For Quick Alerts
  ALLOW NOTIFICATIONS  
  For Daily Alerts

  ನಟ ಮಂಡ್ಯ ರಮೇಶ್ ತಂದೆ ರಂಗಕರ್ಮಿ ಎನ್.ಸುಬ್ರಹ್ಮಣ್ಯಂ ನಿಧನ

  |

  ಸ್ಯಾಂಡಲ್ ವುಡ್ ನಟ ಮಂಡ್ಯ ರಮೇಶ್ ತಂದೆ ಹಿರಿಯ ರಂಗಕರ್ಮಿ ಎನ್.ಸುಬ್ರಹ್ಮಣ್ಯಂ ನಿಧನರಾಗಿಗ್ದಾರೆ. 90 ವರ್ಷದ ಎನ್.ಸುಬ್ರಹ್ಮಣ್ಯಂ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಎನ್.ಸುಬ್ರಹ್ಮಣ್ಯಂ ಅವರಿಗೆ ಮಂಡ್ಯ ರಮೇಶ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಒಬ್ಬರು ಪುತ್ರಿ ಇದ್ದಾರೆ.

  ಇವರ ಅಂತ್ಯಕ್ರಿಯೆ ಇಂದು ಸಂಜೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ನೆರವೇರಿತು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರಾದ ಎನ್ ಸುಬ್ರಹ್ಮಣ್ಯಂ ಅವರು ಮೊದಲು ಉಪ ನೋಂದಣಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು, ಬೆಳ್ಳೂರು ಸೇರಿದಂತೆ ಅನೇಕ ಕಡೆ ಕಾರ್ಯ ನಿರ್ವಹಿಸಿದ್ದಾರೆ.

  ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸಿ ವೇದಿಕೆ ಏರಿ ನಾಟಕ ಮಾಡಿದ್ರು ಮಂಡ್ಯ ರಮೇಶ್ ಪತ್ನಿ!ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸಿ ವೇದಿಕೆ ಏರಿ ನಾಟಕ ಮಾಡಿದ್ರು ಮಂಡ್ಯ ರಮೇಶ್ ಪತ್ನಿ!

  ಸುಮಾರು 40 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿ ಕೊನೆಗೆ ಉಪನೋಂದಣಿ ಅಧಿಕಾರಿಯಾಗಿ ನಿವೃತ್ತರಾದು. ನಿವೃತ್ತಿಯ ಬಳಿಕ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ನಟನ ಸಂಸ್ಥೆಯ ಅಧ್ಯಕ್ಷರಾಗಿ ಆರಂಭದಿಂದಲೂ ಕಾರ್ಯ ನಿರ್ವಹಿಸುತ್ತಿದ್ದರು. 'ನನ್ನ ಜೀವನ ಕೈಗನ್ನಡಿ' ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

  ನಮ್ಮನ್ನೆಲ್ಲ ಒಂದು ಫ್ಯಾಮಿಲಿ ಮಾಡಿದ್ದು ರವಿ ಬೆಳಗೆರೆ ಎಂದ ಶೈನ್ ಶೆಟ್ಟಿ | Filmibeat Kannada

  ಮೈಸೂರಿನಲ್ಲಿ ಪುತ್ರ ಮಂಡ್ಯ ರಮೇಶ್ ನಟನ ರಂಗಮಂದಿರ ನಿರ್ಮಿಸಿದ ನಂತರ ರಂಗಮಂದಿರದ ಅಧ್ಯಕ್ಷರಾಗಿ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇಳಿವಯಸ್ಸಿನಲ್ಲೂ ನಾಟಕ ಕುರಿತ ಚರ್ಚೆ ಮತ್ತು ವಿಮರ್ಶೆಗಳಲ್ಲಿ ಪಾಲ್ಗೋಳ್ಳುತ್ತಿದ್ದರು.

  English summary
  Kannada Actor Mandya Ramesh Father N Subramanyam passes away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X