»   » ಕಾರಣವಿಲ್ಲದೇ ಕಣ್ಣೀರಿಟ್ಟ 'ಮಹಾಕಾಳಿ' ಮಾಲಾಶ್ರೀ

ಕಾರಣವಿಲ್ಲದೇ ಕಣ್ಣೀರಿಟ್ಟ 'ಮಹಾಕಾಳಿ' ಮಾಲಾಶ್ರೀ

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನ ಆಕ್ಷನ್ ಕ್ವೀನ್ ಮಾಲಾಶ್ರಿ ಅಭಿನಯದ 'ಮಹಾಕಾಳಿ' ಚಿತ್ರ ಈ ಶುಕ್ರವಾರ (ಏ.24) ತೆರೆಗೆ ಬರುತ್ತಿದೆ. ಮಾಲಾಶ್ರಿ ಅಭಿನಯಿಸಿದ ಸಿನಿಮಾ ಅಂದ್ರೆ ಸಿನಿಪ್ರೇಮಿಗಳು ನಿರೀಕ್ಷೆ ಇಟ್ಟುಕೊಳ್ಳೋ ರೀತೀನೇ ಬೇರೆ.

ಕಣ್ಣುಗಳಲ್ಲಿ ಬೆಂಕಿ, ಆಕ್ಷನ್ ಗೆ ನಿಂತ್ರೆ ಬಿರುಗಾಳಿ ಈ ಲೇಡಿ ಟೈಗರ್. ಮಾಲಾಶ್ರಿಯವರ ಆಕ್ಷನ್ ಸ್ಟಂಟ್ ಮೇಕಿಂಗ್ ನೋಡಿ ಕನ್ನಡದ ಪ್ರೇಕ್ಷಕರು ಥ್ರಿಲ್ಲಾಗ್ತಾರೆ. ದುರ್ಗಿ, ಶಕ್ತಿಯಂತಹಾ ಸಿನಿಮಾಗಳಲ್ಲಿ ಅಭಿನಯಿಸಿದ್ದ ಮಾಲಾಶ್ರಿ ಈಗ ಮಹಾಕಾಳಿಯಾಗಿ ಮಿಂಚು, ಗುಡುಗು, ಸಿಡಿಲಾಗ್ತಾರೆ. ಭ್ರಷ್ಟರ, ದುಷ್ಟರ ಎದೆ ಬಗೆಯುತ್ತಾರೆ.

ಎಸ್ ಮಹೆಂದರ್ ಎರಡನೇ ಬಾರಿಗೆ ಮಾಲಾಶ್ರಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸೆಂಟಿಮೆಂಟ್ ಸಿನಿಮಾಗಳ ನಿರ್ದೇಶಕ ಮಹೆಂದರ್ ಆಕ್ಷನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮಹಾಕಾಳಿ ಅನ್ನೋ ಟೈಟಲ್ ನಿರ್ದೇಶಕರನ್ನ ಮಾತ್ರವಲ್ಲ ಚಿತ್ರತಂಡವನ್ನೂ ಕಾಡಿದೆ. ಮಾಲಾಶ್ರಿಯವರಿಗೂ ಆಘಾತವಾಗಿದೆ. ಆ ವಿಶೇಷಗಳು ಒಂದೆರಡಲ್ಲ..

ಕಾರಣವಿಲ್ಲದೇ ಕಣ್ಣೀರಿಟ್ಟ ಮಾಲಾಶ್ರಿ

ಚಿತ್ರದ ಫೈಟ್ಸ್ ಶೂಟಿಂಗಾಗಿ ಚಿತ್ರತಂಡ ರೆಡಿಯಾಗಿತ್ತು. ಶೂಟಿಂಗ್ ಗೆ ಹೊರಡೋಕೆ ಬೆಳಿಗ್ಗೆ ಎದ್ದ ಮಾಲಾಶ್ರಿಯವ್ರ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಯಾಕೆ ಅಳ್ತಿದ್ದೀರಿ ಅಂತ ಪತಿ ನಿರ್ಮಾಪಕ ರಾಮು ಕೇಳಿದ್ರೆ ಮಾಲಾಶ್ರಿಯವರಿಗೆ ಕಣ್ಣೀರು ಬರ್ತಿರೋದ್ಯಾಕೆ ಅನ್ನೋದನ್ನ ಹೇಳೋಕೆ ಕಾರಣವೇ ಇರಲಿಲ್ಲ. ಕೊನೆಗೂ ಕಣ್ಣೀರು ತಡೆದು ಶೂಟಿಂಗ್ ಗೆ ಹೊರಟ ಮಾಲಾಶ್ರಿಯವರಿಗೆ ಶೂಟಿಂಗ್ ಸ್ಪಾಟ್ ನಲ್ಲಿ ಒಂದು ಆಘಾತ ಕಾದಿತ್ತು.

ಶೂಟಿಂಗ್ ನಲ್ಲಿ ಅನಾಹುತ

ಥ್ರಿಲ್ಲರ್ ಮಂಜು ಕಂಪೋಸ್ ಮಾಡ್ತಿದ್ದ ಫೈಟ್ಸ್ ಅದು. ಮೊದಲಿಗೆ ಪೂಜೆ ಮಾಡಿ ಫೈಟ್ಸ್ ಶೂಟಿಂಗ್ ಶುರುಮಾಡಿದ್ರೂ ಫೈಟಿಂಗ್ ನಲ್ಲಿ ಒಬ್ಬ ಫೈಟರ್ ಗೆ ಪ್ರಾಣ ತೆಗೆಯಬೇಕಿದ್ದ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಇದು ಮಾಲಾಶ್ರೀ ಮತ್ತು ಮಹೇಂದರ್ ಅವರನ್ನು ಬೆಚ್ಚಿ ಬೀಳಿಸಿದೆ.

ಬೆಂಡಾದ ನಿರ್ದೇಶಕ ಮಹೇಂದರ್

ಮುಹೂರ್ತ ಮುಗಿಸಿ ಮನೆಗೆ ಹೊರಟ ಮಹೇಂದರ್ ಬೆಳಗ್ಗೆ ಎದ್ದು ನೋಡಿದ್ರೆ ಬೆನ್ನಲ್ಲಿ ಪೊಲೀಸ್ ಲಾಠಿಯಲ್ಲಿ ಹೊಡೆದಂತೆ ಮೈಯ್ಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಪದೇ ಪದೇ ಇಂತಹ ಭಯ 'ಮಹಾಕಾಳಿ' ಶೂಟಿಂಗ್ ಉದ್ದಕ್ಕೂ ನಡೆದೇ ಇತ್ತು.

ಮುಹೂರ್ತದ ದಿನವೇ ಭಯ

ಮುಹೂರ್ತ ನಡೆದ ದಿನವೇ ಮಹೇಂದರ್ ಗೆ ಪತ್ನಿ ಫೋನ್ ಮಾಡಿ ಏನೋ ಭಯಾನಕವಾದ ಕನಸು ಕಂಡೆ ಅಂದಿದ್ರಂತೆ. ಅದಾದ ನಂತರ ಇಂತಹ ಅನಾಹುತಗಳು ಘಟಿಸೋಕೆ ಶುರುವಾಗಿದೆ. ಮಹಾಕಾಳಿ ಅನ್ನೋ ಟೈಟಲ್ ಗೆ ಒಂದು ಶಕ್ತಿ ಇದೆ ಅನ್ನೋ ಭಯ ಆವತ್ತೇ ಚಿತ್ರತಂಡಕ್ಕೆ ಹುಟ್ಟಿತ್ತಂತೆ.

ಪ್ಯಾಕಪ್ ಅನ್ನೋಕೆ ಭಯ

ಶೂಟಿಂಗ್ ಮುಗಿಸಿದ ಸಂಜೆ ಪ್ಯಾಕಪ್ ಅನ್ನೋಕೆ ನಿರ್ದೇಶಕರು ಭಯಪಡ್ತಿದ್ರಂತೆ. ಯಾಕಂದ್ರೆ ಶೂಟಿಂಗ್ ಮುಗಿಸಿ ಹೊರಟ್ರೆ ಮಾರನೇ ದಿನ ಯಾರಿಗೋ ಹುಷಾರಿಲ್ಲದ ಹಾಗೆ ಆಗ್ತಿತ್ತು ಶೂಟಿಂಗ್ ಕ್ಯಾನ್ಸಲ್ ಆಗಿಬಿಡ್ತಿತ್ತಂತೆ.

ಮಹಾಕಾಳಿ ಅವತಾರ

ಇಂತಹಾ ಕಥೆಯಲ್ಲಿ ಅಭಿನಯಿಸೋಕೆ ಮಾಲಾಶ್ರೀಯವರಿಗೆ ಮಾತ್ರ ಸಾಧ್ಯ ಅನ್ನೋ ಕ್ರೆಡಿಟ್ ಕೊಡ್ತಾರೆ ನಿರ್ದೇಶಕ ಮಹೇಂದರ್. ಬೇರೆ ಯಾರೂ ಮಲಾಶ್ರಿಯವರ ಪಾತ್ರವನ್ನ ತೂಗಲಾರರು, ಕಾಳಿಯಾಗಿ ಮಾಲಾಶ್ರಿ ಪರಿಪೂರ್ಣ ಆವರಿಸಿಕೊಳ್ಳುತ್ತಾರೆ.

ಎಂಟರ್ ಟೈನರ್ ಚಿತ್ರ ಏ.24ಕ್ಕೆ ತೆರೆಗೆ

ಮಾಲಾಶ್ರಿ ಅಂದಮಾತ್ರಕ್ಕೆ ಕೇವಲ ಫೈಟ್ಸ್ ಮತ್ತು ಆಕ್ಷನ್ ಮಾತ್ರ ಚಿತ್ರದಲ್ಲಿಲ್ಲ. ಸೆಂಟಿಮೆಂಟ್ ಜೊತೆ ಒಂದು ಕ್ಯೂಟ್ ಕ್ಯೂಟ್ ಲವ್ ಸ್ಟೋರೀನೂ ಇದೆ. ಒಂದು ಹೊಸ ಜೋಡಿ ಕೂಡ ಚಿತ್ರದಲ್ಲಿದೆ. ಬಹಳ ದಿನಗಳ ನಂತರ ಕನಸಿನ ರಾಣಿ ಮಾಲಾಶ್ರಿ ಅಭಿನಯದ ಚಿತ್ರ ಇದೇ 24ರಂದು ತೆರೆಗೆ ಬರ್ತಿದೆ.

English summary
Sandalwood action queen Mahalashri shed tears on the sets of 'Mahakali', without reason. Here is the horrible experience of the 'Mahakali' team. The director S Mahendar also feared during the shooting of this film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada