»   » ಇನ್ನೊಂದು 'ಎಲೆಕ್ಷನ್' ನೋಡಲು ರೆಡಿಯಾಗಿ

ಇನ್ನೊಂದು 'ಎಲೆಕ್ಷನ್' ನೋಡಲು ರೆಡಿಯಾಗಿ

Posted By:
Subscribe to Filmibeat Kannada

ಅಸಲಿ ಚುನಾವಣೆಯ ಅಬ್ಬರ ಮುಗಿದಿದೆ. ಸಿದ್ದರಾಮಯ್ಯ ಅವರು ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದೊಂದು ಬಾಕಿ ಇದೆ. ಅಷ್ಟರಲ್ಲಾಗಲೆ ಇನ್ನೊಂದು 'ಎಲೆಕ್ಷನ್' ಶುರುವಾಗುತ್ತಿದೆ. ಆದರೆ ಇದು ತೆರೆಯ ಮೇಲಿನ ಮಾಲಾಶ್ರೀ ಎಲೆಕ್ಷನ್.

ಚುನಾವಣೆಗೂ ಮುನ್ನವೇ ಎಲೆಕ್ಷನ್ ಚಿತ್ರವನ್ನು ತೆರೆಗೆ ತರಬೇಕು ಎಂದು ನಿರ್ಮಾಪಕ ರಾಮು ಹರಸಾಹಸಪಟ್ಟಿದ್ದರು. ಆದರೆ ಅವರ ಪ್ರಯತ್ನ ಫಲಿಸಲಿಲ್ಲ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ಸರ್ಟಿಫಿಕೇಟ್ ನೀಡಲು ನಿರಾಕರಿಸಿತ್ತು.


ಈಗ ಎಲೆಕ್ಷನ್ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಮೇ17ರಂದು ತೆರೆಗೆ ತರಲು ಸಿದ್ಧತೆ ನಡೆದಿದೆ. ಚಿತ್ರದಲ್ಲಿ ಎಂಟು ಕಡೆ ಸಂಭಾಷಣೆಯನ್ನು ಮ್ಯೂಟ್ ಮಾಡಲಾಗಿದೆ ಎನ್ನುತ್ತವೆ ಮೂಲಗಳು.

ಚಿತ್ರದಲ್ಲಿ ಲೇಡಿ ಬಾಂಡ್ ಮಾಲಾಶ್ರೀ ಅವರು ಎಲೆಕ್ಷನ್ ಕಮೀಷನರ್ ಆಗಿ ಪಾತ್ರವಹಿಸಿದ್ದಾರೆ. ಪಾತ್ರವರ್ಗದಲ್ಲಿ ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್, ಪ್ರದೀಪ್ ರಾವತ್ ಮುಂತಾದವರಿದ್ದಾರೆ.

ಎಲೆಕ್ಷನ್ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಹಾಗೂ ಸಾಹಿತ್ಯ, ರಾಜೇಶ್ ಅವರ ಛಾಯಾಗ್ರಹಣವಿದೆ. ಶ್ರೀನಿವಾಸಮೂರ್ತಿ, ಲೋಕನಾಥ್, ಮೈಕೋ ನಾಗರಾಜ್, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ.

ರಾಮು ಎಂಟರ್ ಪ್ರೈಸಸ್ ಬ್ಯಾನರ್ ನ ಲಾಕಪ್ ಡೆತ್, ಎಕೆ 47, ಸಿಂಹದ ಮರಿ, ಕಲಾಸಿಪಾಳ್ಯ, ಕನ್ನಡದ ಕಿರಣ್ ಬೇಡಿ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಓಂ ಪ್ರಕಾಶ್ ರಾವ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಇದು. ಓಂ ಮತ್ತೊಂದು ಹಿಟ್ ನಿರೀಕ್ಷೆಯಲ್ಲಿದ್ದಾರೆ. ರಾಮು ಲೆಕ್ಕಾಚಾರ ಉಲ್ಟಾ ಆಗಿದೆ. (ಏಜೆನ್ಸೀಸ್)

English summary
Malashri lead Kannada film 'Election' clears censor and got U/A certificate. Om Prakash Rao directed movie is set for release on 17th of May.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada