೊತೆಯಾಗಿ ಡ್ಯುಯೆಟ್ ಹಾಡಿರುವ ಬಹುನಿರೀಕ್ಷಿತ ಚಿತ್ರ 'ಮಳೆ' ಆಗಸ್ಟ್ 7 ರಂದು ತೆರೆ ಮೇಲೆ ಅಪ್ಪಳಿಸುತ್ತಿದೆ.[ಮಳೆ ಲೇಟು ಜುಲೈಗೂ ಡೌಟು ಅಂತಾರೆ ಆರ್ ಚಂದ್ರು]


Lovely Star Prem's 'Male' is all set for a grand release August 7th

ತೇಜಸ್ ಶಿವಮೂರ್ತಿ ಆಕ್ಷನ್-ಕಟ್ ಹೇಳಿರುವ 'ಮಳೆ' ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಹಾಗು 'ಚೆಲುವಿನ ಚಿತ್ತಾರ' ಬೆಡಗಿ ಅಮೂಲ್ಯ ಬೆಳ್ಳಿತೆರೆಯ ಮೇಲೆ ಮಿಂಚಲಿದ್ದಾರೆ.


ಈಗಾಗಲೇ ಪೋಸ್ಟರ್ ಹಾಗೂ ಬ್ಯೂಟಿಫುಲ್ ಹಾಡುಗಳ ಮೂಲಕ ಭಾರಿ ಪ್ರಶಂಸೆ ಗಿಟ್ಟಿಸಿಕೊಂಡಿರುವ 'ಮಳೆ' ಚಿತ್ರದ ಬಗ್ಗೆ ಅಭಿಮಾನಿಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಅಂತಾನೇ ಹೇಳಬಹುದು.[ಏಪ್ರಿಲ್ ನಲ್ಲಿ ಪ್ರೇಮ್-ಅಮೂಲ್ಯ 'ಮಳೆ' ಆರ್ಭಟ]


Lovely Star Prem's 'Male' is all set for a grand release August 7th

ಸುಮಾರು 200 ಚಿತ್ರಮಂದಿರಗಳಲ್ಲಿ ನಾಳೆ ಚಿತ್ರ ತೆರೆ ಕಾಣುತ್ತಿದ್ದು, ಆರ್.ಎಸ್ ಪ್ರೊಡಕ್ಷನ್ ಹೌಸ್ 'ಮಳೆ' ಚಿತ್ರವನ್ನು ಕರ್ನಾಟಕದಾದ್ಯಂತ ವಿತರಿಸಲಿದ್ದಾರೆ. ಮಾತ್ರವಲ್ಲದೇ ನಮ್ಮ ರಾಜಧಾನಿ ಬೆಂಗಳೂರಿನ ಸುಮಾರು 80 ಚಿತ್ರಮಂದಿರಗಳಲ್ಲಿ ನಾಳೆ 'ಮಳೆ' ಸುರಿಯಲಿದೆ.[ಫೆ.14 ನಂತರವಾದ್ರೂ ಪ್ರೇಮ ಮಳೆ ಶುರುವಾಗುತ್ತಾ?]


ಪಕ್ಕಾ ಲವ್ ಸ್ಟೋರಿಯನ್ನು ಹೊಂದಿರುವ 'ಮಳೆ' ಚಿತ್ರದಲ್ಲಿ ಲವ್ಲೀ 'ಪ್ರೇಮ' ಧಾರೆಯಲ್ಲಿ ಗೋಲ್ಡನ್ ಗರ್ಲ್ ಅಮ್ಮು ಮೀಯಲಿದ್ದಾರೆ.


ಈ ಮಾನ್ಸೂನ್ ನಲ್ಲಿ ಪ್ರೇಮ ಮಳೆಯಲ್ಲಿ ಒದ್ದೆಯಾಗುವ ಅಮೂಲ್ ಬೇಬಿ ಹಾಗೂ ಲವ್ಲೀ ಸ್ಟಾರ್ ದರ್ಶನಕ್ಕೆ ನೀವು ಕಾಯ್ತ ಇದ್ದರೆ ಇನ್ಯಾಕೆ ತಡ ನಾಳೆನೇ ಥಿಯೇಟರ್ ಗೆ ಹೋಗಿ ನೀವೂ ಪ್ರೀತಿಯ 'ಮಳೆ' ಯಲ್ಲಿ ಮಿಂದೆದ್ದು ಬನ್ನಿ, ಏನಂತೀರಾ.?

English summary
Lovely Star Prem's 'Male' is all set for a grand release tomorrow, August 7th. Directed by Debut director AR Shiva Tejas, R Chandru has produced the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada