For Quick Alerts
  ALLOW NOTIFICATIONS  
  For Daily Alerts

  'ಟಗರು' ಬಳಿಕ ಮಾಸ್ತಿಗೆ ಜಾಸ್ತಿಯಾಗಿದೆ ಅವಕಾಶಗಳು

  By Pavithra
  |

  Recommended Video

  ಟಗರು ಸಿನಿಮಾದಿಂದ ಡೈಲಾಗ್ ರೈಟರ್ ಗೆ ಸಿಕ್ತು ಟ್ವಿಸ್ಟ್ | Filmibeat Kannada

  'ಟಗರು' ಒಂದೇ ಸಿನಿಮಾ ಸಾಕಷ್ಟು ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಕನ್ನಡ ಸಿನಿಮಾರಂಗದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಸಾಕಷ್ಟು ಉಪಯೋಗವನ್ನು ಮಾಡಿಕೊಟ್ಟಿತು. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿಯೂ ಅವಕಾಶಗಳು ಅರಸಿ ಬರಲು ಕಾರಣವಾಯ್ತು.

  ಸಿನಿಮಾ ಬಿಡುಗಡೆ ಆದ ನಂತರ ಅಭಿಮಾನಿಗಳು ಟಗರು ಸಿನಿಮಾದ ಸಂಭಾಷಣೆಯನ್ನು ಮೆಚ್ಚಿಕೊಂಡಿದ್ದರು. ಸೈಲೆಂಟ್ ಆಗಿಯೇ ಸೌಂಡ್ ಮಾಡುವ ಡೈಲಾಗ್ ಗಳು ಪ್ರೇಕ್ಷಕರ ತಲೆಯಲ್ಲಿ ಮತ್ತೆ ಮತ್ತೆ ಗಿರಕಿ ಹೊಡೆಯುವುದಕ್ಕೆ ಶುರುವಾಯ್ತು.

  'ಭರತ ಚಕ್ರವರ್ತಿ' ಶಿವಣ್ಣನ ಸಿನಿಮಾ ಗೆಲ್ಲೋದು ಇದೇ ಕಾರಣಕ್ಕೆ ಇರ್ಬೋದು!'ಭರತ ಚಕ್ರವರ್ತಿ' ಶಿವಣ್ಣನ ಸಿನಿಮಾ ಗೆಲ್ಲೋದು ಇದೇ ಕಾರಣಕ್ಕೆ ಇರ್ಬೋದು!

  ಅದೇ ರೀತಿಯಲ್ಲಿ ಚಿತ್ರದ ಸಂಭಾಷಣೆಕಾರ ಮಾಸ್ತಿ ಚಂದನವನದಲ್ಲಿ ಸೌಂಡ್ ಮಾಡಲು ಶುರು ಮಾಡಿದ್ದಾರೆ. ದೊಡ್ಡ ಚಿತ್ರಗಳಿಗೆ ಮಾಸ್ತಿ ಅವರೇ ಸಂಭಾಷಣೆ ಬರೆಯಬೇಕು ಎಂದು ಚಿತ್ರತಂಡದವರು ಪಟ್ಟುಹಿಡಿಯುತ್ತಿದ್ದಾರೆ. ಸದ್ಯ ಮಾಸ್ತಿ ಕೈನಲ್ಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ

  ಮಾಸ್ತಿ ಬೇಡಿಕೆ ಸಂಭಾಷಣೆಕಾರ

  ಮಾಸ್ತಿ ಬೇಡಿಕೆ ಸಂಭಾಷಣೆಕಾರ

  ಮಾಸ್ತಿ 'ಟಗರು' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಪ್ರಖ್ಯಾತಿ ಗಳಿಸಿದ ಸಂಭಾಷಣೆಕಾರ. ಇದಕ್ಕೂ ಮುಂಚೆಯೂ ಮಾಸ್ತಿ ಸಾಕಷ್ಟು ವರ್ಷದಿಂದ ಸ್ಯಾಂಡಲ್ ವುಡ್ ನ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

  'ಅಯೋಗ್ಯ'ನಿಗೆ ಮಾಸ್ತಿ ಸಂಭಾಷಣೆ

  'ಅಯೋಗ್ಯ'ನಿಗೆ ಮಾಸ್ತಿ ಸಂಭಾಷಣೆ

  ನೀನಾಸಂ ಸತೀಶ್ ಅಭಿನಯದ 'ಅಯೋಗ್ಯ' ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಮಹೇಶ್ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಮಂಡ್ಯ ಭಾಷೆಯ ಸೊಗಡು ಚಿತ್ರದ ಸಂಭಾಷಣೆಯಲ್ಲಿರುತ್ತದೆ.

  ವಿಜಯ್ 'ಕುಸ್ತಿ' ಚಿತ್ರಕ್ಕೆ ಸಂಭಾಷಣೆ

  ವಿಜಯ್ 'ಕುಸ್ತಿ' ಚಿತ್ರಕ್ಕೆ ಸಂಭಾಷಣೆ

  ದುನಿಯಾ ವಿಜಿ ನಿರ್ಮಾಣದಲ್ಲಿ ಸೆಟ್ಟೇರಲು ಸಜ್ಜಾಗಿರುವ 'ಕುಸ್ತಿ' ಸಿನಿಮಾಗೂ ಮಾಸ್ತಿ ಅವರೇ ಸಂಭಾಷಣೆ ಬರೆಯುತ್ತಿದ್ದಾರೆ. 'ಕುಸ್ತಿ'ಯ ಸಂಫೂರ್ಣ ಸಂಭಾಷಣೆ ಜವಾಬ್ದಾರಿಯನ್ನು ಮಾಸ್ತಿಯವರೇ ವಹಿಸಿಕೊಂಡಿದ್ದಾರೆ.

  'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಡೈಲಾಗ್

  'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಡೈಲಾಗ್

  ಸ್ಪೆಷಲ್ ಸ್ಟಾರ್ ಧನಂಜಯ ಅಭಿನಯದ 'ಭೈರವ ಗೀತಾ' ಹಾಗೂ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಮಾಸ್ತಿ ಅವರ ಸಂಭಾಷಣೆ ಇರಲಿದೆ. ಈ ಮೂಲಕ ದುನಿಯಾ ಸೂರಿ ಹಾಗೂ ಧನಂಜಯ ಅವರ ಜೊತೆ ಮಾಸ್ತಿ ಮತ್ತೆ ಕೆಲಸ ಮಾಡಲಿದ್ದಾರೆ.

  'ಅಖಿಲ್' ಚಿತ್ರಕ್ಕೆ ಮಾಸ್ತಿ ಡೈಲಾಗ್

  'ಅಖಿಲ್' ಚಿತ್ರಕ್ಕೆ ಮಾಸ್ತಿ ಡೈಲಾಗ್

  ಮಾಸ್ತಿ ಕೇವಲ ಸ್ಟಾರ್ ಚಿತ್ರಗಳಿಗೆ ಮಾತ್ರವಲ್ಲದೇ ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಕಲಾವಿದರ ಸಿನಿಮಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಸೂರಜ್ ಕುಮಾರ್ ಅಭಿನಯದ 'ಅಖಿಲ್' ಚಿತ್ರಕ್ಕೆ ಡೈಲಾಗ್ ಬರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಮಾಸ್ತಿ.

  ಶಿವಣ್ಣ ಚಿತ್ರಕ್ಕೆ ಕೆಲಸ ಮಾಡಲಿರುವ ಮಾಸ್ತಿ

  ಶಿವಣ್ಣ ಚಿತ್ರಕ್ಕೆ ಕೆಲಸ ಮಾಡಲಿರುವ ಮಾಸ್ತಿ

  ಈಗಾಗಲೇ ಟಗರು ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸಂಭಾಷಣೆ ಬರೆದು ಭೇಷ್ ಎನ್ನಿಸಿಕೊಂಡಿರುವ ಮಾಸ್ತಿ ಯೋಗರಾಜ್ ಭಟ್ ಹಾಗೂ ಶಿವಣ್ಣ ಕಾಂಬಿನೇಶನ್ ಚಿತ್ರದಲ್ಲಿಯೂ ಕೆಲಸ ಮಾಡಲಿದ್ದಾರೆ.

  English summary
  Maasti is a very demanding Kannada film dialogue writer. Maasti is a very demanding Kannada film dialogue writer. masti now dialogue writing for Ayogya, Kusthi, Akhil, Bhairava Geeta movies.
  Monday, July 16, 2018, 17:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X