For Quick Alerts
  ALLOW NOTIFICATIONS  
  For Daily Alerts

  ಬಹುಭಾಷಾ ನಟಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ: ನಟ ದಿಲೀಪ್ ಗೆ ಜಾಮೀನು

  By Harshitha
  |

  ಅಂತೂ ಇಂತೂ ನಟ ದಿಲೀಪ್ ಗೆ ಜಾಮೀನು ಸಿಕ್ಕಿದೆ. ಕನ್ನಡ ಚಿತ್ರಗಳಲ್ಲೂ ನಟಿಸಿದ ಬಹುಭಾಷಾ ನಟಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಮಲಯಾಳಂ ನಟ ದಿಲೀಪ್ ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

  ಒಂದು ಲಕ್ಷ ಬಾಂಡ್ ಮೇರೆಗೆ ಕೇರಳ ಹೈಕೋರ್ಟ್ ಇಂದು ನಟ ದಿಲೀಪ್ ಗೆ ಷರತ್ತು ಬದ್ಧ ಜಾಮೀನು ನೀಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿ ನಾಶ ಮಾಡದಂತೆ ಹಾಗೂ ತನಿಖೆಗೆ ಸಹಕರಿಸುವಂತೆ ದಿಲೀಪ್ ಗೆ ಕೇರಳ ಹೈಕೋರ್ಟ್ ಸೂಚಿಸಿದೆ.

  ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ: ಪಲ್ಸರ್ ಸುನಿಯಿಂದ ಸ್ಫೋಟಕ ಸಂಗತಿ ಬಯಲು

  ಮಲಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 'ಮೆಗಾಸ್ಟಾರ್' ಹಾಗೂ ಪ್ರಖ್ಯಾತ ನಿರ್ದೇಶಕರೊಬ್ಬರು ಭಾಗಿಯಾಗಿದ್ದಾರೆ ಎಂದು ಪ್ರಮುಖ ಆರೋಪಿ ಪಲ್ಸರ್ ಸುನಿ, ಜೈಲುಪಾಲಾಗಿರುವ ಮತ್ತೊಬ್ಬ ಅಪರಾಧಿ ಎದುರು ಬಾಯ್ಬಿಟ್ಟಿದ್ದ. ಪಲ್ಸರ್ ಸುನಿ ನೀಡಿದ್ದ ಹೇಳಿಕೆ ಆಧಾರ ಮೇಲೆ ನಟ ದಿಲೀಪ್ ರನ್ನ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಬಳಿಕ ಬಂಧಿಸಿದರು.

  ನಟಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಗೆ 12 ತಾಸು ವಿಚಾರಣೆ

  ಜಾಮೀನಿಗಾಗಿ ಅನೇಕ ಬಾರಿ ಅರ್ಜಿ ಸಲ್ಲಿಸಿ ವಿಫಲರಾಗಿದ್ದ ದಿಲೀಪ್ ಗೆ ಇಂದು ಕಡೆಗೂ ಜಾಮೀನು ಮಂಜೂರು ಮಾಡಲಾಗಿದೆ.

  ಪ್ರಕರಣದ ಹಿನ್ನಲೆ: ಫೆಬ್ರವರಿ 17 ರಂದು ರಾತ್ರಿ 9.30 ರ ಸುಮಾರಿಗೆ, ಕೇರಳದ ಕೊಚ್ಚಿ ಇಂದ ತ್ರಿಶೂರ್ ಗೆ ತೆರಳುತ್ತಿದ್ದ ಮಲೆಯಾಳಂ ನಟಿಯನ್ನು ಐದು ಜನ ದುಷ್ಕರ್ಮಿಗಳ ತಂಡ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ್ದರು. ಇಡೀ ಘಟನೆಯನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡು, ಕಾರಿನಲ್ಲಿಯೇ ನಟಿಯನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ತದನಂತರ ತಮಗೆ ಪರಿಚಯವಿದ್ದ ನಿರ್ಮಾಪಕರೊಬ್ಬರ ಮನೆಗೆ ತೆರಳಿದ ನಟಿ ಪೊಲೀಸರಿಗೆ ದೂರು ನೀಡಿದ್ದರು.

  English summary
  Malayalam actor Dileep has finally secured bail from the Kerala High Court on Tuesday (October 3rd).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X