Just In
Don't Miss!
- News
ಶೌರ್ಯ ಪ್ರಶಸ್ತಿಗೆ ಚಿಕ್ಕಾಸೂ ಬೆಲೆ ನೀಡದ ಕೇರಳ ಸರಕಾರ; ವೃದ್ಧೆಯ ದಶಕಗಳ ಹೋರಾಟ
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿತ್ಯಾ ಮೆನನ್ ಬ್ಯಾನ್ ಮಾಡುವುದಾಗಿ ನಿರ್ಮಾಪಕರ ಬೆದರಿಕೆ: ಕಾರಣ ಏನು?
ಕನ್ನಡದ ನಟಿ ನಿತ್ಯಾ ಮೆನನ್ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಿತ್ಯಾ ಈಗ ವಿವಾದದ ಮೂಲಕ ಸುದ್ದಿಯಾಗಿದ್ದಾರೆ. ಈ ವಿವಾದ ಈಗ ನಿತ್ಯಾ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರಕ್ಕೆ ಬಂದಿದೆಯಂತೆ ಮಾಲಿವುಡ್ ಇಂಡಸ್ಟ್ರಿ.
'ಜೋಷ್' ಸಿನಿಮಾ ಮೂಲಕ ಕನ್ನಡ ಚಿತ್ರಪ್ರಿಯರಿಗೆ ಚಿರಪರಿಚಿತರಾದ ನಿತ್ಯಾ ಕೊನೆಯದಾಗಿ ಕನ್ನಡದಲ್ಲಿ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬೆರಳೆಣಿಕೆಯ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಿತ್ಯಾ ಟಾಲಿವುಡ್ ಮತ್ತು ಮಾಲಿವುಡ್ ನಲ್ಲಿ ಸಖತ್ ಬ್ಯುಸಿ.
'ಮಹಾನಟಿ' ಸಿನಿಮಾ ಆಫರ್ ಮೊದಲು ಹೋಗಿದ್ದು ನಿತ್ಯಾ ಮೆನನ್ ಬಳಿಗೆ!
ಸದ್ಯ ಮಲಯಾಳಂ ಚಿತ್ರರಂಗದಲ್ಲಿ ನಿತ್ಯಾ ಮೆನನ್ ಬ್ಯಾನ್ ಮಾಡುವ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಮಾಲಿವುಡ್ ನಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿದ್ದ ನಿತ್ಯಾ ಮೆನನ್ ಅವರನ್ನು ದಿಢೀರನೆ ಬ್ಯಾನ್ ಮಾಡುವ ನಿರ್ಧಾರ ಕೈಕೊಂಡಿದ್ದೇಕೆ? ನಿತ್ಯಾ ಹೇಳಿದ ಶಾಕಿಂಗ್ ಸುದ್ದಿ ಏನು?ಮುಂದೆ ಓದಿ..

ಸರಿಯಾಗಿ ಚಿತ್ರೀಕರಣಕ್ಕೆ ಬರಲ್ಲ ಎನ್ನುವ ಆರೋಪ
ನಿತ್ಯಾ ಮೆನನ್ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ ನಿತ್ಯಾ. ಆದ್ರೆ ಮಲಯಾಳಂನಲ್ಲಿ ಅಭಿನಯಿಸುತ್ತಿರುವ ಚಿತ್ರದ ಚಿತ್ರೀಕರಣಕ್ಕೆ ಸರಿಯಾಗಿ ಬರುತ್ತಿಲ್ಲ, ನಿತ್ಯಾ ಆಟಿಟ್ಯೂಡ್ ತೋರಿಸುತ್ತಿದ್ದಾರೆ, ಅಹಂಕಾರಿ ನಿತ್ಯಾ, ಎಂದು ನಿತ್ಯಾ ವಿರುದ್ಧ ಮಲಯಾಳಂನ ಕೆಲವು ಚಿತ್ರ ನಿರ್ಮಾಪಕರು ದೊಡ್ಡ ಆರೋಪ ಮಾಡಿದ್ದಾರೆ.
ಅಭಿಮಾನಿಗಳಿಗೆ 'ಪ್ರಾಣ' ನೀಡಲು ಬಂದ ನಿತ್ಯಾ ಮೆನನ್

ಮಲಯಾಳಂ ಚಿತ್ರರಂಗದಿಂದ ನಿತ್ಯಾ ಬ್ಯಾನ್?
ನಿತ್ಯಾ ಮೆನನ್ ಸರಿಯಾಗಿ ಚಿತ್ರೀಕರಣಕ್ಕೆ ಬರುತ್ತಿಲ್ಲ. ಫೋನ್ ಮಾಡಿದ್ರೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನುವುದು ನಿರ್ಮಾಪಕರ ದೂರು. ಅಲ್ಲದೆ ಒಂದಿಷ್ಟು ನಿರ್ಮಾಪಕರು ನಿತ್ಯಾ ಅವರನ್ನು ಭೇಟಿ ಮಾಡಲು ಹೋಗಿದ್ದಾರಂತೆ. ಆದ್ರೆ ಯಾವುದೆ ಸೂಚನೆ ನೀಡದೆ ದಿಢೀರನೆ ಭೇಟಿ ಮಾಡಲು ಬಂದ ನಿರ್ಮಾಪಕರ ಜೊತೆ ಮಾತನಾಡದೆ ನಿತ್ಯಾ ವಾಪಸ್ ಕಳುಹಿಸಿದ್ದಾರಂತೆ. ಇದರಿಂದ ಸಿಟ್ಟಿಗೆದ್ದ ನಿರ್ಮಾಪಕರು ನಿತ್ಯಾ ಅವರನ್ನು ಮಲಯಾಳಂ ಇಂಡಸ್ಟ್ರಿಯಿಂದ ಬ್ಯಾನ್ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದಾರಂತೆ.

ಅಮ್ಮನಿಗೆ ಕ್ಯಾನ್ಸರ್ ಇದೆ ಅರ್ಥಮಾಡಿಕೊಳ್ಳಿ
ಸಂದರ್ಶನ ಒಂದರಲ್ಲಿ ಮಾತನಾಡಿದ ನಿತ್ಯಾ, ಚಿತ್ರೀಕರಣಕ್ಕೆ ಹಾಜರಾಗದೆ ಇರಲು ಕಾರಣವನ್ನು ಬಹಿರಂಗ ಮಾಡಿದ್ದಾರೆ. ನಿತ್ಯಾ ಮಾತುಕೇಳಿ ಚಿತ್ರಾಭಿಮಾನಿಗಳು ಶಾಕ್ ಆಗಿದ್ದಾರೆ. ನಿತ್ಯಾ ಮೆನನ್ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರಂತೆ. ಈ ಸಮಯದಲ್ಲಿ ಅಮ್ಮನ ಆರೈಕೆ ತುಂಬಾ ಮುಖ್ಯ. ಇದರಿಂದ ಚಿತ್ರೀಕರಣದಲ್ಲಿ ಭಾಗಿಯಾಗಲು ಸಾದ್ಯವಾಗುತ್ತಿಲ್ಲ. ಈಗಾಗಲೆ ಕ್ಯಾನ್ಸರ್ ಮೂರನೆ ಹಂತದಲ್ಲಿದೆಯಂತೆ. ಇದನ್ನ ಹೇಳಿದ್ರೆ ಅರ್ಥವಾಗುತ್ತಿಲ್ಲ, ಚಿತ್ರೀಕರಣಕ್ಕೆ ಹೋದರು ಕ್ಯಾರವ್ಯಾನ್ ನಲ್ಲಿ ಕುಳಿತು ಅಳುತ್ತಿರುತ್ತಾರಂತೆ.
ರಾಜಮೌಳಿ 'ಆರ್ ಆರ್ ಆರ್' ಸಿನಿಮಾದಲ್ಲಿ ನಿತ್ಯಾ ಮೆನನ್

ಯಾರ ಜೊತೆಯು ಮಾತನಾಡಲು ಸಾದ್ಯವಾಗುತ್ತಿಲ್ಲ
ನಿತ್ಯಾ ಮೆನನ್ ಈಗಿರುವ ಸ್ಥಿತಿಯಲ್ಲಿ ಯಾರ ಜೊತೆಯು ಮಾತನಾಡಲು ಸಾದ್ಯವಾಗುತ್ತಿಲ್ಲವಂತೆ. ಅಲ್ಲದೆ ಕೋಟಿಗೊಬ್ಬನ ನಾಯಕಿ ಮೈಗ್ರೇನ್ ನಿಂದ ಬಳಲುತ್ತಿದ್ದಾರಂತೆ. ಆರೋಗ್ಯ ಸರಿ ಇಲ್ಲದ ಕಾರಣ ಯಾರ ಜೊತೆಯು ಮಾತಡಾತ್ತಿಲ್ಲವಂತೆ. ಇದರಿಂದ ಚಿತ್ರೀಕರಣಕ್ಕೆ ಬರುತ್ತಿಲ್ಲ ಎಂದು ನಿತ್ಯಾ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಮಲಯಾಳಂನ ಕೆಲವು ನಿರ್ಮಾಪಕರ ವಿರುದ್ಧ ಗರಂ ಆಗಿದ್ದಾರೆ ನಿತ್ಯಾ. ಅಲ್ಲದೆ ಮಲಯಾಳಂ ಇಂಡಸ್ಟ್ರಿಯಿಂದ ಬ್ಯಾನ್ ಮಾಡುವ ಬಗ್ಗೆಯು ತಲೆಕೆಡಿಸಿಕೊಳ್ಳದೆ ತನ್ನ ಕೆಲಸದ ಕಡೆ ಗಮನ ಹರಿಸುವುದಾಗಿ ಹೇಳಿದ್ದಾರೆ.