For Quick Alerts
  ALLOW NOTIFICATIONS  
  For Daily Alerts

  'ಮಾರ' ಮಾಧವನ್‌ಗೆ ಕಾರ್ತಿಕ್ ಜಯರಾಮ್ ಧ್ವನಿ

  |

  ನಟ ಆರ್.ಮಾಧವನ್‌ ಹೊಸ ಸಿನಿಮಾ 'ಮಾರ' ಡಿಸೆಂಬರ್ 17 ರಂದು ಅಮೆಜಾನ್‌ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕನ್ನಡ ಅವತರಣಿಕೆಯೂ ಅದೇ ದಿನ ಬಿಡುಗಡೆ ಆಗುತ್ತಿದೆ.

  ಕನ್ನಡದಲ್ಲಿ ಬಿಡುಗಡೆ ಆಗಲಿರುವ 'ಮಾರಾ' ಸಿನಿಮಾದಲ್ಲಿ ನಟ ಮಾಧವನ್‌ಗೆ ದನಿಯಾಗಿರುವುದು ನಟ ಕಾರ್ತಿಕ್ ಜಯರಾಮ್. ಮಾರಾ ರ ಕನ್ನಡ ಡಬ್ಬಿಂಗ್ ವರ್ಷನ್‌ಗೆ ಮಾಧವನ್ ಪಾತ್ರಕ್ಕೆ ಕಾರ್ತಿಕ್ ಧ್ವನಿ ನೀಡಿದ್ದಾರೆ. ಈ ವಿಷವಯನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ ನಟ ಕಾರ್ತಿಕ್.

  'ಅದ್ಭುತವಾದ ನಟ ಮಾಧವನ್‌ ಗೆ ಧ್ವನಿ ನೀಡಿದ್ದು ಬಹಳ ಖುಷಿ ಕೊಟ್ಟಿತು. ಅವರ ಮುಂಬರುವ ಸಿನಿಮಾ 'ಮಾರ' ದ ಕನ್ನಡ ಅವತರಣಿಕೆಗೆ ಮಾಧವನ್‌ ಗೆ ಧ್ವನಿ ನೀಡಿದ್ದೇನೆ' ಎಂದಿದ್ದಾರೆ. ಈ ಅವಕಾಶ ಕೊಟ್ಟಿದ್ದಕ್ಕೆ ಹಲವರಿಗೆ ಧನ್ಯವಾದಗಳನ್ನು ಸಹ ಅವರು ಇನ್‌ಸ್ಟಾಗ್ರಾಂ ನಲ್ಲಿ ವ್ಯಕ್ತಪಡಿಸಿದ್ದಾರೆ.

  ದುಲ್ಕರ್ ಸಲ್ಮಾನ್-ಪಾರ್ವತಿ ಮೆನನ್ ನಟಿಸಿದ್ದ ಸೂಪರ್ ಹಿಟ್‌ ಮಲಯಾಳಂ ಸಿನಿಮಾ 'ಚಾರ್ಲಿ' ಸಿನಿಮಾದ ರೀಮೇಕ್ 'ಮಾರಾ' ಆಗಿದ್ದು, ದುಲ್ಕರ್ ನಟಿಸಿದ್ದ ಚಾರ್ಲಿ ಪಾತ್ರದಲ್ಲಿ ಮಾಧವನ್ ನಟಿಸಿದ್ದರೆ, ಪಾರ್ವತಿ ನಟಿಸಿದ್ದ ಟೆಸ್ಸಾ ಪಾತ್ರದಲ್ಲಿ ಕನ್ನಡತಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ.

  ಮಾಧವನ್ ಜೊತೆಗೆ ಶ್ರದ್ಧಾ ಶ್ರೀನಾಥ್ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಈ ಮೊದಲು ಈ ಜೋಡಿ 'ವಿಕ್ರಂ ವೇದಾ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ 'ಮಾರಾ' ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ.

  Recommended Video

  ದಶಕಗಳು ಕಳೆದ್ರು ಇಂದಿಗೂ ರಾಜಣ್ಣನೆ ನಂಬರ್ ಒನ್ | Dr Rajkumar | Filmibeat Kannada

  'ಮಾರಾ' ಸಿನಿಮಾದ 'ಯಾರ್ ಅಳೈಪದು' ಲಿರಿಕಲ್ ವಿಡಿಯೋ ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಹಾಡು ಹಿಟ್ ಆಗಿದೆ. ಸಿನಿಮಾವು ಡಿಸೆಂಬರ್ 17 ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ದಿಲೀಪ್ ಕುಮಾರ್ ನಿರ್ದೇಶಿಸಿದ್ದು, ಸಂಗೀತ ಗಿಬ್ರಾನ್‌ದು.

  English summary
  Maara movie will release in Kannada also. Actor Karthik Jayaram gives voice to R Madhavan in Kannada.
  Friday, December 11, 2020, 14:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X