For Quick Alerts
  ALLOW NOTIFICATIONS  
  For Daily Alerts

  'ಮುತ್ತಪ್ಪ ರೈ' ಗೆ ಜೊತೆಯಾಗಲು ಕೇರಳದಿಂದ ಬಂದ ಚೆಲುವೆ

  |

  ಭೂಗತ ದೊರೆಯಾಗಿ ನಂತರ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದ ಮುತ್ತಪ್ಪ ರೈ ಜೀವನ ಸಿನಿಮಾ ಆಗುತ್ತಿದೆ. 'ಎಂಆರ್' ಹೆಸರಿನ ಈ ಸಿನಿಮಾವನ್ನು ರವಿ ಶ್ರೀವತ್ಸ ನಿರ್ದೇಶಿಸುತ್ತಿದ್ದಾರೆ.

  ಸಿನಿಮಾದಲ್ಲಿ ಮುತ್ತಪ್ಪ ರೈ ಪಾತ್ರವನ್ನು ದೀಕ್ಷಿತ್ ನಿರ್ವಹಿಸಲಿದ್ದು, ದೀಕ್ಷಿತ್ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಾಯಕ ನಟ ದೀಕ್ಷಿತ್, ರವಿ ಶ್ರೀವತ್ಸ ನಿರ್ದೇಶಿಸಿದ್ದ 'ಡೆಡ್ಲಿ ಸೋಮ' ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದರು.

  'ಎಂಆರ್' ಸಿನಿಮಾಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಕೇರಳದ ಸುಂದರಿ ಸೌಮ್ಯ ಮೆನನ್ ಕಣ್ಣಿಗೆ ಬಿದ್ದಿದ್ದು. ಈಗಾಗಲೇ ಐದು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸೌಮ್ಯಾ ರನ್ನೇ ಸಿನಿಮಾದ ನಾಯಕಿಯನ್ನಾಗಿ ಖಾತ್ರಿ ಮಾಡಲಾಗಿದೆ.

  ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭಿಸಲಾಗಿದೆ. ಆದರೆ ಅದು ನಾಯಕನ ಇಂಟ್ರೊಡಕ್ಷನ್ ಶಾಟ್ ಅನ್ನು ಮಾತ್ರವೇ ತೆಗೆಯಲಾಗಿದ್ದು, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಸಿನಿಮಾದ ಚಿತ್ರೀಕರಣವನ್ನು ಜನವರಿಯಲ್ಲಿ ಪ್ರಾರಂಭಿಸುವ ಇರಾದೆ ಸಿನಿಮಾ ತಂಡಕ್ಕಿದೆ.

  ಸಿನಿಮಾವನ್ನು ಪುತ್ತೂರು, ಮಂಗಳೂರು, ಬೆಂಗಳೂರು, ದುಬೈ ಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ ರವಿ ಶ್ರೀವತ್ಸ. ಸಿನಿಮಾದ ನಾಯಕ ದೀಕ್ಷಿತ್ ತಂದೆಯೇ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ಗುರುಕಿರಣ್.

  ಸಲಾರ್ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲಂಸ್ | Filmibeat Kannada

  ರಾಮ್ ಗೋಪಾಲ್ ವರ್ಮಾ ಸಹ ತಾವು ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು, ಆದರೆ ಅದು ಸಾಧ್ಯವಾಗಿರಲಿಲ್ಲ. ಮುತ್ತಪ್ಪ ರೈ ಜೀವನದ ಕೆಲ ಭಾಗಗಳು ಈಗಾಗಲೇ ಕೆಲವಾರು ಸಿನಿಮಾಗಳಲ್ಲಿ ಬಂದಿವೆ. ಆದರೆ ಒಟ್ಟಾರೆ ಜೀವನ ಸಿನಿಮಾ ಆಗುತ್ತಿರುವುದು ಇದೇ ಮೊದಲು.

  English summary
  Malayalam actress Sowmya Menon will act in MR movie which is life story of late don Muthappa Rai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X