For Quick Alerts
  ALLOW NOTIFICATIONS  
  For Daily Alerts

  ಮೂರು ಚಿತ್ರಗಳ ನಡುವೆ ಈ ವಾರ ಜುಗಲ್ ಬಂಧಿ

  By Rajendra
  |

  ಈ ವರ್ಷದ ಮೊದಲ ಚಿತ್ರ ಘರ್ಷಣೆ ಹಾಗೂ ಕರ್ನಾಟಕ ಅರ್ಯೋಧ್ಯೆಪುರಂ ಚಿತ್ರಗಳ ಬಳಿಕ ಈಗ ಎರಡನೇ ವಾರದಲ್ಲಿ ಒಟ್ಟಿಗೆ ಮೂರು ಚಿತ್ರಗಳು ತೆರೆಕಾಣುತ್ತಿವೆ. ಮೂರು ಚಿತ್ರಗಳು ಭಿನ್ನ ಎಂಬುದು ಈ ಬಾರಿಯ ವಿಶೇಷ. ಒಂದು ಕ್ರಾಂತಿಪುರುಷ ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬರಾದ ಹರಳಯ್ಯನ ಕಥೆ ಆಧಾರಿಸಿದ ಚಿತ್ರವಾದರೆ. ಇನ್ನೆರಡು ಚಿತ್ರಗಳಲ್ಲಿ ಒಂದು ಆಕ್ಷನ್ ಇನ್ನೊಂದು ಕಾಮಿಡಿ ಚಿತ್ರ.

  ಒಟ್ಟಾರೆಯಾಗಿ ಮೂರು ಮೂರು ಚಿತ್ರಗಳು ತೆರೆಕಾಣುವ ದಿನಗಳು ಈ ವರ್ಷದ ಆರಂಭದಿಂದಲೇ ಶುರುವಾಗಿದೆ. ಪ್ರಜ್ವಲ್ ದೇವರಾಜ್ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿರುವ 'ಅಂಗಾರಕ' ಚಿತ್ರ ಈ ವಾರ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

  ಇದರ ಜೊತೆಗೆ ಪಕ್ಕಾ ಕಾಮಿಡಿ ಚಿತ್ರ 'ನಗೆಬಾಂಬ್' ಬರುತ್ತಿದೆ. ಪ್ರೇಕ್ಷಕರು ನಗಬೇಕೋ, ಆಕ್ಷನ್ ಸವಿಯಬೇಕೋ ಅಥವಾ ಇತಿಹಾಸ ಪುರುಷನೊಬ್ಬನ ಕಥೆ ಕೇಳಬೇಕೋ ಎಂಬ ನಿರ್ಧಾರ ಅವರಿಗೆ ಬಿಟ್ಟಿದ್ದು. ಕಥೆಯ ದೃಷ್ಟಿಯಲ್ಲಿ ಮೂರು ಚಿತ್ರಗಳು ಭಿನ್ನವಾಗಿರುವ ಕಾರಣ ತಲಾ ಒಂದೊಂದು ಶೋ ಒಂದೊಂದು ಚಿತ್ರಕ್ಕೆ ಮೀಸಲಿಟ್ಟರೂ ಅಡ್ಡಿಯಿಲ್ಲ.

  ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಕ್ರಾಂತಿಪುರುಷನ ಕಥೆ

  ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಕ್ರಾಂತಿಪುರುಷನ ಕಥೆ

  ಭಾಗ್ಯೋದಯ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಎ. ದೇವರಾಜ್ ನಿರ್ಮಿಸಿರುವ 'ಮಹಾಶರಣ ಹರಳಯ್ಯ' ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹನ್ನೆರಡನೇ ಶತಮಾನದಲ್ಲಿಯೇ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಕ್ರಾಂತಿಪುರುಷ ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬರಾದ ಹರಳಯ್ಯನವರ ಕಥೆ ಆಧಾರಿತ ಚಿತ್ರ.

  ಬಿ.ಎ.ಪುರಷೋತ್ತಮ್ ಚಿತ್ರಕಥೆ, ಸಂಭಾಷಣೆ, ನಿರ್ದೇಶನ

  ಬಿ.ಎ.ಪುರಷೋತ್ತಮ್ ಚಿತ್ರಕಥೆ, ಸಂಭಾಷಣೆ, ನಿರ್ದೇಶನ

  ಬಿ.ಎ.ಪುರಷೋತ್ತಮ್ (ಓಂಕಾರ್) ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಛಾಯಾಗ್ರಹಣ, ಜಿಮ್ಮಿರಾಜ್ ಸಂಗೀತ, ಹೈಟ್ ಮಂಜು ನೃತ್ಯ, ಎಸ್. ಕುಮಾರ್ ಸಂಕಲನ, ಓಂಕಾರ್ ಸಾಹಿತ್ಯ, ಇಸ್ಮಾಯಿಲ್ ಕಲಾನಿರ್ದೇಶನ, ಕೆ.ವಿ.ರವಿಚಂದ್ರ, ರಾಮಕೃಷ್ಣ, ರಮೇಶ್ ಭಟ್, ರಾಜು(ಡಿಂಗ್ರಿ), ವಿಕ್ರಂ ಉದಯ್ ಕುಮಾರ್, ಜಯಲಕ್ಷ್ಮಿ, ಶೀಲಾ, ಸುಮಿತ್ರ ಅಭಿನಯಿಸಿದ್ದಾರೆ.

  ನಕ್ಕು ನಲಿಸಲು ಹಾಕುತ್ತಿದ್ದಾರೆ ನಗೆಬಾಂಬ್

  ನಕ್ಕು ನಲಿಸಲು ಹಾಕುತ್ತಿದ್ದಾರೆ ನಗೆಬಾಂಬ್

  ನೂರು ಸಿನೆಮಾಗಳ ಸಂಗೀತ ನಿರ್ದೇಶಕ, ಸ್ಥಾಯಿ ಡಿಜಿಟಲ್ ಸ್ಟುಡಿಯೋ ಸ್ಥಾಪಕ ರಾಜೇಶ್ ರಾಮನಾಥ್ ಅವರ ಮೊದಲ ನಿರ್ಮಾಣದ ಚಿತ್ರ 'ನಗೆ ಬಾಂಬ್' 2014ನೇ ವರ್ಷದಲ್ಲಿ ಬಿಡುಗಡೆ ಆಗುತ್ತಿರುವ ನಕ್ಕು ನಲಿಸುವಂತಹ ಚಿತ್ರ. ಹೊಸ ವಿಧಾನದ ಪ್ರಚಾರ ಹಮ್ಮಿಕೊಂಡು ಸಂತೋಷದಿಂದ ಇರುವ ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಚಿತ್ರದ ಯಶಸ್ಸಿನ ಬಗ್ಗೆ ಆತ್ಮ ವಿಶ್ವಾಸದಿಂದ ಇದ್ದಾರೆ.

  ಸಾಧು ಕೋಕಿಲ, ಮ್ಯಾಜಿಕ್ ಜಿನ್ನಿ, ಲಯೇಂದ್ರ ಸಹ ತಾರಾಗಣ

  ಸಾಧು ಕೋಕಿಲ, ಮ್ಯಾಜಿಕ್ ಜಿನ್ನಿ, ಲಯೇಂದ್ರ ಸಹ ತಾರಾಗಣ

  ಸಂಕಲನಕಾರ, ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಹಿಂದೆ ಹಾರ್ಟ್ ಬೀಟ್ಸ್, ರಾಕಿ ಚಿತ್ರಗಳಿಗೆ ನಿರ್ದೇಶನ ಮಾಡಿ ಈ ಬಾರಿ ಸಂಪೂರ್ಣ ಹಾಸ್ಯಮಯ ಚಿತ್ರಕ್ಕೆ ಚುಕ್ಕಾಣಿ ಹಿಡಿದಿದ್ದಾರೆ. ರವಿಶಂಕರ್ ಗೌಡ ಹಾಗೂ ಅನಿತಾ, ಮೌಸಾಮಿ, ಆನಂದಪ್ರಿಯ ಸಂಭಾಷಣೆ ಜೊತೆಗೆ ಪಾತ್ರವನ್ನು ಸಹ ಮಾಡಿದ್ದಾರೆ. ರಾಜೇಂದ್ರ ಕಾರಂತ್, ಸಾಧು ಕೋಕಿಲ, ಮ್ಯಾಜಿಕ್ ಜಿನ್ನಿ, ಲಯೇಂದ್ರ ಸಹ ತಾರಾಗಣದಲ್ಲಿ ಇದ್ದಾರೆ. ಕಿರಣ್ ಹಾಗೂ ಸುರೇಶ್ ಅವರ ಛಾಯಾಗ್ರಹಣ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಅವರ ಸಂಕಲನ, ವೆಂಕಟ್ ಅವರ ಸಾಹಸ, ರೆಡ್ಡಿ ಅವರ ನೃತ್ಯ ಸಂಯೋಜನ ಈ ಚಿತ್ರಕ್ಕಿದೆ.

  ಎರಡು ನಕ್ಷತ್ರಗಳ ಜೊತೆ 'ಅಂಗಾರಕ'

  ಎರಡು ನಕ್ಷತ್ರಗಳ ಜೊತೆ 'ಅಂಗಾರಕ'

  ಲವರ್ ಬಾಯ್ ಪಾತ್ರಗಳ ಮೂಲಕ ಬಾಕ್ಸ್ ಆಫೀಸಲ್ಲಿ ಇದುವರೆಗೂ ಆರಕ್ಕೇರದ ಮೂರಕ್ಕಿಳಿಯದ ಪ್ರಜ್ವಲ್ ದೇವರಾಜ್ ಈ ಬಾರಿ 'ಅಂಗಾರಕ'ನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ರಣೀತಾ ಹಾಗೂ ಹಾರ್ಧಿಕಾ ಶೆಟ್ಟಿ ಈ ಚಿತ್ರದ ಎರಡು ನಕ್ಷತ್ರಗಳು. ಹಾರ್ಧಿಕಾ ಶೆಟ್ಟಿ ಈಗಾಗಲೆ ಪ್ರಜ್ವಲ್ ಜೊತೆ 'ಗಲಾಟೆ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಸ್.ಎಸ್.ಎಸ್. ಸ್ಟುಡಿಯೋ ಮೂಲಕ ಟಿ.ಸಿ.ಜಯಸುಧಾ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

  ಪ್ರಜ್ವಲ್ ವೃತ್ತಿಜೀವನದಲ್ಲಿ ಹೊಸ ಬಗೆಯ ಸಿನೆಮಾ

  ಪ್ರಜ್ವಲ್ ವೃತ್ತಿಜೀವನದಲ್ಲಿ ಹೊಸ ಬಗೆಯ ಸಿನೆಮಾ

  ಶ್ರೀನಿವಾಸ್ ಕೌಶಿಕ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಅರ್ಜುನ್ ಜನ್ಯಾ ಅವರ ಸಂಗೀತ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಹೊತ್ತಿದ್ದಾರೆ. ಛಾಯಾಗ್ರಹಣ ಬಿ.ಎಲ್. ಬಾಬು. ಇಷ್ಟಕ್ಕೂ ಅಂಗಾರಕನ ಕಥೆ ಏನೆಂದರೆ...ಇದೊಂದು ಪಕ್ಕಾ ಆಕ್ಷನ್, ಫ್ಯಾಮಿಲಿ ಎಂಟರ್ ಟೈನರ್ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ಒಟ್ಟಾರೆಯಾಗಿ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರವನ್ನು ತೆರೆಗೆ ತರಲಾಗಿದೆ. ಪ್ರಜ್ವಲ್ ವೃತ್ತಿಜೀವನದಲ್ಲಿ ಹೊಸ ಬಗೆಯ ಸಿನೆಮಾ ಆಗಲಿದೆ ಎಂಬ ನಿರೀಕ್ಷೆ ಇದೆ. ತಾರಾಬಲ ಕೂಡಿಬಂದು ಗುರುಬಲ, ರಾಹುಕೇತು, ಶುಕ್ರನ ಅನುಗ್ರಹ 'ಅಂಗಾರಕ' ನಿಗಿರಲಿ.

  English summary
  This week 10th of January three Kannada movies are releasing. Mahasharana Haralayya a devotional film, 'Nage Bomb' a full length comedy film and 'Angaraka' a film on 'Ghost and God' are hitting the silver screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X