»   » ದಸರಾ ಹಬ್ಬಕ್ಕೆ ಮಾಲಾಶ್ರೀ 'ಗಂಗಾ' ರಿಲೀಸ್

ದಸರಾ ಹಬ್ಬಕ್ಕೆ ಮಾಲಾಶ್ರೀ 'ಗಂಗಾ' ರಿಲೀಸ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲೇಡಿ ಟೈಗರ್ ಮಾಲಾಶ್ರೀ ಅಭಿನಯದ ಚಿತ್ರ 'ಗಂಗಾ' ರಿಲೀಸ್ ಗೆ ರೆಡಿಯಾಗಿದೆ. ಸೆನ್ಸಾರ್ ಅಂಗಳದಿಂದ U/A ಸರ್ಟಿಫಿಕೇಟ್ ಪಡೆದಿರುವ 'ಗಂಗಾ' ದಸರಾ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ.

ಮಾಲಾಶ್ರೀ ಪತಿ, ಹೆಸರಾಂತ ನಿರ್ಮಾಪಕ ರಾಮು ನಿರ್ಮಾಣದ 39ನೇ ಸಿನಿಮಾ 'ಗಂಗಾ'. ಈ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಮಾಲಾಶ್ರೀ ಆಟೋ ಡ್ರೈವರ್ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ಹಲವು ವರ್ಷಗಳ ಗ್ಯಾಪ್ ನಂತರ ಬೆಳ್ಳಿತೆರೆ ಮೇಲೆ ಸೀರೆ ತೊಟ್ಟಿದ್ದಾರೆ.

ganga

ಹಾಗಂದ ಮಾತ್ರಕ್ಕೆ 'ಗಂಗಾ' ಚಿತ್ರದಲ್ಲಿ ಆಕ್ಷನ್ ಇಲ್ಲ ಅಂದುಕೊಳ್ಳಬೇಡಿ. ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಲಾಶ್ರೀ, 'ಗಂಗಾ' ಆಗಿ ಸೂಪರ್ ಸ್ಟಂಟ್ಸ್ ಮಾಡಿದ್ದಾರೆ. ಹಾಗೆ, ಖೇಡಿಗಳಿಗೆ ಸರಿಯಾಗಿ ತದಕಿದ್ದಾರೆ. ['ಮಹಾಕಾಳಿ', 'ಗಂಗಾ' ಮಾಲಾಶ್ರೀ ಬಹುಪರಾಕ್]

ನಿರ್ದೇಶಕ ಓಂ ಸಾಯಿ ಪ್ರಕಾಶ್, ಮಾಲಾಶ್ರೀಯವರ ಫ್ಯಾಮಿಲಿ ಇಮೇಜ್ ಹಾಗು ಮಾಸ್ ಇಮೇಜ್ ಬೆರೆಸಿ 'ಗಂಗಾ' ಚಿತ್ರವನ್ನ ರೆಡಿಮಾಡಿದ್ದಾರೆ. 'ಹಲೋ ಸಿಸ್ಟರ್', 'ಪೊಲೀಸನ ಹೆಂಡತಿ', 'ಗೃಹಪ್ರವೇಶ' ಚಿತ್ರಗಳ ಮೂಲಕ ಮಾಲಾಶ್ರೀ ಮತ್ತು ನಿರ್ದೇಶಕ ಓಂ ಸಾಯಿ ಪ್ರಕಾಶ್ ಕಾಂಬಿನೇಷನ್ ಹಿಟ್ ಆಗಿತ್ತು.

ಇದೀಗ ಇದೇ ಜೋಡಿ 'ಗಂಗಾ' ಮೂಲಕ ಒಂದಾಗಿದೆ. ಶ್ರೀನಿವಾಸ್ ಮೂರ್ತಿ, ಸತ್ಯ ಪ್ರಕಾಶ್, ಕೋಟೆ ಪ್ರಭಾಕರ್, ರವಿ ಚೇತನ್, ಪವಿತ್ರ ಲೋಕೇಶ್, ಹೇಮಾ ಚೌಧರಿ ತಾರಾಗಣದಲ್ಲಿದ್ದಾರೆ.

ಸೆನ್ಸಾರ್ ಅಂಗಳದಿಂದ ಕ್ಲೀನ್ ಚಿಟ್ ಪಡೆದಿರುವ 'ಗಂಗಾ' ದಸರಾ ಹಬ್ಬದ ಪ್ರಯುಕ್ತ ನಿಮ್ಮ ಮುಂದೆ ಬರಲಿದ್ದಾಳೆ.

English summary
Kannada Actress Malashri starrer 'Ganga' gets U/A Certificate from Censor Board and it is all set to release during Dasara Festival.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada