For Quick Alerts
  ALLOW NOTIFICATIONS  
  For Daily Alerts

  ಮಣಿರತ್ನಂ - ಸುಹಾಸಿನಿ ದಂಪತಿಗೆ ಈ ದಿನ ಮರೆಯಲಾಗದ ಸುದಿನ

  By Naveen
  |

  ಭಾರತ ಚಿತ್ರರಂಗ ಕಂಡ ಹೆಮ್ಮೆಯ ನಿರ್ದೇಶಕ ಮಣಿರತ್ನಂ ವೈಯಕ್ತಿಯ ಜೀವನದಲ್ಲಿ ಇಂದು ಮರೆಯಲಾಗದ ದಿನ. ಯಾಕೆಂದರೆ, ಇಂದು ಮಣಿರತ್ನಂ ತಮ್ಮ ಕನಸಿನ ರಾಣಿ ಸುಹಾಸಿನಿ ಅವರನ್ನು ಕೈ ಹಿಡಿದ ದಿನ.

  1988 ಆಗಸ್ಟ್ 26 ರಂದು ಮಣಿರತ್ನಂ ಹಾಗೂ ಸುಹಾಸಿನಿಯವರ ವಿವಾಹ ನಡೆದಿತ್ತು. ಚಿತ್ರರಂಗಕ್ಕೆ ಬಂದ ಎಂಟು ವರ್ಷಗಳ ನಂತರ ಸುಹಾಸಿನಿ ಮಣಿರತ್ನಂ ಅವರ ಬಾಳ ಸಂಗಾತಿ ಆದರು. ಅಂದಹಾಗೆ, ಅವರಿಗೆ ನಂದನ್ 26 ವರ್ಷದ ಒಬ್ಬ ಮಗ ಇದ್ದಾರೆ.

  ಇನ್ನು ತಮ್ಮ ವಿವಾಹ ವಾರ್ಷಿಕೋತ್ಸವದ ಸಿಹಿ ಸುದ್ದಿಯನ್ನು ಸುಹಾಸಿನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಣಿರತ್ನಂ ಹಾಗೂ ತಮ್ಮ ಫೋಟೋ ಹಾಕಿ ತಮ್ಮ ಪತಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

  ಮಣಿರತ್ನಂ ಹಾಗೂ ಸುಹಾಸಿನಿ ಇಬ್ಬರು ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಮಣಿರತ್ನಂ ಒಬ್ಬ ಶ್ರೇಷ್ಠ ನಿರ್ದೇಶಕನಾಗಿ ಅನೇಕ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ಇತ್ತ ಸುಹಾಸಿನಿ ಕೂಡ ತಾವು ಎಂತಹ ನಟಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

  English summary
  Director Mani Ratnam and Actress Suhasini celebrating 30th wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X