»   » ಸ್ಯಾಂಡಲ್ ವುಡ್ ನಲ್ಲಿ ಮಲ್ಲು ಬೆಡಗಿಯರ ಕಲರವ

ಸ್ಯಾಂಡಲ್ ವುಡ್ ನಲ್ಲಿ ಮಲ್ಲು ಬೆಡಗಿಯರ ಕಲರವ

Posted By:
Subscribe to Filmibeat Kannada

ಕಲಾವಿದನಿಗೆ ಭಾಷೆಯ ಚೌಕಟ್ಟು ಅನ್ನುವುದು ಇರುವುದಿಲ್ಲ, ಯಾಕೆಂದರೆ ಅದು ಕಲೆ. ಯಾವುದೇ ಕಲಾವಿದನಾಗಿ ತಾನೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳ ಬೇಕೆನ್ನುವುದು ಸಹಜ. ಮಾತೃ ಭಾಷೆಗಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಗುರುತಿಸಿಕೊಂಡವರ ಪಟ್ಟಿ ಏನೂ ಕಮ್ಮಿಯಿಲ್ಲ.

ಕಲಾವಿದರು ಬೇರೆ ಭಾಷೆಗಳಿಗೆ ವಲಸೆ ಹೋಗುವುದು ಅಥವಾ ಆಗೊಮ್ಮೆ ಈಗೊಮ್ಮೆ ನಟಿಸಿ ಬರುವುದಕ್ಕೆ ಕಾರಣ ವಿಭಿನ್ನ ಪಾತ್ರ ಇರಬಹುದು, ಅವಕಾಶ ವಂಚಿತರಿರಬಹುದು, ಸಂಭಾವನೆ ವಿಚಾರ ಇತ್ಯಾದಿ ಹಲವಾರು ಕಾರಣಗಳಿರಬಹುದು.

ಪ್ರತಿಭಾನ್ವಿತರ ದಂಡೇ ತುಂಬಿರುವ ಮಲಯಾಳಂ ಚಿತ್ರರಂಗದ ಹಲವಾರು ನಟಿಯರ ಆಮದು ಕನ್ನಡದಲ್ಲೂ ಆಗಿದೆ, ಕನ್ನಡ ಚಿತ್ರಗಳಲ್ಲಿ ನಟಿಸಿ ಇಲ್ಲೇ ನೆಲೆಸಿರುವ ಉದಾಹರಣೆಗಳೂ ಸಾಕಷ್ಟು.

ಕನ್ನಡದಲ್ಲಿ ನಟಿಸಿದ ಮಲಯಾಳಿ ಪ್ರಮುಖ ನಟಿಯರ ಪಟ್ಟಿ ಸ್ಲೈಡಿನಲ್ಲಿ..

ಮೀರಾ ಜಾಸ್ಮಿನ್

ಕೇರಳದ ತಿರುವಲ್ಲದಲ್ಲಿ ಜನಿಸಿದ ಮೀರಾ, ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದವರು. ಸೂತ್ರಧಾರನ್ ಎನ್ನುವ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೀರಾ, ಪುನೀತ್ ರಾಜಕುಮಾರ್ ಅವರ ಮೌರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟರು. ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಇವರ ಇತರ ಚಿತ್ರಗಳು. ಗ್ಯಾಲರಿ

ಭಾಮಾ

ಕೇರಳದ ಕೊಟ್ಟಾಯಂ ಬಳಿ ಜನಿಸಿದ ಭಾಮಾ ಕೈರಾಲಿ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ನಿವೇದ್ಯಂ ಎನ್ನುವ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಾಮಾ, ಮೊದಲಸಲ, ಶೈಲೂ, ಒಂದು ಕ್ಷಣದಲಿ, ಆಟೋರಾಜ ಚಿತ್ರದಲ್ಲಿ ನಟಿಸಿದ್ದಾರೆ. ಅಂಬರ, ಬರ್ಫಿ, ಅಪ್ಪಯ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಗ್ಯಾಲರಿ

ಪಾರ್ವತಿ ಮೆನನ್

ಪಾರ್ವತಿ ತಿರುವೋತ ಕೊಟ್ಟುವಾಟ ಆಲಿಯಾಸ್ ಪಾರ್ವತಿ ಮೆನನ್ ಜನಿಸಿದ್ದು ಕೋಜಿಕೋಡ್ ನಲ್ಲಿ. ಔಟ್ ಆಫ್ ಸಿಲ್ಲಬಸ್ ಎನ್ನುವ ಮಲಯಾಳಂ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಪಾರ್ವತಿ, ಮಿಲನ, ಮಳೆ ಬರಲಿ ಮಂಜು ಇರಲಿ, ಪೃಥ್ವಿ ಮತ್ತು ಅಂದರ್ ಬಾಹರ್ ಚಿತ್ರದಲ್ಲಿ ನಟಿಸಿದ್ದಾರೆ. ಗ್ಯಾಲರಿ

ಪ್ರಿಯಾಮಣಿ

ಪ್ರಿಯಾ ವಾಸುದೇವ ಮಣಿ ಅಯ್ಯರ್ ಆಲಿಯಾಸ್ ಪ್ರಿಯಾಮಣಿ ಜನಿಸಿದ್ದು ಪಾಲಕ್ಕಾಡ್ ನಲ್ಲಿ, ಬೆಳಿದಿದ್ದು ಬೆಂಗಳೂರಿನಲ್ಲಿ. ಎವರೇ ಆಟಗಾಡು ಎನ್ನುವ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಪ್ರಿಯಾಮಣಿ, ಪುನೀತ್ ರಾಜಕುಮಾರ್ ಅಭಿನಯದ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಏನೋ ಒಂಥರಾ, ಓನ್ಲಿ ವಿಷ್ಣುವರ್ಧನ, ಕೋ..ಕೋ, ಅಣ್ಣಾಬಾಂಡ್, ಚಾರುಲತ, ಲಕ್ಷ್ಮಿ ಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಯಾಲರಿ

ನಯನತಾರ

ಡಯನಾ ಮರಿಯನ್ ಕುರಿಯನ್ ಆಲಿಯಾಸ್ ನಯನತಾರ ಜನಿಸಿದ್ದು ಬೆಂಗಳೂರಿನಲ್ಲಿ. ಮನಸಿನಕ್ಕರೆ ಎನ್ನುವ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಯನತಾರ ಇದುವರೆಗೆ ನಟಿಸಿದ ಕನ್ನಡ ಚಿತ್ರವೆಂದರೆ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ. ಗ್ಯಾಲರಿ

ನವ್ಯಾ ನಾಯರ್

ಧನ್ಯಾ ನಾಯರ್ ಆಲಿಯಾಸ್ ನವ್ಯಾ ನಾಯರ್ ಜನಿಸಿದ್ದು ಅಲೆಪ್ಪಿಯಲ್ಲಿ. ಇಷ್ಟಂ ಎನ್ನುವ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ನವ್ಯಾ ಗಜ, ನಂ ಯಜಮಾನ್ರು, ಭಾಗ್ಯದ ಬಳೆಗಾರ, ಬಾಸ್ ಚಿತ್ರದಲ್ಲಿ ನಟಿಸಿದ್ದಾರೆ. ಗ್ಯಾಲರಿ

ಭಾವನಾ

ಕಾರ್ತಿಕಾ ಮೆನನ್ ಆಲಿಯಾಸ್ ಭಾವನಾ ಜನಿಸಿದ್ದು ತ್ರಿಸೂರಿನಲ್ಲಿ. ನಮ್ಮೈ ಎನ್ನುವ ಮಲಯಾಳಂ ಚಿತ್ರದಲ್ಲಿ ನಟಿಸಿದ ಭಾವನಾ, ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟರು. ಓನ್ಲಿ ವಿಷ್ಣುವರ್ಧನ, ರೋಮಿಯೋ, ಯಾರೇ ಕೂಗಾಡಾಲಿ, ಟೋಪಿವಾಲ, ಬಚ್ಚನ್ ಚಿತ್ರದಲ್ಲಿ ನಟಿಸಿದ್ದಾರೆ. ಗ್ಯಾಲರಿ

ಶಿಲ್ಪಾ

ಚಿಪ್ಪಿ ಆಲಿಯಾಸ್ ಶಿಲ್ಪಾ ಜನಿಸಿದ್ದು ಕೇರಳದಲ್ಲಿ. ಪದೆಯಂ ಎನ್ನುವ ಮಲಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿಲ್ಪಾಗೆ ಹೆಸರು ತಂದು ಕೊಟ್ಟ ಚಿತ್ರ ಜನುಮದ ಜೋಡಿ. ಮುದ್ದಿನ ಕಣ್ಮಣಿ, ಮುಂಗಾರಿನ ಮಿಂಚು, ಚಿಕ್ಕ, ಅರುಣೋದಯ, ಭೂಮಿ ತಾಯಿಯ ಚೊಚ್ಚಲ ಮಗ, ಸುವ್ವಿ ಸುವ್ವಾಲಿ, ಲಕ್ಷ್ಮಿ ಮಹಾಲಕ್ಷ್ಮಿ, ವಿಮೋಚನೆ, ಖಡಗ, ಕಲ್ಯಾಣಿ ಚಿತ್ರದಲ್ಲಿ. ಗ್ಯಾಲರಿ

ನಿತ್ಯಾ ಮೆನನ್

ಮಲಯಾಳಂ ಕುಟುಂಬಕ್ಕೆ ಜನಿಸಿದ ನಿತ್ಯಾ ಮೆನನ್ ಹುಟ್ಟಿದ್ದು ಬೆಂಗಳೂರಿನಲ್ಲಿ ಸ್ವಂತ ಊರು ಕಾಲಿಕಟ್. ಸೆವನ್ ಓ ಕ್ಲಾಕ್ ಕನ್ನಡ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟ ನಿತ್ಯಾ ಮೆನನ್ ಜೋಷ್, ಐದ್ಲೊಂದ ಐದು, ಮೈನಾ ಚಿತ್ರದಲ್ಲಿ ನಟಿಸಿದ್ದಾರೆ. ಈಕೆ ಗಾಯಕಿ ಕೂಡಾ. ಗ್ಯಾಲರಿ

ಮಮತಾ ಮೋಹನದಾಸ್

ಮಲಯಾಳಂ ಕುಟುಂಬಕ್ಕೆ ಜನಿಸಿದ ಮಮತಾ ಹುಟ್ಟಿದ್ದು ಬಹ್ರೈನ್ ನಲ್ಲಿ. ಮಯೂಕಂ ಎನ್ನುವ ಮಲಯಾಳಂ ಚಿತ್ರದ ಮೂಲಕ ಚಿತ್ರಲೋಕಕ್ಕೆ ಕಾಲಿಟ್ಟ ಮಮತಾ ಕನ್ನಡದಲ್ಲಿ ನಟಿಸಿದ್ದು ಒಂದೇ ಚಿತ್ರದಲ್ಲಿ. ಅದು ಕಿಚ್ಚ ಸುದೀಪ್ ಅಭಿಯನಯದ ಗೂಳಿ ಚಿತ್ರದಲ್ಲಿ. ಗ್ಯಾಲರಿ

ಶೋಭನಾ

ಶೋಭನಾ ಚಂದ್ರಕುಮಾರ್ ಪಿಳ್ಳೈ ಆಲಿಯಾಸ್ ಶೋಭನಾ ಜನಿಸಿದ್ದು ತಿರುವನಂತಪುರಂ ನಲ್ಲಿ. ಭಕ್ತ ಧ್ರುವ ಮಾರ್ಕಾಂಡೇಯ ಎನ್ನುವ ಮಲಯಾಳಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಶೋಭನಾ ಗಿರಿಬಾಲೆ ಮತ್ತು ಶಿವಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ.

ಸಿಂಧು ಮೆನನ್

ಮಲಯಾಳಂ ಕುಟುಂಬಕ್ಕೆ ಜನಿಸಿದ ಸಿಂಧು ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನಲ್ಲಿ. ರಷ್ಮಿ ಎನ್ನುವ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಿಂಧು, ಯಾರೇ ನೀ ಹುಡುಗಿ, ಧರ್ಮ, ಖುಷಿ, ನಂದಿ ಮುಂತಾದ ಚಿತ್ರದಲ್ಲಿ ನಟಿಸಿದ್ದಾರೆ. ಗ್ಯಾಲರಿ

ಕಾರ್ತಿಕಾ ನಾಯರ್

ಖ್ಯಾತ ನಟಿ ರಾಧಾ ಪುತ್ರಿಯಾಗಿರುವ ಕಾರ್ತಿಕಾ ನಾಯರ್ ಜೋಷ್ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟರು. ದರ್ಶನ್ ಅಭಿನಯದ ಬೃಂದಾವನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಗ್ಯಾಲರಿ

English summary
List of Malayalam actresses acted in Kannada movies. 
Please Wait while comments are loading...