Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶೇಷ ವ್ಯಕ್ತಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ 'ಕನಸಿನ ರಾಣಿ', ಯಾಕೆ?
ಗಂಗಾ, ಮಹಾಕಾಳಿ, ಶಕ್ತಿ, ದುರ್ಗಿ, ಕಿರಣ್ ಬೇಡಿ ಹೀಗೆ ಸಾಲು ಸಾಲು ಆಕ್ಷನ್ ಸಿನಿಮಾಗಳ ಮೂಲಕ 'ಲೇಡಿ ಸೂಪರ್ ಸ್ಟಾರ್' ಎನಿಸಿಕೊಂಡಿರುವ ಮಾಲಾಶ್ರೀ ಅವರಿಗೆ ಫೆಬ್ರವರಿ 17 ತುಂಬಾ ವಿಶೇಷ.
ಮಾಲಾಶ್ರೀ ಅವರ ಈ ಸಂತೋಷದ ಸಂದರ್ಭದಲ್ಲಿ ಜೊತೆಗಿದ್ದ, ಈ ಯಶಸ್ವಿ ಜರ್ನಿಯಲ್ಲಿ ಹೆಜ್ಜೆ ಹಾಕಿದ ವಿಶೇಷ ವ್ಯಕ್ತಿಗಳಿಗೆ 'ಕನಸಿನ ರಾಣಿ' ಧನ್ಯವಾದ ತಿಳಿಸಿದ್ದಾರೆ.
ಈ
ನಟಿಯ
ಮೇಲೆ
ಕಿಚ್ಚ
ಸುದೀಪ್
ಗೆ
ಕ್ರಶ್
ಆಗಿತ್ತು.!
ಯಾರದು.?
ಮೂಲತಃ ತೆಲುಗಿನಲ್ಲಿ ಸಿನಿಮಾ ವೃತ್ತಿ ಆರಂಭಿಸಿದ ಮಾಲಾಶ್ರೀ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು ಮೂವತ್ತು ವರ್ಷ ಆಗಿದೆ. 'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಪ್ರೇಕ್ಷಕರೆದುರು ಬಂದ 'ದೇವಿ' ಈಗ ಸ್ಯಾಂಡಲ್ ವುಡ್ ಕನಸಿನ ರಾಣಿ. ಈ ವಿಶೇಷ ವೇಳೆಯಲ್ಲಿ ಆ ಚಿತ್ರದ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷ್ಯಗಳನ್ನ ಮೆಲುಕು ಹಾಕೋಣ. ಮುಂದೆ ಓದಿ.....

1989ರಲ್ಲಿ ತೆರೆಕಂಡಿದ್ದ 'ನಂಜುಂಡಿ ಕಲ್ಯಾಣ'
'ನಂಜುಂಡಿ ಕಲ್ಯಾಣ' ಸಿನಿಮಾ ಮಾಲಾಶ್ರೀ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿರುವ ಚಿತ್ರ. ಇದು ಮಾಲಾಶ್ರೀಗೆ ಮೊದಲ ಕನ್ನಡ ಸಿನಿಮಾ. ರಾಘವೇಂದ್ರ ರಾಜ್ ಕುಮಾರ್ ನಾಯಕನಾಗಿ ನಟಿಸಿದ ಎರಡನೇ ಚಿತ್ರ. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸಿದ್ದರು. ಬಹುದೊಡ್ಡ ಹಿಟ್ ಆದ ಈ ಚಿತ್ರದಿಂದ ಮಾಲಾಶ್ರೀಯ ವೃತ್ತಿ ಜೀವನವೇ ಬದಲಾಯ್ತು.

75 ವಾರ ಯಶಸ್ವಿ ಪ್ರದರ್ಶನ
ದಾಖಲೆಗಳ ಪ್ರಕಾರ, ನಂಜುಂಡಿ ಕಲ್ಯಾಣ ಸಿನಿಮಾ 75 ವಾರಗಳ ಕಾಲ ಯಶಸ್ವಿ ಪ್ರದರ್ಶನವಾಗಿದೆಯಂತೆ. ತೆಲುಗಿಗೂ ಈ ಚಿತ್ರ ರೀಮೇಕ್ ಆಗಿದೆ. ಇದಕ್ಕೂ ಮುಂಚೆ ರಾಘಣ್ಣ ಚಿರಂಜೀವಿ ಸುಧಾಕರ್ ಚಿತ್ರದಲ್ಲಿ ನಟಿಸಿದ್ದರೂ ಬ್ರೇಕ್ ಕೊಟ್ಟಿದ್ದು ನಂಜುಂಡಿ ಕಲ್ಯಾಣ. ಅದೇ ರೀತಿ ಮಾಲಾಶ್ರೀ ಅವರಿಗೂ ಅಷ್ಟೇ ನಂಜುಂಡಿ ಕಲ್ಯಾಣ ಮಾಡುವ ಮೊದಲು ಒಂದು ತೆಲುಗು ಮತ್ತು ಮೂರು ತಮಿಳು ಚಿತ್ರದಲ್ಲಿ ನಟಿಸಿದ್ದರು.
ಕಿರುತೆರೆಯಲ್ಲಿ
ಡ್ಯುಯೆಟ್
ಹಾಡಿದ
'ರಾಮಾಚಾರಿ'
ಜೋಡಿ

30 ವರ್ಷ ಯಶಸ್ವಿ ಜರ್ನಿ
'ನಂಜುಂಡಿ ಕಲ್ಯಾಣ' ಚಿತ್ರದ ನಂತರ ಮಾಲಾಶ್ರೀ ಕನ್ನಡದಲ್ಲೇ ಉಳಿದುಕೊಂಡರು. ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಸಮನಾಗಿ ಮಾಡುತ್ತಾ ಬಂದರು. ಗಜಪತಿ ಗರ್ವಭಂಗ, ಪ್ರೇಮಖೈದಿ, ರಾಣಿ ಮಹಾರಾಣಿ, ಪ್ರತಾಪ, ಹೃದಯ ಹಾಡಿತು, ಎಸ್.ಪಿ ಭಾರ್ಗವಿ, ರಾಮಾಚಾರಿ, ಬೆಳ್ಳಿ ಕಾಲುಂಗರ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಮಾಲಾಶ್ರೀ ನಟಿಸಿದರು.

ರಾಘಣ್ಣಗೂ ಲಕ್ ಕೊಟ್ಟ ಚಿತ್ರ
ಹಾಗ್ನೋಡಿದ್ರೆ, ಮಾಲಾಶ್ರೀಗೆ ಮಾತ್ರವಲ್ಲ, ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅದೃಷ್ಟ ಕೊಟ್ಟ ಸಿನಿಮಾ. ಈ ಚಿತ್ರದ ಬಳಿಕ ಬ್ಯಾಕ್ ಬ್ಯಾಕ್ ಹಿಟ್ ಸಿನಿಮಾ ಮಾಡಿದ ಖ್ಯಾತಿ ರಾಘಣ್ಣ ಅವರದ್ದು.